ಪ್ರಾಣಲಿಂಗಿಯ ಮಾಹೇಶ್ವರಸ್ಥಲ - ಲಿಂಗಜಂಗಮ
ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ
ಬಹುಜನ್ಮಕ್ಕೆ ತಂದಿಕ್ಕಿದೆಯಯ್ಯಾ ಎನ್ನನು.
ಎನಗೆ ಗುರುಪಥವ ತೋರಿದವರಾರು?
ಲಿಂಗಪಥವ ತೋರಿದವರಾರು?
ಜಂಗಮಪಥವ ತೋರಿದವರಾರು?
ಪಾದೋದಕ ಪ್ರಸಾದಪಥವ ತೋರಿದವರಾರು?
ತೋರುವ ಮನವೆ ನೀವೆಂದರಿದೆ!
ಎನಗಿನ್ನಾವ ಭಯವಿಲ್ಲಾ, ಕೂಡಲಸಂಗಮದೇವಾ.
Transliteration Munnina janmadalli guruliṅgajaṅgamava pūjisalariyada kāraṇa
bahujanmakke tandikkideyyā ennanu.
Enage gurupathava tōridavarāru?
Liṅgapathava tōridavarāru?
Jaṅgamapathava tōridavarāru?
Pādōdaka prasādapathava tōridavarāru?
Tōruva manave nīvendaride!
Enaginnāva bhavavilla, kūḍalasaṅgamadēvā.
Manuscript
English Translation 2 Because I did not know
To worship Guru, Liṅga and Jaṅgama
In a former birth,
You brought me back, and put me
In several births.
Who is it who showed me
The Guru path?
Who is it who shoed me
The Liṅga path?
Who is it who showed me
The Jaṅgama path?
Who is it who showed me
The Prasāda and Pādōdaka ?
I have known that
The spirit that showed all these
Is but Thyself.
Henceforth, O Kūḍala Saṅgama Lord,
I have no fear!
Translated by: L M A Menezes, S M Angadi
Hindi Translation पूर्व जन्म में गुरु लिंग जंगम
पूजा न जानने के कारण
तुमने मुझे बहु जन्मों में आने दिया ।
मुझे किसने गुरु-पथ दिखाया?
मुझे किसने लिंग-पथ दिखाया?
मुझे किसने जंगम-पथ दिखाया?
पादोदक प्रसाद किसने दिखाया?
मैंने जाना इन्हें दर्शानेवाला मन ही तुम हो ।
मुझे किसी बात का भय नहीं, कूडलसंगमदेव ॥
Translated by: Banakara K Gowdappa
Telugu Translation గురు లింగ జంగముల తొలిపుట్టున
పూజింపని కారణమున!
బహు జన్మలపాలు చేసితివయ్యా నను;
నాకు గురుపధము చూపెడి వారెవరు?
నాకు లింగపధము చూపెడి వారెవరు?
నాకు జంగమపధము చూపెడి వారెవరు?
పాదోదక ప్రసాదము చూపెడి వారెవరు?
చూపెడి మనసే నీవని తెలిసితి;
భయమిక నాకు లేదయ్యా
కూడల సంగమ దేవయ్యా!
Translated by: Dr. Badala Ramaiah
Tamil Translation முற்பிறவியில் குரு, இலிங்க, ஜங்கமத்தைப்
பூசிக்க அறியாததால், பல பிறவிகளில்
நீ என்னை வருமாறு செய்தனை, எனக்கு
குரு வழியை யார் காட்டினர்?
இலிங்க வழியை யார் காட்டினர்?
ஜங்கம வழியை யார் காட்டினர்?
திருவடித் திருநீர் பிரசாத வழியை
யார் காட்டினர்? காட்டும் மனமே நீ
என அறிந்தேன், எனக்கு இனி எந்தப்
பிறவியுமில்லை, கூடல சங்கமதேவனே.
Translated by: Smt. Kalyani Venkataraman, Chennai
Marathi Translation
पूर्व जन्मात गुरुलिंगजंगमाची पूजा न केल्याचे कारण
अनेक जन्मात घातले देवा मजला.
मला गुरुपथ दाखविणारा कोण?
लिंगपथ दाखविणारा कोण?
जंगमपथ दाखविणारा?
पादोदक-प्रसादपथ दाखविणारा कोण?
दाखविणारे मन तुम्हीच असल्याने
आता मला कोणता भव नाही कूडलसंगमदेवा.
लिंगपथ दाखविणारा कोण?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಗುರುಲಿಂಗಜಂಗಮವನ್ನರಿಯದ ಕಾರಣದಿಂದಾಗಿಯೇ -ಶಿವನು ತಮ್ಮನ್ನು (ಬ್ರಾಹ್ಮಣಜನ್ಮವೂ ಸೇರಿದಂತೆ) ಬಹುಜನ್ಮದಲ್ಲಿ ಬರಿಸಿದುದಾಗಿ –ಆ ಶಿವನಲ್ಲಿಯೇ ಬಸವಣ್ಣನವರು ಪಶ್ಚಾತ್ತಾಪಪೂರ್ವಕವಾಗಿ ನಿವೇದಿಸಿಕೊಳ್ಳುತ್ತ, ಆ ರೀತಿ ಜನ್ಮದಿಂದ ಜನ್ಮಕ್ಕೆ ಸುತ್ತುತ್ತಿದ್ದ ತಮ್ಮ ಬಗ್ಗೆ ಕನಿಕರಿಸಿ ತಮಗೆ–ಗುರುವನ್ನು ಲಿಂಗವನ್ನು ಜಂಗಮವನ್ನು ಪ್ರಸಾದವನ್ನು ಪಾದೋದಕವನ್ನು ಪಡೆಯಬೇಕೆಂಬ ಬುದ್ಧಿಯನ್ನೂ, ಅದಕ್ಕೆ ತಕ್ಕ ಮಾರ್ಗವನ್ನೂ ಆ ಶಿವನೇ ತಮ್ಮ ಹೃದಯಸ್ಥಾನದಲ್ಲಿ ನಿಂತು ಪ್ರೇರಿಸಿ ತೋರಿಸಿ ಕಾಪಾಡಿದ್ದಕ್ಕೆ ಕೃತಕೃತ್ಯತೆಯನ್ನು ಸೂಸುತ್ತಿರುವರು.
ಬಸವಣ್ಣನವರು ಹೀಗಾಗಿ ತಮ್ಮ ಪ್ರಸ್ತುತಜನ್ಮದಲ್ಲಿಯಂತೂ ಯಾವ ಭ್ರಮೆಯೂ ಭಯವೂ ಇಲ್ಲದೆ ಗುರುಪಥದಲ್ಲಿ ಲಿಂಗಾಭಿಮುಖವಾಗಿ ಜಂಗಮದ ಜೊತೆಗೂಡಿ ಅಲ್ಲಲ್ಲಿಗೆ ಪ್ರಸಾದದ ಬುತ್ತಿಯನ್ನು ಬಿಚ್ಚಿ, ಪಾದೋದಕಸರೋವರದ ತಡಿಯಲ್ಲಿ ವಿಶ್ರಮಿಸುತ್ತ ಆ ದಿವ್ಯಜೀವನಮಾರ್ಗವೆಲ್ಲಾ ಮುಕ್ತಿಸ್ಥಾನವೇ ಆದಂತೆ ಮೋದಗೊಂಡಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು