•  
  •  
  •  
  •  
Index   ವಚನ - 834    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ದಾಸೋಹ
ಜನ್ಮ ಜನ್ಮಕ್ಕೆ ಹೋಗಲೀಯದೆ, `ಸೋಹಂ' ಎಂದೆನಿಸದೆ `ದಾಸೋಹಂ' ಎಂದೆನಿಸಯ್ಯಾ. ಲಿಂಗಜಂಗಮದ ಪ್ರಸಾದದ ನಿಲವ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ, ನಿಮ್ಮ ಧರ್ಮ!
Transliteration Janma janmakke hōgalīyade, `sōhaṁ' endenisade `dāsōhaṁ' endenisayya. Liṅgajaṅgamada prasādada nilava tōri badukisayyā, kūḍalasaṅgamadēvā, nim'ma dharma!
Manuscript
English Translation 2 Let me not pass from birth to birth, Let me not utter 'I am He', But only 'Thy servant I'. Show me the worth of Prasāda Of Liṅga 's and Jaṅgama And let me live, I pray Thee, Kūḍala Saṅgama Lord! Translated by: L M A Menezes, S M Angadi
Hindi Translation जन्म जन्म में जाने न दो, सोऽहं न कहाकर दासोऽहं कहाओ लिंग-जंगम प्रसाद की स्थिति दर्शाकर कृपया मुझे जीवनदान दो कूडलसंगमदेव॥ Translated by: Banakara K Gowdappa
Telugu Translation జన్మజన్మల పడద్రోయకు సోహంబనిపింపకు దాసోహంబనిపింపుమయ్యా: లింగ జంగమ ప్రసాదముల నెలవు చూపి బ్రతికింపుమయ్యా కూడల సంగమదేవా నీదయ! Translated by: Dr. Badala Ramaiah
Tamil Translation பலபிறவிகளுக்குச் செல்ல விடாது “ஸோஹம்” என்னாது “தாஸோஹம்” என்னீரையனே இலிங்க, ஜங்கம பிரசாதத்தின் நிலையைக் காட்டி வாழவைப்பாய் கூடல சங்கனே உம் அறம். Translated by: Smt. Kalyani Venkataraman, Chennai
Marathi Translation पुन्हा पुन्हा जन्म घेऊ नये. सोऽहं न म्हणविता दासोऽहं म्हणवावे देवा. लिंग जंगम प्रसादाचा महिमा दाखवून जगवावे देवा. कूडलसंगमदेवा तुमचा धर्म. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಭಕ್ತನು ಮಾಡಬಾರದ ಎರಡು ಮಹಾಪರಾಧಗಳೆಂದರೆ –ಅಹಂಕಾರಿಯಾಗಿರುವುದು ಮತ್ತು ಫಲಿತಾಂಶವಾಗಿ ಭವಾಂತರದಲ್ಲಿ ತಿರಿಯುವುದು. ಅವನ ಜೀವನಮಂತ್ರ ದಾಸೋಹಂ ದಾಸೋಹಂ ಎಂದಾಗಿರಬೇಕೇ ಹೊರತು ಶಿವೋಹಂ ಶಿವೋಹಂ ಎಂದಲ್ಲ. ಶಿವೋಹಮ್ಮೆಂದು ಹಮ್ಮಿಂದ ಕಣ್ಣುಮುಚ್ಚಿರುವುದಕ್ಕಿಂತ –ದಾಸೋಹಮ್ಮೆಂದು ವಿನಯವಾಗಿ ಸಮಷ್ಟಿಗಾಗಿ ದುಡಿಯುವುದೇ ಸ್ವೀಕರಿಸಿದ ಲಿಂಗಜಂಗಮಪ್ರಸಾದಕ್ಕೆ ಶೋಭೆ ತರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು