ಪ್ರಾಣಲಿಂಗಿಯ ಭಕ್ತಸ್ಥಲ - ಆತ್ಮಶುದ್ಧಿ
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ: ನೀವು ಕಾರಣ,
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ: ನೀವು ಕಾರಣ.
ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ, ನೀವು ಕಾರಣ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರಿಗೆ ಆಪ್ಯಾಯನವಾದರೆ ಎನಗೆ ತೃಪ್ತಿಯಾಯಿತ್ತು!
Transliteration Hasivu, tr̥ṣe, nidre, viśayavāgu mareyade: Nīnu kāraṇa,
kāma, krauḍha, lōbha, mōha, mada, matsaraṅga marade: Nīnu kāraṇa.
Pan̄cēndriya, saptadhātu, aṣṭhamadaṅga marade, nīnu kāraṇa.
Kūṭalasaṅgamadēvayya,
nim'ma śaraṇarige apyayanavadare enage tr̥ptiyāytu!
Manuscript
English Translation 2 Thou art the cause I shed
Hunger and thirst,
Sleep and all other sensual things.
Thou art the cause I shed
Lust, anger, greed,
Infatuation, envy, pride.
Thou art the cause I shed
The fivefold sense, the seven elements,
The eightfold pride.
O Kūḍala Saṅgama Lord,
That which contents Thy Śaraṇās ,
Contents me too!
Translated by: L M A Menezes, S M Angadi
Hindi Translation क्षुधा, तृषा, निद्रा, और विषयों को,
मैं भूल गया तुम ही कारण हो।
काम, क्रोध, लोभ, मोह, मद,
मात्सर्य मैं भूल गया, तुम ही कारण हो।
पंचेंद्रिय, सप्तधातु, अष्टमद
मैं भूल गया, तुम ही कारण हो।
कूडलसंगमदेव तव शरण संतुष्ट हो,
तो मैं संतुष्ट होऊँगा ॥
Translated by: Banakara K Gowdappa
Telugu Translation ఆకలి దప్పులు నిద్రా విషయముల మఱచితి;
కామక్రోధ లోభమోహ మదమత్సరముల మఱచితి;
కాన పంచేంద్రియ సప్తధాతు అష్టమదముల మఱచితి;
మీ శరణుల కాప్యాయన మయ్యెనా నాకు తృప్తి సంగయ్యా!
Translated by: Dr. Badala Ramaiah
Tamil Translation பசி, வேட்கை, உறக்கம், புலனின்பங்களை
மறந்தேன், நீங்கள்தான் காரணம்
காமம், சினம், உலோபம், மோகம், மதம்
பொறாமையை மறந்தேன், நீங்கள்தான் காரணம்
ஐம்புலன்கள், ஏழுதாதுக்கள், எண்மதங்களை
மறந்தேன், நீங்கள் தான் காரணம்
கூடல சங்கமதேவனே, உம் அடியார்
நிறைவுறின் எனக்கும் அது நிறைவு ஐயனே.
Translated by: Smt. Kalyani Venkataraman, Chennai
Marathi Translation
भूक तृष्णा, निद्रा, विषयांना विसरलो याला तुम्ही कारण !
कामक्रोध, मोह, मद, मत्सर विसरलो याला तुम्ही कारण !
पंचेंद्रिये, सप्तधातू, अष्टमद विसरलो याला तुम्ही कारण !
कूडलसंगमदेवा, तुमच्या शरणांची तृप्ती झाली तर माझी तृप्ती होईल.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣರಿಗೆ ತೃಪ್ತಿಯಾದರೆ ಅದು ತಮಗಾದ ತೃಪ್ತಿಯೆಂದು ಬಸವಣ್ಣನವರು ತಮ್ಮ ಹಸಿವು, ತಮ್ಮ ಬಾಯಾರಿಕೆ, ತಮ್ಮ ನಿದ್ರೆ, ತಮ್ಮ ಸ್ವಂತ ಸುಖಗಳನ್ನೂ ಲೆಕ್ಕಿಸಲಿಲ್ಲ. ಎಷ್ಟೋ ವೇಳೆ ಕೆಲವು ಶರಣರ ಸಂಬಂಧವಾಗಿ ತಮ್ಮ ಮನಸ್ಸು ಸಕಾರಣವಾಗಿಯೇ ವ್ಯಗ್ರಗೊಂಡರೂ–ಆ ತಮ್ಮ ಒಳಉಮ್ಮಳವನ್ನು ಸಹಿಸಿಕೊಂಡರೇ ಹೊರತು ನಾಯಕರಾಗಿದ್ದ ತಾವು ಆ ಭಿನ್ನ ಪಂಗಡದವರನ್ನು ದಂಡಿಸಲಿಲ್ಲ. ಅದಕ್ಕೆ ಬದಲಾಗಿ ತಮ್ಮ ರಕ್ತಮಾಂಸದ ತಾಮಸವನ್ನೇ ಹತ್ತಿ ತುಳಿದುಕೊಂಡು ತಮ್ಮ ಕಣ್ಣು ಮನ ನಾಲಗೆಯನ್ನೇ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದರು. ಇಷ್ಟೆಲ್ಲ ತ್ಯಾಗ ಕ್ಷಮೆ ಆತ್ಮಶಾಸನ ಅವಶ್ಯಕವಾಗಿತ್ತು –ಶರಣ ಸಮೂಹವೆಲ್ಲಿನೊಂದೀತೋ ಎನ್ನುತ್ತ ಒಳಹೊರಗೆಲ್ಲ ಭಕ್ತಿಯಾಗಿದ್ದ ಬಸವಣ್ಣನವರಿಗೆ.
ಇದಕ್ಕೊಂದು ಸಂದರ್ಭವನ್ನು ನಿದರ್ಶನವಾಗಿ ಕೊಡಬಹುದು. ಪ್ರಭುದೇವರು ಕಲ್ಯಾಣಕ್ಕೆ ಬಂದಾಗ –ಅವರಿಗೆ ಬಸವಣ್ಣನವರು ಮಾಡಿದ ವಿಶೇಷ ಸನ್ಮಾನವನ್ನು ಕಂಡು ಹಲವರು ಸಂಪ್ರದಾಯಸ್ಥ ಜಾತಿಜಂಗಮರು ಹೊಟ್ಟೆಕಿಚ್ಚುಪಟ್ಟರು. ಅವರಿಗೆ ಪ್ರಭುದೇವರ ಜಂಗಮತ್ವ ಒಪ್ಪಿಗೆಯಾಗಲಿಲ್ಲ. ಎಲ್ಲಿಂದಲೋ ಬಂದ ಒಬ್ಬ ಭಿಕಾರಿಯೇ ನಿನಗೆ ಪೂಜ್ಯ ಜಂಗಮನಾಗುವುದಾದರೆ ನಾವಿಲ್ಲಿ ಇರುವುದಿಲ್ಲವೆಂದು ಬಸವ-ಅಲ್ಲಮರಿಬ್ಬರನ್ನೂ ಬಹಿಷ್ಕರಿಸಿಹೋದರು. ಖಿನ್ನರಾದ ಬಸವಣ್ಣನವರು ಪ್ರಭುದೇವರನ್ನೇ ಕುರಿತು –“ಆನು ನಿಮ್ಮ ಕೃಪೆಯ ಪಡೆದು ಫಲವೇನಯ್ಯ -ನಿಮ್ಮ ಶರಣರು ಎನ್ನ ಮೇಲೆ ಮುನಿದು ಹೋದ ಬಳಿಕ ? ಕೂಡಲ ಸಂಗಮದೇವಯ್ಯ, ನಿಮ್ಮ ಶರಣರ ಮನದಲ್ಲಿ ಎನ್ನ ಮೇಲೆ ಕರುಣೆ ಹುಟ್ಟಿಬಪ್ಪಂತೆ ಮಾಡಯ್ಯ” ಎಂದು ಬೇಡಿಕೊಂಡರು (ನೋಡಿ ನನ್ನ ಶೂನ್ಯ ಸಂಪಾದನೆ, ವಚನ 799).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು