•  
  •  
  •  
  •  
Index   ವಚನ - 815    Search  
 
ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಮನಸ್ಸು
ಪಶ್ಚಿಮ ಪದ್ಮಾಸನದಲ್ಲಿ ಕುಳಿತು ನಿಟ್ಟೆಲುವ ಮುರಿದು ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ ! ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ , ಕಟ್ಟು ಗುಡಿಯ ಕೂಡಲಸಂಗಮದೇವ ಹಿಡಿವಡೆದ!
Transliteration Paścimapadmāsanadalli kuḷitu niṭṭeluva muridu tuṭi miḍukade aṭṭeyāḍittallā! Biṭṭa kaṇṇu bigida hubbu, brahmarandhradalli, kaṭṭu guḍiya kūḍalasaṅgamadēva hiḍivaḍeda!
Manuscript
English Translation 2 Sitting in the western lotus pose And softening the spinal cord, With moveless lips went on the battle Where eyes were wide open And puckered were the brows, Lord Kūḍala Saṅgama seized in Brahmarandra! Erect the temple there! Translated by: L M A Menezes, S M Angadi
Hindi Translation पश्चिम-पद्मासन में आसीन हो रीढ मोडने पर आधार निस्पंद होते हैं, मुंड हिलता है, तब खुले नेत्रों और तनी भृकुटियों के मध्य ब्रह्मरंध्र में मंदिर बनाओ, कूडलसंगमदेव स्वयं बंधन में पडेंगे॥ Translated by: Banakara K Gowdappa
Telugu Translation పశ్చిమ పద్మాసనమున కూర్చొని; వెన్నెముక విఱుగ; పెదవి కదలక మొండె మదరగ; కనువిప్పి బొమలు బిగియ; బ్రహ్మ రంధ్రముపై కట్టు గుడిని సంగమ దేవుదు బట్టుకొనియె? Translated by: Dr. Badala Ramaiah
Tamil Translation பத்தபத்மாசனத்தில் அமர்ந்து முதுகுத் தண்டை நிமிர்த்தி உதடு அசையாது இயல்பான பிராணாயாமமாயிற்று கண்கள் மேல்முகமாகி விளங்கும் புருவத்துடன் பிரம்மரந்திரத்தில் கோயிலைக் கட்டுவாய் அங்கு கூடல சங்கமதேவனைப் பிணைக்கலாம். Translated by: Smt. Kalyani Venkataraman, Chennai
Marathi Translation पश्चिम पद्मासन घालून मेरुदंडाला वश करण्यासाठी ओठ न हलविता संघर्ष करीत आहेत. अनिमिष दृष्टी, ताणलेल्या भुवया, ब्रह्मरंध्रात मंदिर बांधून राहिल्याने, कूडलसंगमदेवाला तेथे प्रत्यक्ष झाले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯುದ್ಧಕ್ರಿಯೆಯೊಂದರ ಪರಿಭಾಷೆಯಲ್ಲಿ ಯೋಗಕ್ರಿಯೆಯನ್ನು ಬಿಂಬಿಸುತ್ತಿರುವರು ಬಸವಣ್ಣನವರು ಈ ವಚನದಲ್ಲಿ. ಯೋಧನು ಒಂದು ವಿಶಿಷ್ಟ ಭಂಗಿಯಲ್ಲಿ ನೆಟ್ಟಗೆ ಕುಳಿತು ಶರಸಂಧಾನ ಮಾಡುವನು. ಆಗ ಅವನು ತುಟಿಬಿಚ್ಚಿ ಸಿಂಹನಾದ ಮಾಡದೇ ಇದ್ದರೂ ಅವನ ಬಿಲ್ಲಿಂದ ಜಿಗಿದ ಬಾಣಕ್ಕೆ ಪ್ರತಿಯೋಧನು ತಲ್ಲಣಿಸಿ ಹಿಮ್ಮೆಟ್ಟುವನು. ಆ ಯೋಧನಾದರೋ ಬಿಟ್ಟ ಕಣ್ಣು ಮತ್ತು ಬಿಗಿದ ಹುಬ್ಬಿನ ಆ ವೀರಮುದ್ರೆಯಲ್ಲೇ ಪ್ರತಿಯೋಧನನ್ನು ಬೆನ್ನಟ್ಟಿ, ಅವನ ರಾಜಧಾನಿಯನ್ನು ಮುತ್ತಿ ಆ ರಾಜನನ್ನೇ ಸೆರೆಹಿಡಿಯುವನು –ವಿಜಯಪತಾಕೆಯನ್ನು ನೆಡುವನು. ಪದ್ಮಾಸನದಲ್ಲಿ ಬೆನ್ನು ಬಾಗಿಸದೆ ನೆಟ್ಟಗೆ ಕುಳಿತು, ತುಟಿಗಳನ್ನು ಅಲುಗಿಸದೆ ಮಾನಸವಾಗಿಯೇ ಪಂಚಾಕ್ಷರೀಮಂತ್ರವನ್ನು ಜಪಿಸುತ್ತ–ಎರಡೂ ದೃಷ್ಟಿಯನ್ನು ಹುಬ್ಬುಗಳ ಮಧ್ಯೆ ಕೇಂದ್ರೀಕರಿಸಿ-ಅಲ್ಲಿಂದ ಪಶ್ಚಿಮ (ತಲೆಯ ಹಿಂಬದಿಯ) ಮಾರ್ಗವಾಗಿ ನುಸುಳಿ ಬ್ರಹ್ಮನಾಡಿಯೆನಿಸುವ ಸುಷುಮ್ನೆಯ ತುದಿಯ ಸಹಸ್ರಾರದ ಪರಶಿವತೇಜದಲ್ಲಿ ಮಿಂದು –ರೋಮಾಂಚನಗೊಂಡುದೂ ಪ್ರಜ್ಞೆಯಿಲ್ಲದಂತೆ –ಅಲ್ಲಿ ಒಂದಾಗುವನು. ಈ ಪರಮಾನಂದ ಸ್ಥಿತಿಯನ್ನೇ –“ಬಿಚ್ಚಿ ಬೇರೆದೋರದಂತೆ ಶಂಭುಲಿಂಗವನಪ್ಪಿ| ಎಚ್ಚರಡಗಿದಚ್ಚ ಪರವಶದೊಳು ನಿಂದೆನು” ಎಂದು ವರ್ಣಿಸಿರುವರು ನಿಜಗುಣ ಶಿವಯೋಗಿ. ವಿ : (1) ಎರಡೂ ದೃಷ್ಟಿಯನ್ನು ಹುಬ್ಬುಗಳ ನಡುವೆ ನಿಲ್ಲಿಸುವುದನ್ನು ಯೋಗಶಾಸ್ತ್ರದಲ್ಲಿ ಶಾಂಭವೀ ಮುದ್ರೆಯೆಂದು ಕರೆಯಲಾಗಿದೆ. ಈ ಮುದ್ರಾ ಸಂದರ್ಭದಲ್ಲಿಯೇ ಯೋಗಿಯಾದವನು ಪ್ರಾಣವನ್ನು ಸಹಾಸ್ರಾರಕ್ಕೆ ಏರಿಸಬೇಕಾಗುವುದು. ಇದು ಅಪಾಯಕಾರಿಯಾದರೂ-ಪ್ರಾಣಶಕ್ತಿಯನ್ನು ತಲೆಯ ಹಿಂಭಾಗ(ಪಶ್ಚಿಮ ಚಕ್ರ)ಕ್ಕೆ ಅಲ್ಲಿಂದ ಸಹಸ್ರಾರಕ್ಕೆ ನುಗ್ಗಿಸುವ ಮಾರ್ಗವಿದೆ. ಇದನ್ನು ಅನುಭಾವಿಯಾದ ಗುರುವಿನಿಂದ ತಿಳಿದು ಮಾಡದಿದ್ದರೆ ಯೋಗಭ್ಯಾಸಿಯು ಬುದ್ಧಿಭ್ರಮಣೆಯ ಅಪಾಯದಲ್ಲಿರುವನೆಂದು ಕೂಡ ಎಚ್ಚರಿಸಲಾಗಿದೆ. (2)ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ| ಪ್ರಾಣಾಪಾನೌ ಸಮೌಕೃತ್ವಾ ನಾಸಾಭ್ಯಂತರ ಚಾರಿಣೌ||27|| ಯತೇಂದ್ರಿಯ ಮನೋಬುದ್ಧಿರ್ಮುನಿಮೋಕ್ಷಪರಾಯಣಃ | ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ||28|| (ಭಗವದ್ಗೀತೆ, ಅಧ್ಯಾಯ 5).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು