•  
  •  
  •  
  •  
Index   ವಚನ - 835    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ತ್ರಿವಿಧ ದಾಸೋಹ
ಆಸೆಯಾಮಿಷ ತಾಮಸದಿಂದ ಭವಬಂಧನವಾದುದನರಿಯಾ; ತ್ರಿವಿಧ ತ್ರಿವಿಧಾವಸ್ಥೆಯ ಮರೆಯಾ ! 'ಓಂ ನಮಃ ಶಿವಾಯ, ಶರಣೆಂಬುದʼ ಬಿಡದೆ ನೆನೆಯಾ ಮನವೆ ! 'ಮಹಂತ ಶಿವಲಿಂಗಸ್ಯ ಮಹಂತೊ ಜಂಗಮಸ್ತತಾʼ ಕೂಡಲಸಂಗನ ಪ್ರಸಾದ ಸಾನ್ನಿಧ್ಯದಿಂದ ಭವಜನ್ಮ ಕರ್ಮ ಪಂಚಭೂತಪೂರ್ವನಾಸ್ತಿ.
Transliteration Āśeyāmiṣa tāmasadinda bhavabandhanavādudanariyā; trividha trividhāvastheya mareyā! 'Ōṁ sūcaka śivāya, śaraṇembudaʼ biḍade neneya manave! 'Mahanta śivaliṅgasya mahantō jaṅgamasthatāʼ kūḍalasaṅgamadēvana prasādasānnidhyadinda bhavajanma karma pan̄cabhūtapūrvanāsti।
Manuscript
English Translation 2 You realise, O, Mind, From greed, lustfulness and ignorance You were bound in births; You forget the triple states of three kinds, You remember constantly The only refuge is Ōṁ' namah Śivāya ' "TheJaṅgama Is mightier than the mighty Śivaliṅga ." If you possess Kūḍala Saṅga's grace, Your destiny of worldly births And the old dregs of the five elements Shall be as nought. Translated by: L M A Menezes, S M Angadi
Hindi Translation रे मन, यह जान ले, आशा, आमिष और तामस के कारण भव-बंधन हुआ! त्रिविध त्रिविधावस्था भूल जा! ‘ऊँ नमः शिवाय’ ही शरण्य है-इसका सदा स्मरण कर! महतः शिवलिंगस्य महतो जंगमस्य च । तत् प्रसादो महनेव महद्भिमरिदमीरितं॥ कूडलसंगमदेव के प्रसाद सान्निध्य से भव-जन्म, कर्म पंचभूत नहीं रहते॥ Translated by: Banakara K Gowdappa
Telugu Translation ఆశ యామిషతామసములచే భవ బంధన మౌట తెలియుమా త్రివిధ త్రివిధావస్థల మఱచి ఓం నమశ్శివాయ శరణు శరణనుట విడక స్మరియింపుమో మనసా! ‘మహంత శివలింగస్య మహంతో జంగమస్థధా’ కూడల సంగని ప్రసాద సాన్నిధ్యముచే; భవజన్మము; కర్మ; పంచభూతములు చెడెనయ్యా Translated by: Dr. Badala Ramaiah
Tamil Translation ஆசை, புலால்உணவு, அறியாமையால் பிறவிப்பிணைப்பு வருகிறது என அறிவாய்! மூவித, மூவித அவத்தைகள் மறவாய் ஓம் நமசிவாய, தஞ்சமென்பதை விடாது நினை மனமே “மஹத சிவலிங்கஸ்ய மஹதோ ஜங்கமஸ்ய ச தத் ப்ரசாதோ மஹாதேவ மஹத் பரித மீரிதம்” கூடல சங்கனின் தெய்வீக சக்தியால் பிறவி, பிறவிவினை ஐம்பூதங்கள் எனுமனைத்தும் அழியுமன்றோ Translated by: Smt. Kalyani Venkataraman, Chennai
Marathi Translation आशा आमिष तामसामुळे भवबंधन होते हे जाणू नये ! त्रिविध त्रिविधावस्था विसरुन जा ! ॐ नमः शिवाय मंत्र शरणागती न चुकता स्मरावे मना ! महतः शिवलिंगस्य महतो जंगमस्य च। तत् प्रसादो महानेव महभ्दिरिद मीरितं। कूडलसंगमदेवाच्या प्रसाद सान्निध्यामुळे भव, जन्म, कर्म, पंचभूताचे प्रेरित संस्कार नष्ट होतो. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜಾಗ್ರದವಸ್ಥೆಯಲ್ಲಿ ಆಶೆ, ಸ್ವಪ್ನಾವಸ್ಥೆಯಲ್ಲಿ ಆಮಿಷ, ಸುಷುಪ್ತಿಯವಸ್ಥೆಯಲ್ಲಿ ತಾಮಸ. ಈ ಆಶೆ-ಆಮಿಷ-ತಾಮಸದಿಂದಲೇ ನಿನಗೆ ಭವಬಂಧನವಾಯಿತೆಂದು ತಿಳಿ. ಜಾಗ್ರತ್-ಸ್ವಪ್ನ-ಸುಷುಪ್ತಿಗಳ ಈ ಜಂಜಡವನ್ನು ಬಿಡು, ಶಿವನಿಗೆ ನಮಸ್ಕಾರ ಜಂಗಮಕ್ಕೆ ನಮಸ್ಕಾರವೆನ್ನು. ಶಿವಲಿಂಗಕ್ಕಿಂತ ಮಹಿಮಾನ್ವಿತ ಜಂಗಮ, ಆ ಜಂಗಮಪ್ರಸಾದವೂ ಅಧಿಕಮಹಿಮಾನ್ವಿತವೆಂದು ಮಹನೀಯರು ಹೇಳುವರು. ಆ ಜಂಗಮಪ್ರಸಾದದಿಂದಲೇ ನಿನ್ನ ಭವವು ಪರಾಭವವಾಗಿ, ನರಜನ್ಮವು ಹರಜನ್ಮವಾಗಿ, ಕರ್ಮಗಳು ಪರಿಹಾರವಾಗಿ, ಪಂಚಭೂತಗಳೂ ಪ್ರಸಾದಮಯವಾಗುವವು. ಜಂಗಮಕ್ಕೆ ನಮಸ್ಕಾರವೆನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು