•  
  •  
  •  
  •  
Index   ವಚನ - 819    Search  
 
ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಶರಣರು
ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ ನಂದಿವಾಹನರು, ತಮತಮಗೆಲ್ಲಾ ಖಟ್ವಾಂಗ ಕಪಾಲತ್ರಿಶೂಲಧರರು.: ದೇವರಾರು ಭಕ್ತರಾರು ಹೇಳಿರಯ್ಯಾ! ಕೂಡಲಸಂಗಮದೇವಾ, ನಿಮ್ಮ ಶರಣರು ಸ್ವತಂತ್ರರು: ಎನ್ನ ಬಚ್ಚಬರಿಯ ಬಸವನೆನಿಸಯ್ಯಾ.
Transliteration Tamatamagella nosalakaṇṇavaru, tamatamagella nandivāhanaru, tamatamagella khaṭvāṅgakapālatriśūladhararu.: Dēvarāru bhaktarāru hēḷirayyā! Kūḍalasaṅgamadēvā, nim'ma śaraṇaru svatantraru: Enna baccabariya basavanenisayya.
Manuscript
English Translation 2 They all are, each one to himself, Men with forehead eye; They all are, each one to himself, Riders upon the bull; They all are, each one to himself, Holders of trident, sword and bowl; Tell me who are the gods, And who the devotees! O Kūḍala Saṅgama Lord, Thy Śaraṇās are free: Make them to say of me- He's Basava, pure and plain! Translated by: L M A Menezes, S M Angadi
Hindi Translation वे सब अपने आपको ललाटनेत्री हैं; वे सब अपने लिए स्वयं नंदी वाहन हैं; वे सब अपने लिए स्वयं खट्वांग-कपाल-त्रिशूल धारी हैं। कहो, भगवान कौन है और भक्त कौन? कूडलसंगमदेव तव शरण स्वतंत्र है; मुझे निरा बसव कहाओ ॥ Translated by: Banakara K Gowdappa
Telugu Translation తమకుతామె నొసటకన్నుల వారు; తమకుతామె నంది వాహనులు; తమకుతామె ఖట్వాంగ; కపాల; త్రిశూల; ధారులు దేవుడెవరో భక్తులెవరో దెల్పుడయ్యా; సంగమదేవా నీ శరణులు స్వతంత్రులు; నన్ను మాత్రము బసవ డనిపింపుమయ్యా: Translated by: Dr. Badala Ramaiah
Tamil Translation தம்மனைவருக்கும் நெற்றிக் கண்ணினர் தம்மனைவருக்கும் நந்திவாகனர் தம்மனைவருக்கும் கட்வாங்கம் கபாலம் திரிசூலத்தைத் தரித்தவரென பூசிப்பர் இறைவன் யார்? பக்தர் யார்? கூறுவீர் கூடல சங்கமதேவனே, உம் அடியார் தன்னிச்சையோர் என்னைக் குழந்தை பசவன் என எண்ணுவீர் ஐயனே. Translated by: Smt. Kalyani Venkataraman, Chennai
Marathi Translation स्वतः स्वतःला त्रिनेत्रधारी मानतात. स्वतः स्वतःला नंदीवाहन मानतात. स्वतः स्वतःला खट्टांग कपाल त्रिशूल धारी मानतात. येथे देव कोण ? भक्त कोण ? तुम्हीच सांगा देवा ! कूडलसंगमदेवा तुमचे शरण स्वतंत्र मला निरुपाधिक बसव म्हणावे देवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನ ಬಳಿಯಿರುವ ಗಣಗಳಲ್ಲಿ ಪ್ರಮಥಗಣವೆಂದೂ ರುದ್ರಗಣವೆಂದೂ ಮುಖ್ಯವಾಗಿ ಎರಡು ಬಗೆ. ಪ್ರಮಥರೆಂದರೆ ಘಾಸಿಗೊಳಿಸುವರೆಂದೂ, ರುದ್ರರೆಂದರೆ ಭಯಂಕರವಾಗಿ ಆರ್ಭಟಿಸುವರೆಂದೂ ಮೂಲಾರ್ಥ –ಒಟ್ಟಾರೆಯಾಗಿ ಅವರು ಅಶಿವಭಯಂಕರರು. ಇವರು ಆಂಶಿಕವಾಗಿ ಶಿವನ ರೂಪವನ್ನೇ ವೇಷಭೂಷಣವನ್ನೇ ಆಯುಧವನ್ನೇ ಸಾಮರ್ಥ್ಯವನ್ನೇ ಧರಿಸಿರುವರು. ಆದುದರಿಂದ ಅವರಲ್ಲಿ ಪಾಲಾಕ್ಷ ನಂದಿವಾಹನ ಖಟ್ವಾಂಗ ಧರ ಕಪಾಲಿ ತ್ರಿಶೂಲಿ ಎಂದು ಮುಂತಾದ ಹೆಸರಿನವರೇ ಉಂಟು. ಕೈಲಾಸದ ಈ ಪ್ರತಿಷ್ಠಿತಗಣಪದವಿಯಾಗಲಿ, ಈ ಲೋಕದ ಭಕ್ತಿಭಂಡಾರಿ ಮುಂತಾದ ಬಿರುದುಗಳಾಗಲಿ ತಮಗೆ ಬೇಕಿಲ್ಲವೆಂದೂ, ಶರಣರ ಸೇವಕನಾದ ತನ್ನನ್ನು ಆ ಶರಣರು ಬಸವ ಎಂದು ಏಕವಚನದಲ್ಲಿಯೇ ಕರೆದು ಮಾಡಬೇಕಾಗಿರುವ ಕೈಂಕರ್ಯವನ್ನು ಕೈಗೊಂಡರೆ ಸಾಕೆಂದೂ ಬಸವಣ್ಣನವರು ವಿಜ್ಞಪ್ತಿ ಮಾಡಿಕೊಳ್ಳುತ್ತಿರುವರು. ಕೈಲಾಸದಲ್ಲಾಗಲಿ ಈ ಲೋಕದಲ್ಲಾಗಲಿ ಶಿವಭಕ್ತರು ನಂದಿವಾಹನ ಮುಂತಾದ ಪ್ರವರಗಳನ್ನು ಉಗ್ಘಡಿಸಿಕೊಂಡರೆ ಅವರಿಗೂ ಆ ಸಾಕ್ಷಾತ್ ಶಿವನಿಗೂ ಭೇದವೆಲ್ಲಿ ಬಂತೆನ್ನುತ್ತ, ಆ ಮಟ್ಟಿಗೆ ದೇವಭಕ್ತ ಸಂಬಂಧ ಕುಂದುವುದೆನ್ನುತ್ತ. (ಶರಣರು ಸ್ವತಂತ್ರರಾದುದರಿಂದ ಅವರಿಗೆ ಹೇಳದೆ)ತನ್ನ ಮಟ್ಟಿಗೆ ಹೇಳುವುದಾದರೆ-ನಾನು ಈ ಮಾನವರೂಪದಲ್ಲಿಯೇ ಮಾನವಶಕ್ತಿಸಾಮರ್ಥ್ಯಗಳ ಪರಿಧಿಯಲ್ಲಿಯೇ ಮಾನವ ಲೋಕದ ಸೇವೆ ಮಾಡಿಕೊಂಡಿದ್ದರೆ ಸಾಕೆನ್ನುತ್ತ ಈ ವಚನವನ್ನು ಬಸವಣ್ಣನವರು ನುಡಿದಿರುವರು. ಬಸವಣ್ಣನವರು ಇಹದಲ್ಲಾಗಲಿ ಪರದಲ್ಲಾಗಲಿ ದೊಡ್ಡಸ್ತಿಕೆಯ ನಾಟಕವಾಡದೆ ತಮ್ಮ ಶಿವಕಿಂಕಿರ ಪಾತ್ರವನ್ನು ನೈಜವಾಗಿ ನಿರ್ವಹಿಸುವುದಾಗಿ ಅರಿಕೆ ಮಾಡಿಕೊಳ್ಳುತ್ತಿರುವರು. ವಿ : ಖಟ್ಟಾಂಗವೆಂದರೆ-ಒಂದು ತುದಿಗೆ ತಲೆಬುರುಡೆಯನ್ನು ಸಿಕ್ಕಿಸಿದ ಒಂದು ಲಗುಡಲಾಂಛನ. ಇದು ಶಿವನ ಒಂದು ಲಾಂಛನ. ಇದನ್ನು ಕೆಲವು ಬಗೆಯ ಶೈವಸಂನ್ಯಾಸಿಗಳೂ ಧರಿಸುತ್ತಿದ್ದುದಾಗಿ ತಿಳಿದು ಬರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು