ಪ್ರಾಣಲಿಂಗಿಯ ಪ್ರಸಾದಿಸ್ಥಲ - ಲಿಂಗಜಂಗಮ
ಆತ್ಮ ಲಿಂಗ, ಪರಮಾತ್ಮ ಜಂಗಮ;
ತನು ಮಧ್ಯೆ ಪ್ರಸಾದವಾಯಿತ್ತು,
ನಿಶ್ಚಿಂತ ನಿವಾಸವಾಯಿತ್ತು.
ಕೂಡಲಸಂಗನ ಶರಣರ ಸಂಗದಿಂದ
ನಿಶ್ಚಿಂತ ನಿವಾಸವಾಯಿತ್ತು!
Transliteration Ātma liṅga, paramātma jaṅgama;
tanu madhye prasādavāyittu,
niścinta nivāsavāyittu.
Kūḍalasaṅgana śaraṇara saṅgadinda
niścinta nivāsavāyittu!
Manuscript
English Translation 2 The soul is Liṅga, the universal Soul
Is Jaṅgama: between these two
The body has become a grace-
A haven of tranquility...
Through association with
Kūḍala Saṅga's Śaraṇās ,
It has become
A haven of tranquility!
Translated by: L M A Menezes, S M Angadi
Hindi Translation आत्मा लिंग है, परमात्मा जंगम,
बीच में तन प्रसाद बना,
निश्चिंत निवास बना
कूडलसंगमेश के शरणों के संग से
निश्चिंत निवास बना॥
Translated by: Banakara K Gowdappa
Telugu Translation ఆత్మ లింగము; పరమాత్మ జంగమము
తనువు ప్రసాదమై యుండె:
చింత దక్కి నిలచియుండె; సంగనిశరణుల
నడుమ నిశ్చింత నివాసమై యుండె.
Translated by: Dr. Badala Ramaiah
Tamil Translation ஆன்மா இலிங்கம், ஜங்கமன் பரம்பொருள்
உடலின் நடுவில் பிரசாதமாயிற்று
அமைதியின் இருப்பிடமாயிற்று
கூடல சங்கனின் அடியார் தொடர்பால்
அமைதியின் இருப்பிடமாயிற்று
Translated by: Smt. Kalyani Venkataraman, Chennai
Marathi Translation
आत्मलिंग आहे, परमात्मा जंगम आहे.
यातील दोन्ही मिळून तनू प्रसाद झाली,
कूडलसंगाच्या शरणसंगामुळे निश्चित-निवास झाली.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜೀವನೇ ಇಷ್ಟಲಿಂಗ, ಪರಮಾತ್ಮನೇ ಪ್ರಾಣಲಿಂಗ –ಈ ಎರಡರ ನಡುವೆ ಪ್ರಸಾದ ಉಂಟಾಯಿತು. ಅಚಿಂತ್ಯವಾದ ಪರಬ್ರಹ್ಮವೇ ಶರಣನಿಗೆ ಆಶ್ರಯಸ್ಥಾನವಾಯಿತು. ಶಿವಶರಣರ ಸಂಪರ್ಕದಿಂದ ಶಿವಭಕ್ತನಿಗೆ ಹೀಗೆ ಪರವಸ್ತುವೇ ನಿವಾಸವಾಯಿತು–ಎನ್ನುವುದು ಒಂದು ಪ್ರಾಚೀನ ವ್ಯಾಖ್ಯಾನ.
ಜೀವಾತ್ಮ ಭವಿಯಾಗಿ ಪರಮಾತ್ಮ ಗೈರುಹಾಜರಾಗಿರುವ ಈ ದೇಹವು ಭೂತಬಂಗಲೆಯಾಗಿ ದುಃಖ ನಿವಾಸವಾಗುವುದೆಂಬುದು ಈ ವಚನದ ನೇತ್ಯಾತ್ಮಕವಾದ ವ್ಯಾಖ್ಯಾನ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು