•  
  •  
  •  
  •  
Index   ವಚನ - 822    Search  
 
ಪ್ರಾಣಲಿಂಗಿಯ ಭಕ್ತಸ್ಥಲ - ಲಿಂಗ-ಜಂಗಮ
ಅಷ್ಟದಳ ಕಮಳಾತ್ಮದೊಳಗೆ ನೆಟ್ಟನೆ ಮನಃಪ್ರೇರಕನೆಂದು ನಿಮ್ಮ ನಂಬಿದೆ, ಮತ್ತೊಂದನರಿಯೆ. ನಿತ್ಯ ಸ್ವತಂತ್ರನು ನೀನೇ ದೃಷ್ಟ: ಲಿಂಗ ಜಂಗಮ ಒಂದೆ ಎಂದಿಪ್ಪೆನು, ಪರಮ ಪ್ರಭುವೆ, ಕೂಡಲಸಂಗಮದೇವಾ.
Transliteration Aṣṭadaḷa kamalātmadoḷage neṭṭane manaḥprērakanendu nim'ma nambide, mattondanariye. Nityasvatantranu nīnē dr̥ṣṭa: Liṅga jaṅgama onde endippenu, parama prabhuve, kūḍalasaṅgamadēvā.
Manuscript
English Translation 2 Because Thou art Truly the prompter of my heart, Within the eight-petalled lotus' core, I did believe in Thee: Nought else I know. Thou art the ultimate Truth: I live in the belief That Liṅga and Jaṅgama are one, O Lord Supreme, O Kūḍala Saṅgama Lord. Translated by: L M A Menezes, S M Angadi
Hindi Translation अष्टदलकमलात्मा में सच्चा मनःप्रेरक जान मैंने तुम पर विश्वास किया, अन्य कुछ न जाना । नित्य स्वतंत्र तुम ही हो; दृष्टलिंग जंगम को एक मानता हूँ, प्रभो, कूडलसंगमदेव ॥ Translated by: Banakara K Gowdappa
Telugu Translation అష్టదళ కమల మధ్యమున; సూటిగ మనఃప్రేరకుడని; నిన్ను నమ్మితి అన్య మెఱుగను; నిత్య స్వతంత్రుడవు నీవే దృష్టము వ్యక్తము: లింగ జంగమ మొకటే యనుచుంటి; పరమ ప్రభూ! కూడల సంగమదేవా! Translated by: Dr. Badala Ramaiah
Tamil Translation எண் தளத்தாமரை ஆன்மாவினுள்ளே மனத்தினுடையன் நிலைத்து உள்ளான் என நம்பினேன், வேறு எதையும் அறியேன் நிலைத்து நிற்கும் தன்னிச்சையோன் நீயே என் பார்வையில் இலிங்க ஜங்கமர் ஒன்றே எனக் காண்கிறேன் இறைவனே கூடல சங்கமதேவனே. Translated by: Smt. Kalyani Venkataraman, Chennai
Marathi Translation अष्टदल कमल आत्म्यामध्ये या मनाचे प्रेरक तुम्हीच आहात. दुसरे कोणी नाही. नित्यस्वतंत्र तुम्हीच आहात. दिसणारे लिंग जंगम एकच मानतो प्रभू कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ಹೃದಯಕಮಲ(ನೋಡಿ ವಚನ 480)ದಲ್ಲಿ ನಿಂತು ನನ್ನ ಮನಸ್ಸನ್ನು ಪ್ರೇರೇಪಿಸುವ ಸಾಕ್ಷಾತ್ ಶಿವನೇ ನೀನೆಂದು ನಂಬಿರುವೆ. ಈ ನನ್ನ ನಂಬಿಕೆಯನ್ನು ಪರೀಕ್ಷಿಸಲು ಎಂದಿಗೂ ನೀನು ಸ್ವತಂತ್ರನೇ ಆಗಿರುವೆ. (ಸ್ಥಾವರ)ಲಿಂಗ ಮತ್ತು ಜಂಗಮ(ಲಿಂಗ) ಬೇರೆಬೇರೆಯಲ್ಲ –ಒಂದೇ ಅಖಂಡತತ್ತ್ವವೆಂಬುದು ನನ್ನ ನಿಲುವು.” ಹುಚ್ಚನ ವೇಷದಲ್ಲಿ ಬಂದ ಪ್ರಭುದೇವರನ್ನು ಬಸವಣ್ಣನವರು ಕಲ್ಯಾಣದಲ್ಲಿ ಗುರುತಿಸಿ ಆಡಿದ ಮಾತಿದು. ಈ ಘಟನೆ ನಡೆದ ಹನ್ನೆರಡು ವರ್ಷಗಳಿಗೆ ಹಿಂದೆ-ಪ್ರಭುದೇವರು ಸೊಲ್ಲಾಪುರದಿಂದ ಕಲ್ಯಾಣಕ್ಕೆ ಬಂದಿದ್ದರು. ಬಸವಣ್ಣ ಮುಂತಾದ ಶರಣರಿಗೆ ಷಟ್ಸ್ಥಲವನ್ನು ಯೋಗದಲ್ಲಿ ಸಮನ್ವಯಗೊಳಿಸಿ ಉಪದೇಶ ಮಾಡಿ -ಸಾಧನೆ ಮಾಡುತ್ತಿರಿ ಮರಳಿ ಬರುವೆ ಎಂದು ಹೇಳಿ ಹೋಗಿದ್ದರು. ಅದೇ ಪ್ರಕಾರ ಮರಳಿ ಬಂದ ಸಂದರ್ಭ ಈ ವಚನದ್ದು. (ಇದರ ವಿವರಕ್ಕೆ ನೋಡಿ ನನ್ನ ಅಲ್ಲಮನ ಲಿಂಗಾಗ ಸಂವಾದ. ಪುಟ 13) ವಿ: (1) ಈ ವಚನದಲ್ಲಿ “ಪ್ರಭುವೇ” ಎಂಬ ಪದ ಅಲ್ಲಮಪ್ರಭುವಿಗೇ ಅನ್ವಯಿಸುವುದೆಂಬುದು ಒಂದು ಊಹೆ ಮಾತ್ರ. 896 ನೇ ವಚನದಲ್ಲಿ “ಪರಮಪ್ರಭುವೆ” ಎಂಬ ಪದವನ್ನು ಶಿವನಿಗೆ ವಾಚಕವಾಗಿ ಬಳಸಿರುವುದು ಸ್ಪಷ್ಟವೇ ಇದೆ. 893ನೇ ವಚನದಲ್ಲಿ ಮಾತ್ರ ಅಲ್ಲಮಪ್ರಭುದೇವರನ್ನು “ಅಲ್ಲಮ” ಎಂದೇ ಮೂಲ ಹೆಸರು ಹಿಡಿದು ಪ್ರಸ್ತಾಪಿಸಿರುವುದು. ಪ್ರಭು ಎಂಬ ಪದ ಯಾವ ಮಹನೀಯನಿಗಾದರೂ ಪ್ರಶಸ್ತಿಯಾಗಿ ಬಳಸಲ್ಪಡುವುದುಂಟು –ಚೈತನ್ಯಪ್ರಭು ಎಂಬಂತೆ. (2) ಈ ವಚನದಲ್ಲಿ ಪ್ರಭುದೇವರನ್ನು ಜಂಗಮವೆಂದು ಸಂಭಾವಿಸಿರುವಲ್ಲಿ-ಅವರು ಜ್ಞಾನಜಂಗಮರೇ ಹೊರತು ಜಾತಿಜಂಗಮರಲ್ಲವೆಂಬುದನ್ನು ತಿಳಿಯಬೇಕು. ಜಾತಿಬ್ರಾಹ್ಮಣಿಕೆಯನ್ನು ನಿರಾಕರಿಸಿದಷ್ಟು ಪ್ರಕರ್ಷವಾಗಿಯೇ ಜಾತಿಜಂಗಮತ್ವವನ್ನೂ ಬಸವಣ್ಣನವರು ನಿರಾಕರಿಸಿರುವರು. ಹೀಗೆ ಮಾನವರಲ್ಲಿ ಮೇಲುಕೀಳನ್ನರಸದೆ ಎಲ್ಲರನ್ನೂ ಶಿವಸ್ವರೂಪಿಗಳೆಂದು ಮಾನ್ಯ ಮಾಡಿದ್ದು-ಬಸವಣ್ಣನವರ ಸುಧಾರಣೆಗಳಲ್ಲಿ ಶ್ರೇಷ್ಠವಾದುದಾಗಿದೆ. ಮತ್ತು ಅದನ್ನು 895ನೇ ವಚನದಲ್ಲಿ “ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ” ಎಂದು ಬಸವಣ್ಣನವರು (ಮಾಳಿಗೆಯ ಮೇಲಿಂದ) ತಾರವಾಗಿಯೇ ಘೋಷಿಸಿರುವರು. (3) ಜಾತಿಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವವನ ಹೃದಯ ಒಂದು ಮಾಂಸಪಿಂಡವಲ್ಲ-ಅದೊಂದು ಅರಳಿದ ತಾವರೆ–ಅಲ್ಲಿ ಜೀವಭ್ರಮರವು ಶಿವನ ಪ್ರೇರಣೆಗೆ ಓಗೊಟ್ಟು ಝೇಂಕರಿಸುತ್ತಿರುತ್ತದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು