•  
  •  
  •  
  •  
Index   ವಚನ - 817    Search  
 
ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಮುಕ್ತಿ
ಬೆಳಗಿನೊಳಗಣ ಬೆಳಗು ಮಹಾಬೆಳಗು ! ಶಿವ ಶಿವಾ! ಪರಮಾಶ್ರಯವೇ ತಾನಾಗಿ ಶತಪತ್ರ ಕಮಳಕರ್ಣಿಕಾ ಮಧ್ಯದಲ್ಲಿ ಸ್ವತಃ ಸಿದ್ಧನಾಗಿರ್ಪ ನಮ್ಮ ಕೂಡಲಸಂಗಮದೇವ.
Transliteration Beḷaginoḷagaṇa beḷagu mahābeḷagu! Śiva śivā! Paramāśrayavē tānāgi śatapatrakamalakarṇikāmadhyadalli paḍeda sid'dhanāgirpa nam'ma kūḍalasaṅgamadēva.
Manuscript
Music Courtesy: Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2 The light within the light: that is The Great Light! Good God! our Lord Kūḍala Saṅgama, Being himself the high'st resort Dwells at the core Of the hundred-petalled lotus' shell- The perfect one! Translated by: L M A Menezes, S M Angadi
Hindi Translation शिव शिव, मम कूडलसंगमदेव स्वयं परमाश्रय बनकर शतपत्रपद्मकोश मध्य स्वयं सिद्ध बने विराजते हैं । Translated by: Banakara K Gowdappa
Telugu Translation వెలుగున వెలుగు మహా వెలుగు; శివశివా పరమాశ్రయమే తానౌచు; శతపత్ర కమల కర్ణికా మధ్యమందు స్వతస్సిద్ధుడై యుండె కూడల సంగమ దేవుడు! Translated by: Dr. Badala Ramaiah
Tamil Translation ஒளியினுள்ளே உள்ள ஒளி, பேரொளி சிவனே, சிவனே, தானே பெரும் ஆதாரமாகி நூறு இதழ்த்தாமரையின் நடுவிலே, அவனே நம் கூடல சங்கம தேவனே விளங்குவானன்றோ! Translated by: Smt. Kalyani Venkataraman, Chennai
Marathi Translation प्रकाशातील प्रकाश महाप्रकाश ! शिव शिवा! विश्वाचा परम आश्रय आपणच होऊन शतपत्र कमल हृदयात स्वसिध्द होतात आमचे कूडलसंगमदेव. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯೋಗಿಯು ಸಹಸ್ರಾರಕ್ಕೆ ತನ್ನ ಪ್ರಾಣವನ್ನು ನಿಲುಕಿಸಿದನೆಂದರೆ –ಎಲ್ಲ ದೇಶದ ಎಲ್ಲ ಕಾಲದ ಜ್ಞಾನವೂ ಅವನಿಗೆ ಅಂಗೈಯ ನೆಲ್ಲಿಯಂತೆ ಪರಿಪೂರ್ಣವಾಗಿ ಗೋಚರವಾಯಿತೆಂದೇ ಅರ್ಥ. ಆಗ ಅವನ ಅಂಗ – ಅಂತರಂಗವೆಲ್ಲಾ ಅಧಿಕಾಧಿಕ ಪ್ರಕಾಶಪರಿಪ್ಲುತವಾಗಿರುವುದು. ಆ ಪ್ರಕಾಶದ ಸುಂದರ ಸಾಂದ್ರಕೇಂದ್ರವೆಂದರೆ ಆ ಸಹಸ್ರಾರಕಮಲದ ಮಧ್ಯಸ್ಥಾನವೇ ಹೌದು. ಅದು ಯೋಗಿ(ಯಾದ ಆ ಪ್ರಾಣಲಿಂಗಿ)ಯ ಪ್ರವಾಸ ಆವಾಸಸ್ಥಾನವಾಗಿರುವುದು. ಅಲ್ಲಿ ಅವನು ಅನ್ಯ ಉಪಾಧಿಗಳೊಂದೂ ಇಲ್ಲದೆ ಬಂಡುಂಡ ಬಿಳಿಯ ದುಂಬಿಯಂತೆ ನಿಶ್ಚಲವಾಗಿ ನಿರಾಲಂಬವಾಗಿ ನೀರವವಾಗಿ ಬೆಳಕಿನಲ್ಲಿ ಬೆಳಕಾಗಿ ಮಹಾಬೆಳಗಾಗಿ ಇರುವನು. ಬಸವಣ್ಣನವರು ತಮ್ಮ ಜೀವನದ ಇಂಥ ಯೌಗಿಕ ಕ್ಷಣಗಳನ್ನು ಈ ವಿಧವಾದ ವಚನಚಿತ್ರಗಳಲ್ಲಿ ಬಣ್ಣಿಸಿ ಶಾಶ್ವತಗೊಳಿಸಿರುವರು. ಈ ಯೌಗಿಕ ಅನುಭವಗಳು ಅಗಮ್ಯವಾದರೇನು ಅವು ತಮ್ಮ ರಮ್ಯತೆಯನ್ನು ಮಿನುಗುತ್ತಲೇ ಇವೆ. ಆ ಮೂಲಕ ನಾವು ಅಂಬೆಗಾಲಿಡಲೂಬಹುದು ! ವಿ : ಶತವೆಂದರೆ ನೂರೇ ಅಲ್ಲ ಸಾವಿರ ಮುಂತಾದ ದೊಡ್ಡ ಸಂಖ್ಯೆಯನ್ನೂ ಸೂಚಿಸಬಲ್ಲುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು