•  
  •  
  •  
  •  
Index   ವಚನ - 831    Search  
 
ಪ್ರಾಣಲಿಂಗಿಯ ಮಾಹೇಶ್ವರಸ್ಥಲ - ಭಕ್ತಿಭಾವ
ಅರ್ಥ ಪ್ರಾಣಭಿಮಾನವನೊಪ್ಪಿಸಿದಲ್ಲಿ ಭಕ್ತನಪ್ಪನೆ ? ಅಲ್ಲ. ಆದಿರುದ್ರನ ಮಗಳು ಆದಿಶಕ್ತಿ: ಆದಿಶಕ್ತಿಯ ಮಗ ವಿಷ್ಣು; ವಿಷ್ಣುವಿನ ಅರ್ಧಾಂಗಿ ಲಕ್ಷ್ಮಿ. ಈ ತೊತ್ತಿನ ತೊತ್ತಿನ ಪಡಿದೊತ್ತನೊಪ್ಪಿಸಿದಲ್ಲಿ ಭಕ್ತನಪ್ಪನೆ? ಅಲ್ಲ. ಎನ್ನ ಮನದೊಡೆಯ ಮಹಾದೇವಾ, ನಿಮ್ಮ ಮನವ ನಿಮಗೊಪ್ಪಿಸಿ ನಾ ಶುದ್ಧ, ಕಾಣಾ! ಕೂಡಲಸಂಗಮದೇವಾ.
Transliteration Artha prāṇābhimānavanoppisidaḷu bhaktanappane? Alla. Ādirudrana magaḷu ādiśakti: Ādiśaktiya maga viṣṇu; viṣṇuvina ardhāṅgi lakṣmi. Ī tottina tottina paḍidottanoppisidaḷu bhaktanappane? Alla. Enna manadoḍeya mahādēva, nim'ma manava nimagoppisi nā śud'dha, kāṇā! Kūḍalasaṅgamadēvā.
Manuscript
English Translation 2 Would I be a bhakta if I gave away My wealth, my life, my pride? Oh, no! The Primal Rudra's daughter is The Primal Force;Viṣṇu her son; And Lakúmi, Viṣṇu's spouse.... Woul I be a bhakta if I gave away This handmaid of a handmaid's maid? Oh, no! Great God, lord of my heart, Only by offering Thy heart to Thee, Shall I be pure: That's so,Kūḍala Saṅgama Lord! Translated by: L M A Menezes, S M Angadi
Hindi Translation अर्थ प्राणाभिमान अर्पित करूँ, तो भक्त बनूँगा? नहीं! आदि रूद्र की पुत्री आदिशक्ति है, आदिशक्ति का पुत्र विष्णु है, विष्णु की अर्धांगिनी लक्ष्मी है, इस दासी की दासी की दासी को अर्पित करूँ तो भक्त बनूँगा? नहीं, मेरे मन के स्वामी, महादेव तव मन तुम्हें अर्पित कर मैं शुद्ध हूँ कूडलसंगमदेव ॥ Translated by: Banakara K Gowdappa
Telugu Translation అర్థ ప్రాణాభిమానము లర్పించినంతనే భక్తుడగునే! కాడు; ఆదిరుద్రుని కూతురాదిశక్తి ఆదిశక్తి బిడ్డ విష్ణువు; విష్ణుని భార్య లక్ష్మి ఈ తొత్తు తొత్తుకు తొత్తును విడువగనే భక్తుడగునే కాడుమన్మనోనాయక మహాదేవ నా మనసు నీకు సమర్పించి నే శుచినౌదునయ్యా! Translated by: Dr. Badala Ramaiah
Tamil Translation செல்வம், உயிர், அபிமானத்தை அளிப்பின் பக்தன் ஆவானோ? அல்ல ஆதி உருத்திரனின் மகள் ஆதி சக்தி, ஆதிசக்தியின் மகன் திருமால், திருமாலின் மனைவி இலக்குமி இந்தத் தொண்டனின் தொண்டனின் தொண்டனின் கீழுள்ள தொண்டனை அளிப்பின் பக்தன் ஆவானோ? என் மனத்தின் உடையன் மகாதேவனே உம் மனத்தை உமக்கீந்த தூயோன் நான் காணாய் கூடல சங்கமதேவனே Translated by: Smt. Kalyani Venkataraman, Chennai
Marathi Translation अर्थप्राणअभिमान अर्पण करुन भक्तहोता येईल? नाही. आदिरुद्राची पुत्री आदिशक्ती, आदिशक्तीच पुत्र विष्णू, विष्णूची अर्धागी लक्ष्मी. या दासीच्या दासीच्या दासीला, अर्पण करून भक्त होता येईल ? नाही. माझ्या मनाचा स्वामी महादेवा, तुमचे मन तुम्हाला अर्पण करून मी शुध्द झालो कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬರೀ ದುಡ್ಡನ್ನು ಶಿವಾರ್ಪಿತ ಮಾಡಿದ ಮಾತ್ರದಿಂದ ಯಾರೂ ಭಕ್ತರಾಗುವುದಿಲ್ಲ. ಶ್ರೇಷ್ಠನಾದ ಶಿವನಿಗೆ ಸಮರ್ಪಿಸಿಕೊಳ್ಳಬಹುದಾದ ಸರ್ವಶ್ರೇಷ್ಠವಸ್ತುವೆಂದರೆ ಮನ. ಆ ಮನವನ್ನು ಶಿವನಿಗೆ ತೆತ್ತುಕೊಂಡವನೇ ಶಿವಭಕ್ತನಾಗಲು ಅರ್ಹನೆಂಬುದೀ ವಚನದ ಅಭಿಪ್ರಾಯ. ಮನವನ್ನು ಹೀಗೆ ಶಿವನಲ್ಲಿ ಲೀನಗೊಳ್ಳುವುದೇ ಶಿವಯೋಗವೆಂಬ ಧಾಟಿಯಿಂದ ಈ ವಚನ ಪ್ರಾಣಲಿಂಗಿಸ್ಥಲದಲ್ಲಿ ನಿರಿಗೆಗೊಂಡಿದೆ. ಆದಿರುದ್ರ –ಆದಿಶಕ್ತಿ (ಮಗಳು) –(ಮಗ) ವಿಷ್ಣು +(ಇವನ ಹೆಂಡತಿ) ಲಕ್ಷ್ಮಿ. ಶಿವ-ಸದಾಶಿವ-ಮಹೇಶ್ವರ ಎಂಬ ಮಹಾ ತತ್ತ್ವತ್ರಯದಲ್ಲಿ ಮಹೇಶ್ವರನನ್ನೇ ಆದಿರುದ್ರನೆಂದೂ, ಅವನ ಮಗನೇ ರುದ್ರನೆಂದೂ, ಆ ರುದ್ರನಿಂದ ವಿಷ್ಣು, ವಿಷ್ಣವಿಂದ ಬ್ರಹ್ಮನೂ ಹುಟ್ಟಿ ಸೃಷ್ಟಿಸ್ಥಿತಿ ಕಾರ್ಯ ನಡೆಯಿತೆಂದೂ ಹೇಳುವರು (ನೋಡಿ : ನನ್ನ ವೀರಶೈವ ತತ್ತ್ವಪ್ರಕಾಶ -ಪುಟ 50). ವಿ : ಅರ್ಥಪ್ರಾಣಭಿ ಮಾನವ ಎಂಬಲ್ಲಿ ಅರ್ಥವೆಂಬುದಷ್ಟೇ ಮೂಲ ಪಾಠವಿದ್ದಿರಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು