•  
  •  
  •  
  •  
Index   ವಚನ - 824    Search  
 
ಪ್ರಾಣಲಿಂಗಿಯ ಭಕ್ತಸ್ಥಲ - ಜಂಗಮ
ಗುರು ಮುನಿದರೆ ಒಂದು ದಿನ ತಾಳುವೆ, ಲಿಂಗ ಮುನಿದರೆ ದಿನವರೆ ತಾಳುವೆ. ಜಂಗಮ ಮುನಿದರೆ ಕ್ಷಣಮಾತ್ರ ತಾಳಿದೆನಾದರೆ, ಎನ್ನ ಪ್ರಾಣದ ಹೋಕು! ಕೂಡಲಸಂಗಮದೇವಾ.
Transliteration Guru munidare ondu dina tāḷuve, liṅga munidare dinavare tāḷuve. Jaṅgama munidare kṣaṇamātra tāḷidenādare, enna prāṇada hōgu! Kūḍalasaṅgamadēvā.
Manuscript
English Translation 2 Should Guru rage, I stand it for one day; Should Liṅga rage, I stand it for half a day; Should Jaṅgama be angry, and I Should stand it for a moment, let My breath depart, O Kūḍala Saṅgama Lord; Translated by: L M A Menezes, S M Angadi
Hindi Translation गुरु के रूठने पर एक दिन सहूँगा; लिंग के रूठने पर आधा दिन सहूँगा; जंगम के रूठने पर क्षण मात्र सहूँ, तो मेरे प्राण निकल जायेंगे कूडलसंगमदेव ॥ Translated by: Banakara K Gowdappa
Telugu Translation గురుడు కోపింప దిన మోర్వగలను; లింగ మలిగిన దివసార్ధ మోర్వగలను జంగమ మలుగ క్షణమోర్చి నట్లైన నా ప్రాణమే పోవు కూడల సంగమదేవా! Translated by: Dr. Badala Ramaiah
Tamil Translation குரு சினந்தால் ஒரு நாள் பொறுப்பேன் இலிங்கம் சினந்தால் நாள்தோறும் பொறுப்பேன் ஜங்கமர் சினந்தால் ஒருகணம்கூட பொறுக்கவில்லை எனின், என்உயிரை அகற்றுவயாய் கூடல சங்கமதேவனே. Translated by: Smt. Kalyani Venkataraman, Chennai
Marathi Translation गुरु रागावले तर एक दिवस सहन करतो. लिंग रागावले तर अर्धा दिवस सहन करतो. जंगम रागावले तर क्षणभरही सहन केले तर, माझे प्राण जातील कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಮ್ಮೆ ಕಾಣಿಸಿಕೊಂಡು ಇನ್ನೊಮ್ಮೆ ಕಣ್ಣಿಗೆ ಬೀಳದೆ ಹೋಗಬಹುದಾದಂಥ, ಅತಿಥಿಯ ರೂಪದಲ್ಲಿ ಹಠಾತ್ತಾಗಿ ಬರುವ, ಬಂದು ನಿಲ್ಲದೇ ಹೋಗುವ ಜಂಗಮವನ್ನು ಉಪಚರಿಸುವಾಗ–ತನ್ನಿಂದೇನಾದರೂ ಅಪಚಾರವಾದೀತೆಂದು ಭಕ್ತನು ಬಹಳ ಎಚ್ಚರವಾಗಿರಬೇಕು. ಹಾಗೂ ಅಪಚಾರವಾಯಿತೋ ಆ ಕ್ಷಣವೇ ಕ್ಷಮೆ ಕೇಳಬೇಕು. ಹೀಗೆ ಜಂಗಮ ಮರಳಿ ಕೈಗೆ ಸಿಗುವುದಿಲ್ಲವೆಂಬ ಕಾರಣದಿಂದಲೇ ಅಲ್ಲ –ಗುರುಸೇವೆ ಸಾರ್ಥಕವಾಗುವುದು ವ್ಯಷ್ಟಿಸಿದ್ಧಿರೂಪವಾದ ಲಿಂಗಪೂಜೆಯಲ್ಲಿ, ಈ ಗುರುಸೇವೆ ಲಿಂಗಪೂಜೆಗಳೆರಡೂ ಸಾರ್ಥಕವಾಗುವುದು. ಸಮಷ್ಟಿಸಿದ್ಧಿರೂಪವಾದ ಜಂಗಮದಾಸೋಹದಲ್ಲಿ –ಎಂಬ ಅನ್ವಯಿಕ ತತ್ತ್ವಾತಿಶಯದ ದೃಷ್ಟಿಯಿಂದಲೂ ಜಂಗಮಾಪಚಾರವಾಗಬಾರದು. ಆದ್ದರಿಂದಲೇ –ಜಂಗಮ ಮುನಿದರೆ ಕ್ಷಣಮಾತ್ರ ತಾಳಿದೆನಾದರೆ ಎನ್ನ ಪ್ರಾಣದ ಹೋಕು” ಎಂದಿರುವರು ಬಸವಣ್ಣನವರು. ಈ ವಚನವನ್ನೇ ಆಧಾರಮಾಡಿಕೊಂಡು ಜಂಗಮವು ಅಪಚಾರದಿಂದ ಅಗಲಿದರೆ ಬಸವಣ್ಣನವರಿಗೆ ಪ್ರಾಣವೇ ಹೋಯಿತು, ಮರಳಿ ಜಂಗಮ ಬಂದರೆ ಪ್ರಾಣ ಬಂದಿತೆಂಬಂತೆ ಹಲವು ಪವಾಡ ಕಥೆಗಳು ಹುಟ್ಟಿಕೊಂಡಿವೆ ಬಸವಪುರಾಣದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು