•  
  •  
  •  
  •  
Index   ವಚನ - 821    Search  
 
ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಗುಡಿ
ಉಳ್ಳವರು ಶಿವಾಲಯವ ಮಾಡುವರು: ನಾನೇನ ಮಾಡುವೆ? ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯಾ: ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ!
Transliteration Uḷḷavaru śivālaya māḍuvaru: Nānēna māḍuve? Baḍavanayya. Enna kālē kamba, dēhavē dēgula, śira honna kalaśavayya. Kūḍalasaṅgamadēva, kēḷayya: Sthāvarakkaḷivuṇṭu, jaṅgamakkaḷivillā!
Manuscript
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
Art
Video
English Translation The wealthy build temples for Shiva— What can I do, Sir? I am a poor man! But my legs are the pillars, My body itself the temple, And my head, the golden pinnacle! Hear me! O Lord Kūḍala Saṅgama! What stands may fall, But what keeps on moving Shall remain forever!”
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 The rich will make temples for Śiva, What shall I, a poor man, do? My legs are pillars, the body the shrine, the head a cupola of gold. Listen, O lord of the meeting rivers, things standing shall fall, but the moving ever shall stay.

Translated by: A K Ramanujan
Book Name: Speaking Of Siva
Publisher: Penguin Books
----------------------------------
Those who have money build Temples to Śiva: what can I build? A poor man, Lord, am I! My body is the shrine, Its pillars are my legs, The golden pinnacle, my head. Hear me, Kūḍala Saṅgama Lord, There is destruction for what stands, But not for that which moves! Translated by: L M A Menezes, S M Angadi

Russian Translation Богачи могут строить храмы, Но что могу я , бедный человек? Мои ноги - колонны, Мое тело - храм, Голова моя - золотой купол. О, Кудаласангама, ты свидетель! Неподвижное будет разрушено, Но движение будет вечно! Translated by: Prof Harishankar, Mysore and Mrs. Galina Kopeliovich, Russia
Hindi Translation धनी शिवालय बनाते हैं मैं क्या करूँ निर्धन हूँ । मेरी टाँगे ही स्थंभ हैं, देह ही मंदिर, सिर ही स्वर्ण-कलश है, सुनो, कूडलसंगमदेव स्थावर नश्वर है, जंगम नहीं ॥ Translated by: Banakara K Gowdappa
Telugu Translation కలవారు శివాలయము కట్టెదరు; నేనేమి సేయుదు బడుగునయ్యా, నా కాలే కంభము; దేహమే దేవళము; తలయె పై డి కలశమయ్యా; కూడల సంగమదేవా వినవయ్యా, స్థావరము చెడుగాని జంగమము చెడదయ్యా! Translated by: Dr. Badala Ramaiah
Tamil Translation உள்ளவர் சிவாலயத்தைக் கட்டுவர் நான் என்ன செய்வேன்? ஏழை ஐயனே என்னுடைய காலே கம்பம், உடலே கோயில் தலை பொற்கலசம் ஐயனே கூடல சங்கமதேவனே, கேளாய் ஐயனே ஸ்தாவரத்திற்கு அழிவுண்டு ஜங்கமத்திற்கு அழிவு இல்லை ஐயனே Translated by: Smt. Kalyani Venkataraman, Chennai
Marathi Translation भव्य शिवालय, बांधिती सधन बांधू कैसे जाण, पामर मी पाय माझे खांब, देह देवालय सुवर्णकळस होय, मस्तके ते कूडलसंगमदेवा ! नाशेल स्थावर अविनाशी थोर, जंगम ते अर्थ- येथे महात्मा बसवेश्वर धनाच्या बळावर मोठमोठी शिवालये बांधण्याकडे व बांधणाऱ्याकडे आपले लक्ष वेधतात. व मानस पूजेचे महत्व प्रतिपादन करतात. म्हणतात ""हे कूडलसंगमदेवा! लोक धनाच्या बळावर मोठ मोठी शिवालये बांधतात. मजसारख्या पामराने काय करावे? माझे पाय हेच शिवालयाचे खांब होत. माझा देह हाच त्या शिवालयाचे महाद्वार होय. माझे डोके हे त्या शिवालयाचा सुवर्ण- कळसच होय. कारण धोंड्याचे शिवालय नाशवान होय व जंगम अविनाशी होय. इत्यर्थ असा की, परमेश्वरास नाशवान वस्तू मात्र अर्पण करुन संतुष्ट केले जावू शकत नाही. आपले नाव व्हावे, लोकांनी आपणास दानशूर म्हणावे, आणि एखाद्या धनीकाने शिवालय बांधावे हे महात्मा बसवेश्वरास मुळीच मान्य नव्हते ते मूर्तिपूजेला विरोध करीत, मानसशुद्ध आचाराशिवाय संभवत नाही या विचारसरणीचे ते पुरस्कर्ते होत. देवालय बांधून शिवास बंधनात टाकणे अशक्य आहे. कारण तो सर्वव्यापी आहे. अशी त्यांची निजनिष्ठा होती स्वतःच्या देहासच शिवालय करण्यात त्यांचा हेतू व्यापक परमेश्वर ऱ्हदयी दर्शविण्याचाच होय, पृथ्वीवरील सर्व स्थावर ज्या वस्तूचा नाश होतो व जंगमवस्तू अविनाशी असते. हे येथे सिद्ध होते. तसेच देहास शिवालय व देहीस आत्मलिंग जंगम वस्तू मागतात, हेही सिद्ध होते त्यांनी सर्वव्यापी परमेश्वराची व्याप्ती देहरूपी शिवालयात देही म्हणजे आत्मलिंग स्वरुपात दर्शविली आहे. Translated by Rajendra Jirobe, Published by V B Patil, Hirabaug, Chembur, Mumbai, 1983 धनिक लोक शिवालये बांधतात. मी गरीबाने काय करावे देवा ? माझे पाय हे खांब, देह हे मंदिर, शिर सोन्याचा कळस आहे देवा. कूडलसंगमदेवा ऐकावे स्थावर नश्वर आहे, जंगम शाश्वत आहे. Translated by Shalini Sreeshaila Doddamani
Urdu Translation زرپاس ہےجن کے وہ بناتے ہیں شوالہ میںمفلس وقلاش بھلا کیسے بناؤں مندر ہے مرا جسم تویہ پَیر سُتوں ہیں اوپر جو مرا سر ہے وہ سونے کا کلس ہے اب سُنیے مرے دیوا مرے کوڈلا سنگم دنیا کی ہراک چیزتوفانی ہےمگر رو ح مرتی نہیں مرتی ہی نہیں اس کوبقا ہے Translated by: Hameed Almas
ಕನ್ನಡ ವ್ಯಾಖ್ಯಾನ ಜೀವನೇ ದೇವರು; ದೇಹವೇ ದೇವಾಲಯ ಶ್ರೀ ಮಂತರು ದೇವಾಲಯಗಳನ್ನು ನಿರ್ಮಿಸಿ ದೇವರ ವಿಗ್ರಹಗಳ ಪ್ರತಿಷ್ಟಾಪನೆ ಮಾಡಿದರೂ ಅವರಿಗೇ ಸ್ವತಃ ದೇವರನ್ನು ಪೂಜಿಸುವ ಅವಕಾಶವಿಲ್ಲ. ಪೂಜಾರಿಯನ್ನೇ ಆಶ್ರಯಿಸಬೇಕು. ಪೂಜಾರಿಯ ಮೂಲಕವೇ ಪೂಜಿಸಬೇಕು. ಹೀಗೆ ದೇವರು ಮತ್ತು ಭಕ್ತರ ಮಧ್ಯೆ ಪೂಜಾರಿಯ ಇರುವಿಕೆಯ ಕಾರಣದಿಂದ ಭಕ್ತರಿಗೆ ಪೂಜಾಸ್ವಾತಂತ್ರ್ಯವೆಂಬುದೇ ಇಲ್ಲದಂತಾಗಿದೆ. ಇದನ್ನು ಮನಗಂಡೇ ಬಸವಣ್ಣನವರು ಹಸಿದವನ ಹಸಿವು ಹಿಂಗಬೇಕಾದರೆ ಹಸಿದವನೇ ಉಣ್ಣಬೇಕು. ಅವನ ಪರವಾಗಿ ಬೇರೊಬ್ಬ ಊಟಮಾಡಿದರೆ ಅವನ ಹಸಿವು ಹಿಂಗಲಾರದು ಎಂಬುದು ಎಷ್ಟು ಸಹಜವೋ ಅದೇ ರೀತಿ ದೇವರ ಅರಿವನ್ನು ಪಡೆಯಲಿಚ್ಚಿಸುವ ವ್ಯಕ್ತಿ ಸ್ವತಃ ಅವನೇ ದೇವರನ್ನು ಪೂಜಿಸಬೇಕೆಂಬುದೂ ಅಷ್ಟೇ ಸಹಜವಾದುದು ಹಾಗೂ ಸತ್ಯವಾದದು ಎಂದು ವಾದಿಸುತ್ತಾ ಈ ಆದರ್ಶ ಕಲ್ಲು ಇಟ್ಟಿಗೆಗಳ ದೇವಾಲಯಗಳಿಂದ ಸಾಧ್ಯವಿಲ್ಲವೆಂದು ತಿಳಿದು ‘ಅಂಗುಷ್ಟ ಮಾತ್ರಃ ಪುರುಷೋಂತರಾತ್ಮಾ ಸದಾ ಜನಾನಾಂ ಹೃದಿ ಸನ್ನಿವಿಷ್ಟಃ’ ಎಂಬ ಅನುಭವೋಕ್ತಿಯಂತೆ ಸರ್ವಜನರ ಹೃದಯದಲ್ಲೂ ದೇವರಿರುವಾಗ ಸ್ಥಳವು ದೇವಾಲಯವೇ ಅಲ್ಲವೇ ಎಂದು ಪ್ರತಿಯೊಬ್ಬ ವ್ಯಕ್ತಿಯ ದೇಹವನ್ನೇ ದೇವಾಲಯವನ್ನಾಗಿ ಮಾಡಿ ದೇವರ ಕುರುಹಾದ ಇಷ್ಟಲಿಂಗವನ್ನು ಅವನ ಕರಸ್ಥಲಕ್ಕೆ ದೊರಕಿಸಿಕೊಟ್ಟು ದೇವರನ್ನು ನೇರವಾಗಿ ಅವನೇ ಪೂಜಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಅಂತೆಯೇ ಅಂತಹ ದೇವಾಲಯಗಳಲ್ಲಿ ತಾವೂ ಒಬ್ಬರಾದರು. ಇದನ್ನೇ ಈ ವಚನದಲ್ಲಿ ನಾವು ಸ್ಪಷ್ಟವಾಗಿ ಕಾಣುತ್ತೇವೆ. ಬಸವಣ್ಣನವರೇನೂ ಸಾಮಾನ್ಯ ಮಾನವರೆಲ್ಲ. ಕಲ್ಯಾಣದ ಚಾಲುಕ್ಯ ಮಹಾ ಸಾಮ್ರಾಜ್ಯದ ಮಹಾ ಮಂತ್ರಿಗಳವರು. ಹಣ, ಅಧಿಕಾರಗಳಿಗೇನೂ ಕೊರತೆಯಿರಲಿಲ್ಲ. ಆದರೂ ಅವರು ‘ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ-’ ಎನ್ನುತ್ತಿದ್ದಾರೆ. ದುಡ್ಡಿರುವ ಧನಿಕರು ದೊಡ್ಡ ದೇವಾಲಯಗಳನ್ನು ಕಟ್ಟಿಸುವರು. ಆದರೆ ನಾನು ಬಸವಣ್ಣ ನಿರ್ಗತಿಕ; ನನ್ನಲ್ಲಿ ಹಣವೆಲ್ಲಿಂದ ಬರಬೇಕು? ನಾನು ಅಂತಹ ದೇವಾಲಯಗಳನ್ನು ಕಟ್ಟಿಸಲು ಅಸಮರ್ಥ ಎಂದು ಹೇಳಿಕೊಳ್ಳುತಿದ್ದಾರೆ ಬಸವಣ್ಣನವರು. ಇದು ಬಸವಣ್ಣನಲ್ಲಿರುವ ಅಸಮರ್ಥತೆಯನ್ನು ತೋರಿಸುವ ಮಾತಲ್ಲ; ಕಲ್ಲು ಮಣ್ಣಿನ ದೇಗುಲಗಳನ್ನು ನಿರ್ಮಿಸುವ ಶ್ರೀಮಂತರನ್ನು ಮೂದಲಿಸುವ ಮಾತು. ಬಸವಣ್ಣನವರು ಹೀಗೆ ಮೂದಲಿಸಿ ಮೌನ ತಾಳಲಿಲ್ಲ; ಒಂದು ಆದರ್ಶ ದೇವಾಲಯವನ್ನು ಕಟ್ಟಿ ತೋರಿಸಿದವರು. ಆ ಭವ್ಯ ದೇವಾಲಯವೇ ಅವರ ದೇಹ. ಅವರ ಕಾಲುಗಳೇ ಆ ದೇವಾಲಯದ ಕಂಬಗಳು. ಬಂಗಾರದಂತಹ ಬುದ್ಧಿಯನ್ನೊಳಗೊಂಡ ಅವರ ಶಿರವೇ ಆ ದೇವಾಲಯದ ಶಿಖರದ ಮೇಲೆ ಹೊಳೆಯುವ ಹೊನ್ನಕಳಶ. ಧನಿಕರ ದೇವಾಲಯವಾದರೋ ಸಹಸ್ರಾರು ರೂಪಾಯಿಗಳಿಂದ ನಿರ್ಮಿತವಾದುದು. ಆದರೂ ಅದರ ಫಲ? ಅದೊಂದು ಪೂಜಾರಿಯ ಒಳಸಂಚಿನಿಂದ ಸಾಮಾನ್ಯ ಜನರ ಸುಲಿಗೆಯ ಕೇಂದ್ರವಾಗುವುದು. ಆದರೆ ಬಸವಣ್ಣನವರು ಕಟ್ಟಿದ ದೇವಾಲಯಕ್ಕೋ ಯಾವ ವ್ಯಯವೂ ಇಲ್ಲ. ಆದರೂ ಅದರ ಮಹತ್ವವೆಂತಹದು? ಈ ದೇವಾಲಯದಲ್ಲಿ ಬೇರಾವ ಪೂಜಾರಿಯೂಇಲ್ಲ, ಪ್ರತಿಯೊಬ್ಬನು ಅವನವನ ದೇವಾಲಯದ ಪೂಜಾರಿಯೇ. ಹೀಗೆ ‘ನನ್ನ ದೇಹ ದೇವಾಲಯ; ಇದು ಶಿವನ ಆವಾಸಸ್ಥಾನ’ ಎಂಬ ಭಾವ ಭಕ್ತರಲ್ಲಿ ಬಲಿಯಿತೆಂದರೆ ‘ನಾನು ಚಲಿಸಿದೆನೆಂದರೆ ಶಿವನೂ ನನ್ನೊಡನೆ ಚಲಿಸುವನು. ನಾನು ಮಾಡುವಕಾರ್ಯಗಳನ್ನೆಲ್ಲಾ ಸದಾ ಅವನು ವೀಕ್ಷಿಸುತ್ತಿರುವನು’ ಎಂದು ಮನವರಿಕೆಯಾಗಿ ಅವನ ಜೀವನದಲ್ಲಿ ಅದೆಂತಹ ಪರಿವರ್ತನೆ ಯುಂಟಾಗುವುದು! ಎಷ್ಟೊಂದು ಅಂತರವಿದೆ ಬಸವಣ್ಣನ ಈ ದೇವಾಲಯಕ್ಕೂ ಧನಿಕರ ಆ ದೇವಾಲಯಕ್ಕೂ. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಧನಿಕರ ದೇವಾಲಯವಾದರೋ ಸ್ಥಾವರ ದೇವಾಲಯ, ಅದು ಹಲವು ವರ್ಷಗಳಿದ್ದು ನಂತರ ನಾಶಹೊಂದುವಂತಹುದು. ಬಸವಣ್ಣನ ದೇವಾಲಯವಾದರೋ ಜಂಗಮ ದೇವಾಲಯ. ಇದಕ್ಕೆ ಅಳಿವೇ ಇಲ್ಲ. ಏಕೆಂದರೆ ಇದು ಕಲ್ಲು ಇಟ್ಟಿಗೆಗಳಿಂದ ನಿರ್ಮಿತವಾದುದಲ್ಲ. ಜೀವಾತ್ಮಕ್ಕೆ ಜನ್ಮ ಜನ್ಮಾಂತರಗಳಲ್ಲೂ ತಪ್ಪದ ನೇರವಾದ ಸಂಭಂದವು ಈ ದೇಹವೆಂಬ ದೇವಾಲಯಕ್ಕಿರುವುದರಿಂದ ಇದು ಒಂದು ಜನ್ಮದಲ್ಲಿ ವಿನಾಶಿಯೆಂದು ಕಂಡುಬಂದರೂ ಇನ್ನೊಂದು ಜನ್ಮದಲ್ಲಿ ಜೀವಾತ್ಮದೊಂದಿಗೆ ತಾನೇ ಸಿದ್ಧವಾಗಿರುವುದರಿಂದ ಇದು ಅಳಿವಿಲ್ಲದ ದೇವಾಲಯ. ‘ಜಂಗಮ’ ಎಂದರೆ ಗಮಿಸುವಂತಹುದು, ಚಲಿಸುವಂತಹುದು ಎಂದರ್ಥ. ದೇಹವೆಂಬ ದೇವಾಲಯವನ್ನು ಜಂಗಮ ದೇವಾಲವೆಂದು ಕರೆದಿರುವುದು ಈ ಅರ್ಥದಲ್ಲಿಯೇ. ಏಕೆಂದರೆ ಜೀವಿಯು ಮೋಕ್ಷ ಹೊಂದುವವರೆಗೂ ಭವ್ಯ ಭವಾಂತರಗಳಲ್ಲಿ ದೇಹವು ಅದಕ್ಕೆ ಅಂಟಿಕೊಂಡೇ ಇರುತ್ತದೆ. ಈ ದೃಷ್ಟಿಯಿಂದ ಈ ದೇವಾಲಯವು ಜಂಗಮ ದೇವಾಲಯ ಹಾಗೂ ಅಳಿವಿಲ್ಲದ ದೇವಾಲಯ. ಅವಿನಾಶಿಯಾದ ದೇವರಿಗೆ ಅವಿನಾಶಿಯಾದ ದೇವಾಲಯವೇ ಇರಬೇಕಾದುದು ಸಹಜ. ಜೀವಾತ್ಮವು ದೇವಾಂಶವಾದುದರಿಂದ ಜೀವನವೆಂಬ ದೇವರಿಗೆ ದೇಹವೆಂಬ ದೇವಾಲಯವು ಸಹಜವಾದುದು. ಜೀವಾತ್ಮ ಭಾವ ಅಳಿದು ದೇವಾತ್ಮ ಭಾವ ಬೆಳೆದಾಗ ಆ ದೇವಾತ್ಮನಿಗೆ ಯಾವ ದೇವಾಲಯದ ಅವಶ್ಯಕತೆಯೂ ಇರುವುದಿಲ್ಲ. ಅಣ್ಣನವರು ಈ ವಚನದ ಭಾಗವನ್ನು ಹೋಲುವ ಒಂದು ನುಡಿ, ತಮಿಳಿನಲ್ಲಿ ಹನ್ನೆರಡು ತಿರುಮುರೈ ಗ್ರಂಥಗಳಲ್ಲಿ ಒಂದಾದ, ಶ್ರೇಷ್ಠ ಶಿವಭಕ್ತ ತಿರುಮೂಲರ ತಿರುಮಂದಿರದಲ್ಲಿ ಈ ರೀತಿ ಇದೆ; “ಉಳ್ಳಂ ಪೆರುಂ ಕೋಯಿಲ್ ಊನುಡಂಬು ಆಲಯಂ ವಳ್ಳಲ್ ಪಿರಾನಾರ್ಕುಂ ವಾಯ್ ಗೋಪುರ ವಾಸಲ್ ತೆಳ್ಳತ್ತೆಳಿಂದಾರ್ಕು ಜೀವನ್ ಶಿವಲಿಂಗಂ ಕಳ್ಳಪ್ಪುಲನೈಂದುಂ ಕಾಳಾಮಣಿ ವಿಳಕ್ಕೆ” ಇಲ್ಲಿ ತಿರುಮೂಲರು ದೇಹವನ್ನು ದೇವಾಲಯಕ್ಕೂ, ಹೃದಯವನ್ನು ಅದರ ಗರ್ಭಗುಡಿಗೂ, ಜೀವಾತ್ಮವನ್ನು ಆ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೂ, ಶಿವನಾಮ ಸ್ಮರಣೆಯಿಂದ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಸದ್ಭಕ್ತರ ಬಾಯಿಯನ್ನು ಶಿವಲಿಂಗದ ದರ್ಶನಕ್ಕೆ ಹೋಗಲಿರುವ ಗೋಪುರದ ಮಹಾದ್ವಾರಕ್ಕೂ ಸ್ವಭಾವದಿಂದ ಚಂಚಲವಾದ ಆದರೆ ದೃಢಮನಸ್ಸಿನಿಂದ ಜಯಿಸಿದ ಪಂಚೇಂದ್ರಿಯಗಳನ್ನು ಆ ಗರ್ಭಗುಡಿಯಲ್ಲಿ ತೂಗಾಡುವ ಐದು ಅಮರ ಜ್ಯೋತಿಗಳಿಗೂ ಹೋಲಿಸಿ ಅತ್ಯಂತ ಸುಂದರ ಕಲ್ಪನೆಯನ್ನು ಮಾಡಿದ್ದಾರೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-563 

  Sun 05 Jan 2025  

 ನಿಜವಾಗಿಯೂ ಬಹುದಿನದ ಕನಸೊಂದು ಸಾಕಾರಗೊಂಡಿದೆ....ವಚನಗಳ ಮಾಹಿತಿಯನ್ನು ಈ ಪರಿಯಲ್ಲಿ ಬಹುಮುಖಿ ನೆಲೆಯಲ್ಲಿ ಅದರ ಜ್ಞಾನವನ್ನು ಉಣಬಡಿಸುತ್ತಿರುವುದು....ಕೈಂಯಂಚಿನಲ್ಲಿ ಅದರ ಸಮಸ್ತ ವಿಚಾರ ಸಿಗುತ್ತಿರುವುದು ನಿಜಕ್ಕೂ ಸಂತೋಷದಾಯಕ....ಈ ವಚನಗಳ ಮೇಲಿರುವ ವಿಮರ್ಶೆಗಳನ್ನು ಹಂಚಿದರೆ ತುಂಬಾ ಉಪಯುಕ್ತ...
  ಮಂಜುನಾಥ.ಬಿ
Karnataka

C-535 

  Sun 29 Dec 2024  

 Correctly translated in Marathi. Very good job Buddhiji....Sharanu Sharanarthi 🙏
  Shivling Dhawaleshwar
Pune

C-533 

  Fri 27 Dec 2024  

 This webside is very Nice. Important work of the vachanas, good quality of songs & dans..... 🙏🙏

  Sunil Shivanand Hengane
Latur

C-524 

  Tue 24 Dec 2024  

 Marathi Translation

धनिक शिवालय बांधतात,
गरीब मी देवा काय करु?
माझे पाय हेच खांब,देह हेच देवालय,
मस्तक हे सोनियाचा कळस देवा.
कुडलसंगमदेवा ऐका हो,
स्थावर असे नाश,जंगम हा अविनाशी.
  Anand Gavi
Sharana Sankula, Mumbai

C-378 

  Mon 23 Oct 2023  

 Swamiji, I do not think I have ever told you: this vacana is not only the very first piece of Kannada literature which I ever read, but also the most beautiful poem I know. I had tears in my eyes when I read it for the first time, and now, decades later, I still cannot read it out loud without a trembling voice.
  Prof Robert Zydenbos, Munich, Germany

C-359 

  Wed 30 Aug 2023  

 The way of interpretation of Vachana by Dr Swamiji in the form of explanation is highly appreciated. The people should read and understand the life and god in scientific way.
Sharanu sharanarthigalu
A N PARAMESHWARAPPA, Hubli.
Camping at Kentucky USA
  A N PARAMESHWARAPPA

C-358 

  Wed 30 Aug 2023  

 Video upload paln is good
ಈಗ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಚನ ನೃತ್ಯಗಳನ್ನು ಅಳವಡಿಸಿದರೆ ಚೆನ್ನಾಗಿರುತ್ತೆ
  Nagarajaiah