ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಮನಸ್ಸು
ಸರ್ಪನ ಸಂಯೋಗ, ಜ್ಯೋತಿಯ ಪತಂಗನ ಬೆಸನದಂತೆ-
ಮನದ ಮದವರಿಯದೆ ನಿಮ್ಮ ಕೃಪೆಯಿಂದೆ ನಿಮ್ಮ ನೆನೆವೆ.
ಎನ್ನ ಭಾವದ ಕೊನೆಯ-ಮೊನೆಯ ಮೇಲೆ
ಮನೆಯ ಮಾಡಿಕೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಾ,
ನೀನೆನ್ನ ಪ್ರಾಣನಾಥನಾಗಿ.
Transliteration Sarpana sanyōga, jyōtiya pataṅgana besanadante-
manada madavariyade nim'ma kr̥peyinde nim'ma neneve.
Enna bhāvada koneya-moneya mēle
maneya māḍikoṇḍippeyayya, kūḍalasaṅgamadēvā,
nīnenna prāṇanāthanāgi.
Manuscript
English Translation 2 Like befriending a snake,
Like a moth yearning for the light-
Unaware of the mind's mind, by Thine own grace,
Do I remember Thee.
O Kūḍala Saṅgama Lord, upon
The sharpest summit of my mind
Thou'st set up Thy abode,
Because Thou art my being's lord.
Translated by: L M A Menezes, S M Angadi
Hindi Translation सर्प संयोग ज्योति और पतंग के व्यसन सा
मैं मन का मद न जान,
तव कृपा से तव स्मरण करता हूँ ।
मेरे भावनाग्र पर तुम मेरे प्राणनाथ बने
घर बनाकर रहते हो कूडलसंगमदेव॥
Translated by: Banakara K Gowdappa
Telugu Translation సర్పసంపర్కము జ్యోతిపతంగములు కలసినట్లే
మనసు మదము తెలియక నీ కృపతో
నిను తలతు; మన్మనో శిఖరాగ్రంబుపై మత్ప్రాణ ప్రభువై
‘‘నెలకుని యుండుమయ్యా కూడల సంగమదేవా!
Translated by: Dr. Badala Ramaiah
Tamil Translation பிணைந்த அரவனைய ஒளியை
நாடிவரும் விட்டில் பூச்சியனைய
மனத்திலே செருக்கின்றி, உம் அருளால்
உம்மை நினைவேன் ஐயனே, என் மனத்தின்
இறுதி முனையின்மீது, தங்குவாய் ஐயனே
கூடல சங்கமதேவனே, நீ என் உயிரின் உடையனன்றோ
Translated by: Smt. Kalyani Venkataraman, Chennai
Marathi Translation
सर्पाचा संयोग, ज्योती पतंग मिलना सम
मनाचा अहंकार न जाणल्याने तुमच्या कृपेने तुमचे स्मरण करतो.
माझ्या भावाच्या शेवटच्या टोकाला घर करुन राहिला.
कूडलसंगमदेवा, तुम्हीच माझे प्राणनाथ आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಂದರಲ್ಲಿ ಒಂದು ಹೆಣೆದುಕೊಂಡ ಸರ್ಪಮಿಥುನದಂತೆ ಬಿಗುವಿಡಿದು, ದೀಪದ ಕುಡಿಗೆ ಮುಂಚುವ ಪತಂಗದಂತೆ ವ್ಯಾಮೋಹಗೊಂಡು –ಕಿಂಚಿತ್ತಾದರೂ ಮದವಿಲ್ಲದ -ನೀವು ಕೃಪೆಯಿಂದ ಕೊಟ್ಟ ಮನದಲ್ಲಿ ನಿಮ್ಮನ್ನು ನೆನೆಯುತ್ತಿದ್ದೇನೆ. ಮತ್ತು ಊರ್ಧ್ವಕುಂಡಲಿನಿಯ ಉದ್ದಕ್ಕೂ ನನ್ನ ಪ್ರಾಣ ಉಡ್ಡಯನ ಹೊರಟು –ಆ ಸುಷುಮ್ನೆಯ ತುತ್ತ ತುದಿಯ ಸಹಸ್ರಾರದಲ್ಲಿ ಉರಿಯುವ ಪರಂಜ್ಯೋತಿಸ್ವರೂಪಿಯಾದ ನಿನ್ನನ್ನು ಮುತ್ತಿಟ್ಟು ಅದು ನಿರ್ವಾಣವಾಗಲಿ -ನೀನೇ ನನ್ನ ಪ್ರಾಣನಾಥ.
ಸರ್ಪಸಂಬಂಧ ಕೀಟಜ್ಯೋತಿಯ ಪ್ರತಿಮೆಗಳ ಮೂಲಕ ಅತ್ಯಂತ ರಹಸ್ಯವಾದ ಯೌಗಿಕ ಸಮಾಧಿಯ ನಿರ್ವಿಕಲ್ಪ ಅನುಭವವನ್ನು ಬಸವಣ್ಣನವರು ಅರಿಕೆ ಮಾಡಿಕೊಂಡಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು