•  
  •  
  •  
  •  
Index   ವಚನ - 840    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ಜಂಗಮ
ಜಂಗಮವೆ ಲಿಂಗವೆನಗೆ, ಜಂಗಮವೆ ಪ್ರಾಣವೆನಗೆ. ಕೂಡಲಸಂಗಮದೇವಯ್ಯಾ, ಎನಗೆಯೂ ನಿನಗೆಯೂ ಜಂಗಮ ಪ್ರಸಾದವೇ ಪ್ರಾಣ.
Transliteration Jaṅgamave liṅgavenage, jaṅgamave prāṇavenage. Kūḍalasaṅgamadēvayya, enageyū ninageyū jaṅgamaprasādavē prāṇa.
Manuscript
English Translation 2 Jaṅgama is Liṅga to me, Jaṅgama is life. O Kūḍala Saṅgama Lord, for you and me The grace of is life! Translated by: L M A Menezes, S M Angadi
Hindi Translation मेरे लिए जंगम ही लिंग है, जंगम ही प्राण है । कूडलसंगमदेव मेरे लिए और तुम्हारे लिए जंगम-प्रसाद ही प्राण है॥ Translated by: Banakara K Gowdappa
Telugu Translation జంగమమే లింగము నాకు; జంగమమే ప్రాణము నాకు; సంగా నాకూ నీకూ జంగమప్రసాదమే ప్రాణము కదయ్యా, Translated by: Dr. Badala Ramaiah
Tamil Translation எனக்கு ஜங்கமனே இலிங்கம், எனக்கு ஜங்கமனே உயிர், கூடல சங்கமதேவனே எனக்கும் உனக்கும் ஜங்கமபிரசாதமே உயிர் Translated by: Smt. Kalyani Venkataraman, Chennai
Marathi Translation जंगम हे लिंग आहे मला , जंगम हा गुरू आहे मला, जंगम हा प्राण आहे मला. कूडलसंगमदेवा, मला आणि तुला जंगमप्रसाद हाच प्राण. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜಂಗಮವು ಗೌರವಾರ್ಹವೆಂದು ಗಣನೆಯಾಗಬೇಕು –ಅದು ಲಿಂಗದಂತೆ ಪೂಜ್ಯವಾಗಬೇಕು, ಪ್ರಾಣದಂತೆ ಪ್ರಿಯವಾಗಬೇಕು. ಏಕೆಂದರೆ ಜಂಗಮದರ್ಶನವಿಲ್ಲದೆ ಶಿವನೆಂಬ ಮಾತು ಕುರುಡು ಕುರುಡು. ಆ ಜಂಗಮದ ಆದರ್ಶಕಲ್ಪನೆಯಿಲ್ಲದೆ ಭಕ್ತನ ಶಿವಪೂಜಾದಿಕ್ರಿಯೆಗಳೂ ಕುರುಡು ಕುರುಡು. ಚಿತ್ರಕ್ಕೊಂದು ಕಣ್ಣಿಟ್ಟಾಗ ಅದು ಸಜೀವ ಕಾಣುವಂತೆ -ಭಕ್ತನಿಗೆ ಜಂಗಮಕಲ್ಪನೆಯಿಂದ ಒಂದು ಜೀವನದರ್ಶನ ದೊರೆಯುವುದು. ಲಿಂಗಕ್ಕಾದರೂ ಜಂಗಮ ಪರ್ಯಾಯತೆಯಿಂದ ಸಾಂಗತ್ಯ ದೊರೆಯುವುದು. ಜೀವರತ್ನವನ್ನು ಮುಕುಟಮಣಿ ಮಾಡಿಕೊಳ್ಳದ ಯಾವ ಧರ್ಮಕ್ಕಾಗಲಿ ಏನು ಬೆಲೆಯಿದೆ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು