ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಮನಸ್ಸು
ಮನವಂಚನೆಯೆ ಅನ್ಯಲಿಂಗಾರ್ಚನೆ;
ಅದು ನಿಜವಲ್ಲ, ನಿಜವಲ್ಲಾ;
ಕೂಡಲಸಂಗಮದೇವನು
ಮನದಂತರ್ಯಾಮಿ ತಾನಾಗಿ.
Transliteration Manavan̄caneye an'yaliṅgārcane;
adu nijavalla, nijavalla;
kūḍalasaṅgamadēvanu
manadantaryāmi tānāgi.
Manuscript
English Translation 2 To worship other gods
Is rank betrayal of your heart:
It is not right, not right!
Because within that heart
Lord Kūḍala Saṅgama dwells.
Translated by: L M A Menezes, S M Angadi
Hindi Translation लिंगार्चन से भिन्न अर्चन मन की वंचना है
वह सत्य नहीं, सत्य नहीं
कूडलसंगमदेव मन के अंतर्यामी जो है ॥
Translated by: Banakara K Gowdappa
Telugu Translation మనోవంచనము; పరలింగార్చనమది
నిజముకాదు నిజముకాదు!
కూడల సంగమదేవుడు మదియంతర్యామిjైు యుండెనయ్యా.
Translated by: Dr. Badala Ramaiah
Tamil Translation வேறு இலிங்கத்தை அர்ச்சிப்பது மனவஞ்சனை
அது உண்மையன்று, உண்மையன்று
கூடல சங்கமதேவன் மனத்தினுள்ளே உறைபவனன்றோ!
Translated by: Smt. Kalyani Venkataraman, Chennai
Marathi Translation
मनाची वंचना अन्यलिंगार्चना आहे.
खरे नाही, खरे नाही.
कूडलसंगमदेवाचा निवास मनातच आहे
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮನದಲ್ಲಿ ಶಿವನಿರುವನಾಗಿ ಆ ಮನದಲ್ಲಿ ವಂಚನೆ ಮಾಡಬಾರದೆಂಬ ಈ ವಚನದ ಅಭಿಪ್ರಾಯ ಅದ್ಭುತವಾದುದಾದರೂ ಅದಕ್ಕೆ ತಕ್ಕ ಉಕ್ತಿಯಿಲ್ಲ. ಮುಖ್ಯವಾಗಿ “ಅನ್ಯಲಿಂಗಾರ್ಚನೆ” ಎಂಬ ಪ್ರಯೋಗ ತೀರ ಅಸಂಬದ್ಧವಾಗಿದೆ. ಈ “ಅನ್ಯಲಿಂಗಾರ್ಚನೆ”ಗೆ ವ್ಯಾಖ್ಯಾನಕಾರನೊಬ್ಬ ಅನ್ಯದೇವತಾರ್ಚನೆ ಎಂದು ಅರ್ಥ ಮಾಡಿರುವನು. ಅನ್ಯಲಿಂಗಕಲ್ಪನೆ ಬಸವೋತ್ತರ ಕಾಲದ್ದು, ಇದು ಬಸವಣ್ಣನವರ ನಿಜವಚನವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು