•  
  •  
  •  
  •  
Index   ವಚನ - 836    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ಮುಕ್ತಿ
ಬೆಟ್ಟಕ್ಕೆ ಬೆಳ್ಳಾರ ಸುತ್ತಿತ್ತಯ್ಯಾ: ಪಾಪದ ಬಲೆಯ ತಂದು ಮುಂದೊಡ್ಡಿದಿರಯ್ಯಾ. ಬೇಟೆಕಾರನು ಮೃಗವನಟ್ಟಿ, ಮೃಗ ಗೋರಿಗೊಳಗಾಗದಯ್ಯಾ! ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವು ಕೂಡಲಸಂಗಮಂಗೆ ಓಗರವಾಯಿತ್ತಯ್ಯಾ!
Transliteration Beṭṭakke beḷḷāra suttitayya: Pāpada baleya tandu mundoḍḍidirayyā. Bēṭekāranu mr̥gavanaṭṭi, mr̥ga gōrigoḷagādayyā! Haranoḍḍida baleyalli silukida mr̥gavu kūḍalasaṅgamaṅge ōgaravāyittayyā!
Manuscript
English Translation 2 The snare goes roung the mount: The hunter brought the net of sin And flung it down in front of the beast. Although the huntsman beat the game, The quarry is not decoyed; The beast that has been caught Within the net that Hara has spread Has made a meal For Kūḍala Saṅgama! Translated by: L M A Menezes, S M Angadi
Hindi Translation पर्वत, जाल से आवृत था, व्याध ने पाप जाल समक्ष फैलाया, और मृग का पीछा किया, मृग जाल में न फँसा । हर के फैलाए जाल में जो मृग फँसा वह कूडलसंगमदेव का भोग बना ॥ Translated by: Banakara K Gowdappa
Telugu Translation కొండచుట్టూ వల చుట్టబడెనయ్యా, పాపపు వల తెచ్చి ముందొడ్డిరయ్యా; వేటకాడు మృగము వెన్నంటే కాని జింకగురికి చిక్కదయ్యె హరుడొడ్డిన వలకు చిక్కి ఆమృగము సంగనికి ఆహారమై పోయెనయ్యా Translated by: Dr. Badala Ramaiah
Tamil Translation மலையின்மீது வலை விரித்தனர் பாவத்தின் வலையை முன்னே வைத்தனர் வேட்டைக்காரன் விலங்கை விரட்டி வர விலங்கு வலையில் விழாது ஐயனே அரன் விரித்த வலையில் சிக்கிய விலங்கு கூடல சங்கம தேவனுடன் ஒன்றியது ஐயனே. Translated by: Smt. Kalyani Venkataraman, Chennai
Marathi Translation पर्वतावर जाळे वेढले देवा, पापाचे जाळे आणून समोर पसरले देवा. शिकाऱ्याने मृगाचा पाठलाग केला पण मृग फसला नाही. देवाने पसरलेल्या जाळ्यात सापडलेला मृग कूडलसंगमदेवाला अर्पित झाला. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಂದು ಕಡೆ ಈ ಜೀವಕ್ಕೆ ಮೃತ್ಯುವೆಂಬ ವ್ಯಾಧನು ಸಂಸಾರದ ಕರಾಳವಾದ ಬಲೆಯನ್ನು ಬೀಸಿ-ಅಲ್ಲಿ ತೊಡರಿಬೀಳಲೆಂದು ಅವನು ಅದನ್ನು ಬೆನ್ನು ಹತ್ತಿರುವನು. ಇನ್ನೊಂದು ಕಡೆ ಶಿವನು ತನ್ನ ಕಾರುಣ್ಯದ ಬಲೆ ಬೀಸಿ ಕಾಯುತ್ತಿರುವನು. ಎತ್ತರಕ್ಕೆ ನೆಗೆಯುವುದಕ್ಕೆ ಹೆಸರುವಾಸಿಯಾದ ಆ ಜಿಂಕೆ ಆ ಮೃತ್ಯುವಿನ ಬಲೆಗೆ ಬೀಳದೆ ಉತ್ತರಿಸಿ ಶಿವನ ಬಲೆಗೆ ಸಿಲುಕಿದರೆ–ಆಗ ಅದರ ಮಾಂಸಕಾಯವು ಪ್ರಸಾದಕಾಯವಾಗಿ ಶಿವನಿಗರ್ಪಿತವಾಗುವುದು. ಅಂದರೆ –ಮೃತ್ಯುವಿಗೆ ಬೇಕಾದುದು ಮಾಂಸ, ಆ ಮಾಂಸಲತೆಗೆ ಮಹತ್ವಕೊಟ್ಟು ಅದರ ಭಾರದಿಂದಲೇ ಸಂಸಾರದೊಳಕ್ಕೆ ಬೀಳುವ ಈ ಜೀವನಿಗೆ ದುರಂತ ತಪ್ಪಿದ್ದಲ್ಲ. ಅದೊಂದು ಪಕ್ಷ ತನ್ನ ಮಾಂಸಲತೆಯನ್ನು ಅವಲಂಬಿಸಿದೆ –ತನ್ನಲ್ಲಿರುವ ಶಿವಚೈತನ್ಯವನ್ನು ಉತ್ತೇಜಿಸಿಕೊಂಡು ಊರ್ಧ್ವಗಾಮಿಯಾದರೆ –ಅದು ಶಿವನ ಕೈಸೇರುವುದು. ಜೀವರನ್ನು ಮೃತ್ಯುವಿಂದ ಅಮೃತಕ್ಕೆ ಒಯ್ಯುವನು ಶಿವನೆಂಬ ಮಾತನ್ನು ಕೇಳಿಲ್ಲವೆ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು