ಪ್ರಾಣಲಿಂಗಿಯ ಭಕ್ತಸ್ಥಲ - ಲಿಂಗ-ಜಂಗಮ
ನಿನ್ನ ನಾನರಿಯದ ಮುನ್ನ ನೀನೆಲ್ಲಿದ್ದೆ?
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.
Transliteration ನಿನ್ನ ನಾನರಿಯದ ಮುನ್ನ ನೀನೆಲ್ಲಿದ್ದೆ?
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.
Manuscript
English Translation 2 Before I knew Thee, where wast Thou?
Living in me, Thou did'st put on a form,
To manifest Thyself to me.
Henceforward I believe
That Jaṅgama is Liṅga, Lord
Kūḍala Saṅgama.
Translated by: L M A Menezes, S M Angadi
Hindi Translation मेरे तुम्हें जानने के पूर्व तुम कहाँ थे?
मुझमें रहकर निज को दिखाने के लिए
स्वयं रूप धारण किया ।
अब जंगम को ही लिंग माना,
कूडलसंगमदेव ॥
Translated by: Banakara K Gowdappa
Telugu Translation నిన్ను నే తెలియక ముందు; నీ వెందుంటివో!
నాలోన యుండి నీ వ్య క్తతకు నీవే రూపై తిపో!
ఇక జంగమమే లింగమంచు నమ్మితి సంగమదేవా!
Translated by: Dr. Badala Ramaiah
Tamil Translation உன்னை நான் அறியும்முன்பு
நீ எங்கு இருந்தாய்? என்
அகத்திலிருந்தவாறு உன்னைக்
காட்டுவதற்கு நீனே வடிவுற்றாய்
ஜங்கமமே இலிங்கம் என்று
நம்பினேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
तुला मी जाणून घेण्याआधी तू कोठे होतास ?
माझ्यात तुम्ही अव्यक्त होता, व्यक्त होण्यासाठी तू रुप धारण केले
म्हणून जंगमच लिंग आहे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಾಧಕನೊಬ್ಬನು ತನ್ನಲ್ಲಿರುವ ದೈವೀಶಕ್ತಿಯನ್ನು ಗುರುತಿಸಿಕೊಂಡಾಗ ಮಾತ್ರ –ಆ ದೈವದ ನಿರಾಕಾರಕ್ಕೊಂದು ಆರ್ಚಾರೂಪ ದೊರೆಯುತ್ತದೆ, ಶಿವನೆಂದೋ ನಟರಾಜನೆಂದೋ ಉಮಾಮಹೇಶ್ವರನೆಂದೋ ಆ ಸಾಧಕನಿಂದ ಉಪಾಸಿಸಲ್ಪಡುತ್ತದೆ. ಆದರೆ ಈ ವಿಧವಾದ ಶಿವೋಪಾಸನೆಯು ಸಾಂಗವಾಗುವುದು ಆ ಶಿವಭಕ್ತನು ತನ್ನ ನೆರೆಹೊರೆಯನ್ನು ಶಿವಸಮಾನವಾಗಿ ಗೌರವಿಸಿದಾಗಲೇ. ಆಗಲೇ ಶಿವನ ಮಾಯೆಯಿಂದಾಗಿ ಭಿನ್ನತೆ ಮಾಯಾವಾಗಿ ಏಕತೆ ನಿಲ್ಲುವುದು ಕೂಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು