ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಭಕ್ತಿಮಾರ್ಗ
ಆಚಾರ ವಿವಾಚಾರವೆಂದರಿಯದ ಕಾರಣ,
ಷಡುದರುಶನಂಗಳೆಲ್ಲಾ ತಮತಮಗೆ ಶರಣೆನುತ್ತಿದ್ದುವು;
ಮಹತ್ವದ ಸಮಯಾದಿ ಶೈವಂಗಳೆಂಬುವೆಲ್ಲಾ ಶರಣೆನ್ನುತ್ತಿದ್ದುವು!
ನಮ್ಮ ಕೂಡಲಸಂಗನ ಶರಣರು ಮಾಡಿದ ವಿನಿಯೋಗ
ಬಹಿರಂಗದಲ್ಲಿ ವರ್ತಿಸುವವರಿಗೆ ಎಲ್ಲಿಯದೊ?
Transliteration Ācāra vivādavendariyada kāraṇa,
ṣaḍudaruśanaṅgaḷella tamatamage śaraṇenāgidduvu;
mahatvada samayādi śaivaṅgaḷembuvellā śaraṇu śaraṇenāgidduvu!
Nam'ma kūḍalasaṅgana śaraṇaru māḍida viniyōga
bahiraṅgadalli vartisuvavarige elliyadō?
Manuscript
English Translation 2 Because they do not know
That discipline is Śiva-discipline,
All the six systems bow
To one another; all the main Śiva faiths
To one another bow! How can
One in the outer world
Conduct the commerce which
Our Kūḍala Saṅga 's Śaraṇās
Have carried on?
Translated by: L M A Menezes, S M Angadi
Hindi Translation शिवाचार को आचार न समझने के कारण
सभी षड्दर्शन परस्पर प्रणाम कर रहे हैं ।
सकल समयादि शैव धर्म आपस में प्रणाम कर रहे हैं
मम कूडलसंगमेश के शरणों से कृत विनियोग
बहिरंग में व्यवहार करनेवालों को कहाँ ?
Translated by: Banakara K Gowdappa
Telugu Translation ఆచారము శివాచారమని తెలియని కారణమున;
షడ్దర్శనములెల్ల తమకుతా మే శరణనుచుండె;
మహత్వపు సమయాది శైవములన్నవి యెల్లా శరణను చుండె;
సంగని శరణులుచేయు వినియోగము;
బహిరంగమున వర్తించువారి కెక్కడిదో!
Translated by: Dr. Badala Ramaiah
Tamil Translation நெறி, சிவநெறி என்பதை அறியாததால்
ஆறு தரிசனங்கள் அனைத்தும் தமக்குத்தாமே
தஞ்சம் என இயம்பின, பெருமைசான்ற
சைவசமயங்கள் அனைத்தும் தஞ்சம்என
இயம்பின நம் கூடலசங்கனின் அடியார்
மேற்கொண்ட அகயோகம் புறத்திலே
இருப்போர்க்கு வசமாகுமோ ஐயனே?
Translated by: Smt. Kalyani Venkataraman, Chennai
Marathi Translation
आचार हाच शिवाचार असे न जाणल्यामुळे
षड्दर्शन आपापल्यामध्ये एक दुसऱ्यांच्या आश्रयात राहतात.
समस्त शैव मत एकमेकांच्या आश्रयात रहात आहेत.
आमच्या कूडलसंगम शरणांनी केलेला विनियोग (साधना)
बाह्याचारी लोकांना कसा समजणार?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಆಚಾರವೆಂದಮಾತ್ರಕ್ಕೇ ಹೆಚ್ಚಳವೇನೂ ಇಲ್ಲ. ಈ ಆಚಾರಗಳು ಅಂತರಂಗ(ಯೋಗ)ನಿಷ್ಠವಾದಾಗಲೇ ಶಿವಾಚಾರವಾಗುವವು. ಮೇಲಾಗಿ ಈ ಶಿವಾಚಾರದ ಪ್ರಕಾರ ಆಚಾರಾದಿ ಷಡ್ಲಿಂಗಗಳು ಆಧಾರಾದಿ ಷಟ್ಚಕ್ರಗಳಲ್ಲಿ ವಿನಿಯೋಗವಾಗಬೇಕು. ಈ ರಹಸ್ಯವನ್ನರಿಯದೆ ಷಡ್ದರ್ಶನಗಳೂ ಹಲವಾರು ಶೈವಸಂಪ್ರದಾಯಗಳೂ ಅಂಗಲಿಂಗ ಸಾಮರಸ್ಯವನ್ನು ಸಾಧಿಸಲಾರದೆ ವಿಫಲವಾದವು. ಶರಣಧರ್ಮದಲ್ಲಿ ಆಚಾರವನ್ನು ಕೇವಲ ಇಷ್ಟಲಿಂಗಪೂಜಾತ್ಮಕವಾಗಿಯೇ ಮುಗಿಸದೆ ಪ್ರಾಣಲಿಂಗದ ಉಪಾಸನೆಯಿಂದ ಸಾಂಗಗೊಳಿಸಬೇಕೆಂಬುದು ಈ ವಚನದ ಸಂದೇಶ. ಪ್ರಾಣಲಿಂಗೋಪಾಸನೆಯೇ ಶಿವಯೋಗವೆಂಬುದನ್ನು ಮರೆಯಬಾರದು.
ನ್ಯಾಯ-ವೈಶೇಷಿಕ-ಸಾಂಖ್ಯ-ಯೋಗ-ಮೀಮಾಂಸಾ-ವೇದಾಂತವೆಂಬ ಷಡ್ದರ್ಶನಗಳಲ್ಲಾಗಲಿ, ಶರಣ ಧರ್ಮೇತರವಾದ ಹಲವು ಶೈವದರ್ಶನಗಳಲ್ಲಿಯಾಗಲಿ ಈ ಶಿವಾಚಾರವಿನಿ“ಯೋಗ”ವಿರಲಿಲ್ಲವೆಂಬುದು ಈ ವಚನದಿಂದ ತಿಳಿಯಬೇಕಾಗುವುದು.
ವಚನದಲ್ಲಿ ಪ್ರಸ್ತಾಪಿಸಿರುವ ಮಹತ್ವದ ಸಮಾಯಾದಿ ಶೈವಗಳು ಯಾವುವೆಂಬುದು ಸ್ಪಷ್ಟವಾಗುವುದಿಲ್ಲ. ವ್ಯಾಖ್ಯಾನಕಾರರೂ ಅದನ್ನು ಕೇವಲ ಷಟ್ಶೈವ ಸಪ್ತಶೈವ ಎಂದು ಎಣಿಸುವಷ್ಟರಿಂದಲೇ ಮುಗಿಸಿರುವರು.
ನಿಜಗುಣಶಿವಯೋಗಿಗಳಾದರೋ ತಮ್ಮ ವಿವೇಕಚಿಂತಾಮಣಿಯಲ್ಲಿ ಶೈವವನ್ನು ಜಾತಿದೃಷ್ಟಿಯಿಂದ ಅನಾದಿಶೈವ-ಆದಿಶೈವ-ಮಹಾಶೈವ-ಅನುಶೈವ-ಅವಾಂತರಶೈವ-ಪ್ರವರಶೈವ-ಅಂತರಶೈವವೆಂದು ಏಳು ಬಗೆಯಾಗಿಯೂ, ಉಪಾಸ್ಯದೇವತಾದೃಷ್ಟಿಯಿಂದ ವಾಮ-ದಕ್ಷಿಣ-ಮಿಶ್ರ-ಸಿದ್ಧಾಂತವೆಂದು ನಾಲ್ಕು ಬಗೆಯಾಗಿಯೂ, ದೀಕ್ಷಾವಿಶೇಷದೃಷ್ಟಿಯಿಂದ ಸಾಮಾನ್ಯ ಶೈವ-ಮಿಶ್ರಶೈವ-ಶುದ್ಧಶೈವ-ವೀರಶೈವವೆಂದು ನಾಲ್ಕು ಬಗೆಯಾಗಿಯೂ ವಿಭಾಗಿಸಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು