ಪ್ರಾಣಲಿಂಗಿಯ ಪ್ರಸಾದಿಸ್ಥಲ - ಲಿಂಗನಿಷ್ಠೆ
ಪರಿಯಾಣವೆ ಭಾಜನವೆಂಬರು; ಪರಿಯಣ ಭಾಜನವಲ್ಲ,
ಲಿಂಗಕ್ಕೆ ತನ್ನ ಮನವೆ ಭಾಜನ.
ಪ್ರಾಣವನು ಬೀಸರವೋಗದೆ ಮೀಸಲಾಗರ್ಪಿಸಬಲ್ಲರೆ
ಕೂಡಿಕೊಂಡಿರ್ಪ, ನಮ್ಮ ಕೂಡಲಸಂಗಮದೇವ.
Transliteration Pariyāṇave bhājanavembaru; pariyāṇa bhājanavalla,
liṅgakke tanna manave bhājana.
Prāṇavanu bīsaravogade mīsalāgarpi saballare
kūḍikoṇḍirpa, nam'ma kūḍalasaṅgamadēva.
Manuscript
English Translation 2 Although they say the plate is fit,
It is not fit.
One's heart is fit for God.
Spoil not your life
If you preserve it and dedicate,
Our Lord Kūḍala Saṅgama
Shall live in union with you.
Translated by: L M A Menezes, S M Angadi
Hindi Translation कहते हैं, थाल ही भाजन है
किंतु थाल भाजन नहीं है ।
लिंग के लिए मन ही भाजन है
प्राणों को अपवित्र होने न देकर
समर्पित कर सको, तो त्वल्लीन होंगे भवल्लीन
मम कूडलसंगमदेव ॥
Translated by: Banakara K Gowdappa
Telugu Translation కంచమే భాజనమందురు కంచము భాజనముకాదు,
లింగమునకు తన మనసే భోజనము
ప్రాణము వ్యర్థముగాక మునుపె; ముడుపుకట్టి
చెల్లింవ నేర్పిన కూడుకొనుగాదె కూడల సంగమదేవుడు.
Translated by: Dr. Badala Ramaiah
Tamil Translation உணவுத் தட்டையே படையல் என்பர்
தட்டு படையலன்று
இலிங்கத்திற்குத் தன் மனமே தட்டு
தன் உயிரை, வீணாக்காது, படையலாகப்
படைக்கவியன்றால், நம் கூடல சங்கன்
கூடிக் கொள்வான் ஐயனே.
Translated by: Smt. Kalyani Venkataraman, Chennai
Marathi Translation
थाळीला नैवेद्य म्हणतात, थाळी नैवेद्य नाही.
लिंगाला (नैवेद्यासाठी) आपले मन हेच नैवेद्य आहे.
प्राणाला व्यर्थ न सोडता अर्पण केला तर प्रसन्नतेने घेईल
आमचा कूडलसंगमदेव.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಲಿಂಗಕ್ಕೆ ಅನ್ನನೈವೇದ್ಯವನ್ನು ಹರಿವಾಣದಲ್ಲಿ ಅರ್ಪಿಸುವರು. ಆದರೆ ಲಿಂಗನೈವೇದ್ಯಕ್ಕೆ ತಕ್ಕ ಪಾತ್ರೆ ಜಡವಾದೊಂದು ಹರಿವಾಣವಲ್ಲ, ಆ ನೈವೇದ್ಯ ಅನ್ನವೂ ಅಲ್ಲ.
ನಿಜವಾದ ಭಕ್ತನು ಸುವೃತ್ತಗನಪರಿಶುದ್ಧವಾದ ತನ್ನ ಮನಸ್ಸನ್ನೇ ಹರಿವಾಣಮಾಡಿ ಅಲ್ಲಿ ತನ್ನ ಪ್ರಾಣಪಂಚಾಮೃತವನ್ನು ಲಿಂಗಕ್ಕೆ ಮೀಸಲಾಗಿ ಅಪಿಸುವನು. ಅಂದರೆ ಮನಸಯೋಗದಿಂದ ಪ್ರಾಣವನ್ನು ಸಹಸ್ರಾರಕ್ಕೇರಿಸಿ ಅದನ್ನು ಶಿವನಿಗೆ ಅರ್ಪಿಸುವಲ್ಲಿ ಹಿಂತೆಗೆಯುವುದಿಲ್ಲ. ಶಿವಭಕ್ತನು ಎಂಬುದು ಈ ವಚನದ ಅಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು