ಪ್ರಾಣಲಿಂಗಿಯ ಭಕ್ತಸ್ಥಲ - ಆತ್ಮಶುದ್ಧಿ
ಭೂತವೊಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ?
ಗುರುಕಾರುಣ್ಯವಾಗಿ ಹಸ್ತಮಸ್ತಕ ಸಂಯೋಗವಾದ ಬಳಿಕ
ಗುರುಲಿಂಗಜಂಗಮವೆ ಗತಿಯಾಗಿದ್ದೆ, ಕಾಣಾ,
ಕೂಡಲಸಂಗಮದೇವಾ.
Transliteration Bhūtavolidu ātmana sōṅkida baḷika
bhūtada guṇavallade ātmana guṇavuṇṭe?
Gurukāruṇyavāgi hastamastakasanyōgavāda baḷika
guruliṅgajaṅgamave gatiyāgidde, kāṇā,
kūḍalasaṅgamadēvā.
Manuscript
English Translation 2 After a valued element
Has touched the soul,
It has the nature of the element
But can it have the nature of the soul?
After, by Guru's grace,
The contact of my head with his palm,
My refuge has been only
Guru,Liṅga and Jaṅgama :
Mark that, Kūḍala Saṅgama Lord!
Translated by: L M A Menezes, S M Angadi
Hindi Translation भूत के प्रसन्न होकर आत्मा का स्पर्श करने के पश्चात्
भूत के गुण नहीं तो आत्मा के गुण हो सकते हैं?
गुरु कारुण्य से हस्त-मस्तक संयोग होने के पश्चात
गुरु लिंग जंगम ही मेरे शरण्य हैं, कूडलसंगमदेव॥
Translated by: Banakara K Gowdappa
Telugu Translation భూతము మెచ్చి ఆత్మ నలమినంత;
భూత ప్రకృతిగాక ఆత్మ గుణముండునే?
గురు కారుణ్యమున హస్తమస్తక సంయోగమైనంత;
గురులింగ జంగమమై యుందు కదరా కూడల సంగమదేవా!
Translated by: Dr. Badala Ramaiah
Tamil Translation பூதம் மனிதனைப் பிடித்தபிறகு
பூதத்தின் இயல்பின்றி, மனித இயல்பு உண்டோ?
குரு கருணையொடு தலையில் கைவைத்தபின்
குரு, இலிங்க ஜங்கமரே கதியாக
இருந்தேன், கூடல சங்கமதேவனே
Translated by: Smt. Kalyani Venkataraman, Chennai
Marathi Translation
भूत आत्म्यावर आरुढ झाल्यावर
भूताच्या गुणाविना आत्म्याचे गुण राहतील ?
गुरुकृपेने हस्त-मस्तक संयोग झाल्यावर
गुरुलिंगजंगम ही गती माझी कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಬ್ಬನಿಗೆ ದೆವ್ವಹಿಡಿದರೆ ಅವನು ಅದರಂತಾಡುತ್ತಾನೆ. ಅವನ ಮಾಮೂಲೀ ಸ್ವರವೂ ಇಲ್ಲವಾಗುತ್ತದೆ? ಅಭಿರುಚಿ ಮಾತುಕತೆ ಭಿನ್ನವಾಗುತ್ತದೆ. ಆಗ ಅವನು ಮಾನಸಿವಾಗಿ ತನ್ನದೆಂಬುದನ್ನೆಲ್ಲ ನೀಗಿಕೊಂಡು ಆ ದೆವ್ವವೇ ಅಗಿರುತ್ತಾನೆ.
ಸಾಮಾನ್ಯವಾದೊಂದು ದೆವ್ವದ ಪ್ರಭಾವ ಈ ಮಟ್ಟಿನದಾದರೆ-ಶ್ರೀಗುರುವಿನ ಪ್ರಭಾವ ಸಾಮಾನ್ಯವೇ? ಆ ಗುರು ಭಕ್ತನ ಮಸ್ತಕದ ಮೇಲೆ ಶ್ರೀ ಹಸ್ತವನ್ನಿಟ್ಟು, ಕಿವಿಯಲ್ಲಿ ಓಂಕಾರ ಪುರಸ್ಸರ ಪಂಚಾಕ್ಷರೀಮಂತ್ರವನ್ನು ಉಸುರಿ, ಕೈಯಲ್ಲಿ ಶಿವಲಿಂಗವನ್ನು ಇರಿಸಿದ ಮೇಲೆ –ಆ ಭಕ್ತನು ತಾನು ತನ್ನದೆಂಬ ಗಮನವೇನೊಂದೂ ಇಲ್ಲವಾಗಿ ಸೇವೆಯಲ್ಲಿ ಧ್ಯಾನದಲ್ಲಿ ಯೋಗದಲ್ಲಿ ತ್ಯಾಗದಲ್ಲಿ ಲೀನವಾಗುತ್ತಾನೆ ಎನ್ನುತ್ತಿರುವರು ಬಸವಣ್ಣನವರು.
ಶಿವಧರ್ಮದೀಕ್ಷೆಯನ್ನು ಸ್ವೀಕರಿಸಿದವನು ಹಾಗಾಗದೆ ಮೂಢ ಸಂಸಾರಿಯೇ ಆಗಿ ಉಳಿದರೆ ಅವನು ಮಾಮೂಲೀ ನರಮನುಷ್ಯನೇ ಹೊರತು ಶಿವಭಕ್ತನಲ್ಲವೆಂಬುದಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು