•  
  •  
  •  
  •  
Index   ವಚನ - 825    Search  
 
ಪ್ರಾಣಲಿಂಗಿಯ ಭಕ್ತಸ್ಥಲ - ಜಂಗಮ
ಅರಸು ಮುನಿದರೆ ನಾಡೊಳಗಿರಬಾರದಯ್ಯಾ! ಗಂಡ ಮುನಿದರೆ ಹೆಂಡತಿಗೆ ಇರಬಾರದಯ್ಯಾ. ಕೂಡಲಸಂಗಮದೇವಯ್ಯಾ. ಜಂಗಮ ಮುನಿದರೆ ನಾನೆಂತು ಬದುಕುವೆ?
Transliteration Arasu munidare nāḍoḷagirabāradayyā! Gaṇḍa munidare heṇḍatiyāgirabāradayya. Kūḍalasaṅgamadēvayya. Jaṅgama munidare nānentu badukuve?
Manuscript
Music Courtesy:
English Translation 2 Should the king rage, you must depart His kingdom; should a husband rage, The wife must leave. O Kūḍala Saṅgama Lord, Should Jaṅgama rage, How can I live? Translated by: L M A Menezes, S M Angadi
Hindi Translation राजा के रूठने पर देश में नहीं रहना चाहिए, पति के रूठने पर पत्नी को नहीं रहना चाहिए, कूडलसंगमदेव, जंगम के रूठने पर मैं कैसे जीऊँ? Translated by: Banakara K Gowdappa
Telugu Translation నృపుడు కోపింప ఆ భూమి నిల్వరాదయ్యా: భర్త కోపింప యింట నిల్వతగదయ్య; జంగము డలిగిన నేనెట్లు బ్రతికెద సంగమదేవా? Translated by: Dr. Badala Ramaiah
Tamil Translation அரசன் சினந்தால் நாட்டிலிருக்கலாகாது கணவன் சினந்தால் வீட்டில் இருக்கலாகாது கூடல சங்கமதேவனே, ஜங்கமன் சினந்தால் நான் எப்படி வாழ்வே னையனே? Translated by: Smt. Kalyani Venkataraman, Chennai
Marathi Translation राजा रागावला तर राज्यात राहू नये देवा. पती रागावला तर घरात राहू नये देवा. कूडलसंगमदेवा, जंगम रागावला तर मी कसा जगू ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾಡೆಲ್ಲ ಅರಸಿನದು–ಅವನು ಮುನಿದರೆ–ಆ ನಾಡಿನಲ್ಲೆಲ್ಲೂ ಪ್ರಜೆಗೆ ಉಳಿಗಾಲವಿಲ್ಲ–ಅವನು ದೇಶ ಬಿಟ್ಟು ಹೋಗಬೇಕಾಗುವುದು. ಗಂಡ ಮನೆಗೆ ಒಡೆಯ–ಅವನು ಮುನಿದರೆ –ಆ ಮನೆಯೊಳಗೆಲ್ಲೂ ಹೆಂಡತಿಗೆ ಉಳಿಗಾಲವಿಲ್ಲ–ಆಕೆ ಮನೆಬಿಟ್ಟು ಹೋಗಬೇಕಾಗುವುದು. ಪ್ರಾಣದೊಡೆಯನಾದ ಜಂಗಮ ಮುನಿದರೆ ಆ ಭಕ್ತನು ಸತ್ತಂತೆಯೇ. ಭಕ್ತನ ಬದುಕೆಲ್ಲಾ ಜಂಗಮ ಸಂತೃಪ್ತಿಯ ಆಧಾರದ ಮೇಲೆ ಕಟ್ಟಿಕೊಂಡಿರುವುದಾಗಿ–ಜಂಗಮದಾಸೋಹವಿಲ್ಲದ ಭಕ್ತನ ಬಾಳು ಗಣ್ಯವಲ್ಲ. ಜಂಗಮನು ಅರಸನಂತೆ ನಮ್ಮ ಪಾರ್ಥಿವ ವಿಸ್ತಾರಕ್ಕೂ, ಗಂಡನಂತೆ ನಮ್ಮ ಮನದಾಳಕ್ಕೂ ಒಡೆಯನಾಗಿರುವನಾಗಿ –ಅವನ ಮೆಚ್ಚುಗೆಗೆ ಪಾತ್ರವಾಗದ ಭಕ್ತನ ಬಾಳು ಭ್ರಷ್ಟಬಾಳೆಂಬುದು ತಾತ್ಪರ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು