ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಏಕದೇವೋಪಾಸನೆ
ಸುನಾದ ಬಿಂದು ಪ್ರಣವಮಂತ್ರ ಅಗ್ರದ ಕೊನೆಯಲೈದುವುದೆ:
'ಸೋಹಂ ಸೋಹಂ' ಎಂದೆನುತಿದ್ದಿತ್ತು,
'ಕೋಹಂ' ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ;
'ಯತೋ ವಾಚೋ ನಿವರ್ತಂತೇ| ಅಪ್ರಾಪ್ಯ ಮನಸಾ ಸಹ||
ಆನಂದಂ ಬ್ರಹ್ಮಣೋ ವಿದ್ವಾನ್| ನ ಬಿಭೇತಿ ಕದಾಚನ||ʼ
ಇಂತೆಂದುದಾಗಿ,
ಅಗಮ್ಯ ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲಾ!
Transliteration Sunāda bindu praṇavamantra agrada koneyalaiduvu:
'Sōhaṁ sōhaṁ' endennutittu,
'kōhaṁ' embuda kaḷedu brahmarandhradoḷage;
'yatō vācō nivartantē| aprāpya manasā saha||
ānandaṁ brāhmaṇō vidvān| na bibhēti kadācana||ʼ
intendudāgi,
agamya kūḍalasaṅgamadēvanallade mattārū illā!
Manuscript
English Translation 2 The mystic word
Of devine sound mind and light
Reached the highest peak,
Kept on saying 'I am He;'
'Who am I' has been effaced in Brahmarandra;
'He who knows that bliss of Brahman
Whence words return along with mind,
Without attaining it,
Has never any fear-'
There is none other than
The past understanding Lord
Kūḍala Saṅgama.
Translated by: L M A Menezes, S M Angadi
Hindi Translation सुनाद बिंदु प्रणव मंत्राग्र पर पहुँचते ही
‘सोऽहं सोऽहं’ का पठन होने लगा ।
ब्रह्मरंध्र में कोऽहं की स्थिति मिठ गई ।
“यतो वाचो निवर्तंते अप्राप्य मनसा सह ।
आनंदं ब्रह्मणो विद्वान बिभेति कुतश्चन॥”
कूडलसंगमदेव के सिवा और कोई अगम्य नहीं है ॥
Translated by: Banakara K Gowdappa
Telugu Translation సునాద బిందు ప్రణవ మంత్రాగ్రముపై
సోహం సోహంబను చుండె
కోహం బనునది విడచి; బ్రహ్మ రంధ్రమందు
‘‘యతో వాచో నివర్తంతే;
అప్రాప్య మనసా సహా;
ఆనందం బ్రహ్మణో విద్వాన్
నబి ;óతి కదాచన’’ గాన
అగమ్యుడు కూడల సంగమ దేవుడుగాక ఇక యెవ్వరూ లేరు!
Translated by: Dr. Badala Ramaiah
Tamil Translation சுநாதம், பிந்து, பிரணவமந்திரஇறுதியில் கைகூடுமன்றோ
பிரம்மரந்திரத்தில் “கோஹம்” என்பதைக்
களைந்து, “ஸோஹம், ஸோஹம்” எனக்கூறியது
“யதோவாசோ நிவர்த்தந்தே அப்ராப்ய
மனஸா ஸஹ | ஆனந்தம் ப்ரஹ்மணோ
வித்வான் ந பிபேதி குதச்சன” |
என்பதால் அறியவியலா கூடலசங்கனன்றி
வேறு எவரும் இல்லை.
Translated by: Smt. Kalyani Venkataraman, Chennai
Marathi Translation
नादबिंदूसहित प्रणव मंत्र मनाला उंच घेऊन जावू शकतो ?
सोऽहं सोऽहं म्हणत असता कोऽहं नष्ट होते ब्रह्मरंधामध्ये.
यतो वाचो निवर्तते अप्राप्य मनसाह सह।
आनंद ब्रह्मणो विद्वान न बिभेति कुतश्चन
म्हणून कूडलसंगमदेवाविना दुसरा कोणी नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಹಸ್ರಾರಚಕ್ರಕ್ಕೆ ತನ್ನ ಪ್ರಾಣಶಕ್ತಿಯನ್ನು ತಲುಪಿಸಿದ ಪ್ರಾಣಲಿಂಗೀಭಕ್ತನು ಅನುಭವಿಸುವ ಜನನ ಮರಣದಿಂದಾಚೆಗಿನ ಅದ್ವಯ ಪರಮಾನಂದಸ್ಥಿತಿಯನ್ನು ಮಾತಿನಿಂದ ವಿವರಿಸಲೂ, ಮನಸ್ಸಿನಿಂದ ಊಹಿಸಲು ಆಗದೆಂಬುದು ಈ ವಚನದ ತಾತ್ಪರ್ಯ.
ಆದಿಗೆ ಅನಾದಿಯಾದ ನಿರವಯಲಿಂಗವು ನಿಶ್ಯಬ್ದನಾದಚೈತನ್ಯಸ್ವರೂಪಿ. ಆ ನಿರವಯಲಿಂಗದಲ್ಲಿ ಜಗತ್ಸೃಷ್ಟಿವೈಭವಲೀಲಾವಿನೋದಸ್ಪುರಣೆ ತಲೆದೋರಿದಾಗ ಆ ಸ್ಫುರಣೆಯೇ “ನಿಷ್ಕಳಚಿತ್” ಎನಿಸುವುದು.
ಈ ನಿಷ್ಕಳಚಿತ್ತು ಕ್ರಮವಾಗಿ ಚಿತ್ಕಳೆ (ನಿರಂಜನಲಿಂಗ). ಚಿನ್ನಾದ (ಶೂನ್ಯಲಿಂಗ). ಚಿದ್ಬಿಂದು(ನಿಷ್ಕಳಲಿಂಗ) ಎಂದಾಗುವುದು.
ಈ ಚಿತ್ಕಳೆ-ಚಿನ್ನಾದ-ಚಿದ್ಬಿಂದುಗಳು ಸಮ್ಮೇಳನದಿಂದ ತ್ರಿವಿಧಾಕೃತಿ (1 ಜ್ಯೋತಿರಾಕೃತಿ 2 ಕುಂಡಲಾಕೃತಿ 3 ತಾರಕಾಕೃತಿ)ಗಳೇರ್ಪಟ್ಟು ಆ ತ್ರಿವಿಧಾಕೃತಿಯಿಂದ ಕ್ರಮವಾಗಿ ಅ-ಉ-ಮ್ ಎಂಬ ಪ್ರಣವಾಕ್ಷರಗಳುದ್ಭವಿಸಿ “ಓಂಕಾರ ಪ್ರಣವವೇರ್ಪಡುವುದು.
ಈ ಓಂಕಾರ ಪ್ರಣವಾಕ್ಷರ(ಆ-ಉ-ಮ್)ಗಳ ಪಲ್ಲದಟಕ್ರಮದಿಂದಾಗಿ ಮ್-ಅ-ಉ ಎಂಬಲ್ಲಿ ಶಕ್ತಿರಹಿತ ಪ್ರಣವಸ್ವರೂಪಿಯಾದ ಶಿವತತ್ವವೂ, ಅ-ಉ-ಮ್(ಓಂ) ಎಂಬಲ್ಲಿ ಶಿವಶಕ್ತಿಪ್ರಣವಸ್ವರೂಪಿಯಾದ ಸದಾಶಿವ ತತ್ತ್ವವೂ, ಉ-ಮ್-ಅ (ಉಮಾ) ಎಂಬಲ್ಲಿ ಶಕ್ತಿಪ್ರಣವಸ್ವರೂಪಿಯಾದ (ಉಮಾ)ಮಹೇಶ್ವರತತ್ತ್ವವೂ ಉತ್ಪತ್ತಿಯಾಗುವವು. ಈ ಮಹೇಶ್ವರ ತತ್ತ್ವದಿಂದಲೇ ಜೀವಾದಿ ಸಕಲೋತ್ಪತ್ತಿ ಮೈದಾಳುವುದೆಂಬುದು ಶರಣ ತತ್ತ್ವದ ಒಂದು ಮೂಲಭೂತಗ್ರಹಿಕೆ(ನೋಡಿ ನನ್ನ ವೀರಶೈವ ತತ್ತ್ವಪ್ರಕಾಶ –ಶಿವತತ್ತ್ವೋದಯ ದಯಪ್ರಕರಣ).
ಹೀಗೆ ಉದಯವಾದ ಸೃಷ್ಟಿಯು ಶಿವಯೋಗ ಕ್ರಮದಲ್ಲಿ ಸುರುಳಿಸುತ್ತಿಕೊಂಡು –“ಆಗ್ರದ ಕೊನೆಯಲ್ಲಿ” ಎಂದರೆ -ಪರಶಿವತತ್ತ್ವಸ್ಥಾನವಾದ ಸಹಸ್ರಾರಚಕ್ರದಲ್ಲಿ ಐದುವುದು –ಎಂದರೆ-ವಿಲೀನವಾಗುವುದೆಂದರ್ಥ.
ಅಲ್ಲಿಗೆ ಪಂಚವಿಂಶತಿತತ್ತ್ವಗಳ ಪಿಂಡಾಡವು ಪರಶಿವಬ್ರಹ್ಮದಲ್ಲಿ ಐಕ್ಯವಾಗಿ, ಕೋಹಂ (ಯಾರು ನಾನು) ಎನ್ನುತ್ತಿದ್ದ ಸಾಧಕನು ಸಹಸ್ರಾರಚಕ್ರವನ್ನು ತಲುಪಿ ಸೋಹಂ ಸೋಹಂ (ನಾನು ಆ ಪರಮಹಂಸನೇ ಆಗಿರುವೆ) ಎನ್ನುತ್ತ ನಾದಬಿಂದುಕಳಾತೀತವಾಗಿ ಆ ಸಚ್ಚಿದಾನಂದವೇ ಆಗುವನು.
ಹೀಗೆ ಸಹಸ್ರಾರಚಕ್ರದಲ್ಲಿ ಜೀವನು ಶಿವನಾಗುವ ಆ ಪರಶಿವಾನಂದಸ್ಥಿತಿಯೇನೂ ಸಾಮಾನ್ಯವಾದುದಲ್ಲ –ಅಲ್ಲಿಗೆ ಯಾವ ಮಾತು ನಿಲುಕುವುದಿಲ್ಲ. ಮನಸ್ಸೂ ತಲುಪಲಾರದೆ ದಿಕ್ಕುತಪ್ಪಿ ಹಿಂತಿರುಗುವುದು. ಆ ಆನಂದವನ್ನು ಸವಿದ ಶಿವಯೋಗಿ ಹೆದರುವಂಥದು ಯಾವುದೂ ಇರುವುದಿಲ್ಲ. ಆಗ ಅಲ್ಲಿ ಶಿವನಲ್ಲದೆ ಮತ್ತಾವುದೂ ಇರುವುದೂ ಇಲ್ಲ.
ವಿ : “ಯತೋ ವಾಚೋ ನಿವರ್ತಂತೇ | ಅಪ್ರಾಪ್ಯ ಮನಸಾ ಸಹ | ಆನಂದಂ ಬ್ರಹ್ಮಣೋ ವಿದ್ವಾನ್ | ನ ಬಿಭೇತಿ ಕದಾಚನೇತಿ” – The delight of the Eternal from which words turn away Without attaining and the mind also returns babbled, who knows the delight of the Eternal ? He shall bear nought now are hereafter (SRI. Aurobindo eight Upanishads-page 196)
ವಿ : (1) ಕೋಹಂ ಬ್ರಹ್ಮರಂಧ್ರ : ಯಾರೂ ಅರಿಯಬಾರದ ಬ್ರಹ್ಮರಂಧ್ರವೆನ್ನುತ್ತಾರೆ ಕೆಲವು ವ್ಯಾಖ್ಯಾನಕಾರರು. (2) ಸೋಹಂ ಸೋಹಂ ಎನುತ್ತಿದ್ದಿತ್ತು ಕೋಹಂ ಬ್ರಹ್ಮರಂಧ್ರ(ವೆಂದರೆ ಸಹಸ್ರಾರಚಕ್ರ)ದಲ್ಲಿ. ಅಂದರೆ ಜೀವನು ಶಿವಯೋಗದಿಂದ ಸಹಸ್ರಾರವನ್ನು ತಲುಪಿದಾಗ ಶಿವನೇ ಆಗುವನೆಂಬುದಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು