ಪ್ರಾಣಲಿಂಗಿಯ ಪ್ರಸಾದಿಸ್ಥಲ - ಲಿಂಗ-ಜಂಗಮ
ಅಯ್ಯಾ , ನೀನೆಂದರೆ ಎಂಬೆನು:
"ನಿನ್ನ ಹಂಗೇನು ಹರಿಯೇನು?
ನಿನ್ನ ಮುಖದಲ್ಲಿ ಒಂದಗುಳು ಸವೆಯದು;
ನಿನ್ನ ಪ್ರಸಾದವ ಕೊಂಡೆನ್ನ, ಭವಕ್ಕೆ ಬೀಜವಾಯಿತ್ತು!
ಜಂಗಮವೇ ಲಿಂಗವೆಂದು ಒಕ್ಕುದ ಕೊಂಡರೆ
ಎನ್ನ ʼಭವಂ ನಾಸ್ತಿʼಯಾಯಿತ್ತು!
ಕೂಡಲಸಂಗಮದೇವಾ."
Transliteration Ayya, nīnendare ēnembenu:
"Ninna haṅgēnu hariyēnu?
Ninna mukhadalli ondaguḷu saveyadu;
ninna prasādava koṇḍenna, bhavakke bījavāytu!
Jaṅgamavē liṅgavendu okkuda koṇḍare
enna ʼbhavaṁ nāstiʼyāyittu!
Kūḍalasaṅgamadēvā."
Manuscript
English Translation 2 Lord, if Thou art what Thou art, I say:
"What is Thy obligation and Thy debt?
Not through Thy mouth a single crumb
Doth spend itself; to take Thy grace
Is seed of all my births!
If because Jaṅgama is Liṅga I take
What's left of the offering, my wheel of births
Becomes as nought, O Kūḍala Saṅgama Lord!
Translated by: L M A Menezes, S M Angadi
Hindi Translation प्रभो, तुम कहो, तो कहूँगा
तब कौन सा उपकार है, ऋण है?
तब मुख से एक दाना भी नहीं घिसता,
तव प्रसाद लेना मेरे भव का बीज बना ।
जंगम को ही लिंग समझकर शेष प्रसाद लेने से
मैं भव से मुक्त हुअ, कूडलसंगमदेव ॥
Translated by: Banakara K Gowdappa
Telugu Translation అయ్యా; నీ వన్నట్టులే అందు
నీ హంగేమినీ వేమి?
నీ ముఖాన ఒక్కటియూ తెగదుబో!
నీ ప్రసాదమంద నా భవమునకు ;జమయ్యే:
జంగమమే లింగమని ప్రసాద మందుకొన్న
నా భవము నా స్తిjైు యుండెబో!
Translated by: Dr. Badala Ramaiah
Tamil Translation ஐயனே நீ எனை அழைப்பின் என்ன என்பேன்
உன் தொடர்பென்ன? உறவு என்ன?
உன் வாயில் ஒரு பருக்கை அரைபடுமோ?
உன் பிரசாதத்தை ஏற்றதால் அது
பிறவிக்கு வித்தாயிற்று, ஜங்கமமே
இலிங்கமென எஞ்சியதைக் கொளின்
பிறவி அகன்றது கூடல சங்கமதேவனே.
Translated by: Smt. Kalyani Venkataraman, Chennai
Marathi Translation
देवा, तुम्ही जे सांगाल ते बोलतो.
तुझी गरज, उपकार मला कशाला हवे ?
तुझ्या मुखाने एक घासही खात नाही.
तुझा प्रसाद घेतल्याने मला भवातजन्म घ्यावा लागला.
जंगमाला लिंग मानून शेष प्रसाद घेतला तर
माझे भवबंधन नष्ट झाले कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶಿವನೊಡನೆ ತೀರ ಸ್ವಚ್ಛಂದವಾದೊಂದು ಧಾಟಿಯಲ್ಲಿ ಪ್ರಣಯಕಲಹ ಮಾಡುತ್ತಿರುವ ಚಿತ್ರ ಈ ವಚನದ ಹಿನ್ನೆಲೆಗಿದೆ.
ಶಿವನೆ, ಈಗ ನೀನು ಉಸಿರೆತ್ತಿದರೂ ಪ್ರತಿಭಟಿಸುತ್ತೇನೆ. ನಿನ್ನ ಹಂಗು ನನಗೆ ಬೇಕಾಗಿಲ್ಲ. ಇದುವರೆಗೂ ನಿನ್ನಿಂದೇನು ತಾನೆ ನನಗೆ ಒಳ್ಳೆಯದಗಿದೆ? ಹಾಗೆ ನೋಡಿದರೆ – ಈ ಜನ್ಮಜರಾಮರಣಚಕ್ರಕ್ಕೆ ನಾನು ಸಿಕ್ಕಿಬಿದ್ದುದೇ ನಿನ್ನ ಕಿತಾಪತಿಯಿಂದಾಗಿ! ನಿನ್ನ ಲೀಲೆಗಾಗಿ ನನ್ನನ್ನು ಹುಟ್ಟಿಸಿದೆ –ಆ ಪರಿಣಾಮವಾಗಿ ಈ ಸಂಸಾರದಲ್ಲಿ ನಾನು ಬಹಳವಾಗಿ ನೋಯಬೇಕಾಯಿತು. ಆ ಕಷ್ಟಕಾಲದಲ್ಲಿ ನನ್ನನ್ನು ಕರುಣಿಸಿ ಉದ್ಧರಿಸಿದವನು ಜಂಗಮ. ಮುಕ್ತಿಕರ್ತನಾದ ಆ ಜಂಗಮವೇ ಸೃಷ್ಟಿಕರ್ತನಾದ ನಿನಗಿಂತ ಶ್ರೇಷ್ಠವೆಂದು ನಾನು ನಂಬಿದ್ದರಿಂದಲೇ ನನಗೆ ನಿನ್ನಿಂದಾದ ಬವಣೆ ತಪ್ಪಿತು.
ಆ ನನ್ನ ಪ್ರಿಯಸೇವ್ಯ ಜಂಗಮನು ಇಟ್ಟರೆ ಉಣ್ಣುತ್ತಾನೆ. ಅವಧರಿಸುತ್ತಾನೆ, ಉದ್ಧರಿಸುತ್ತಾನೆ. ನೀನಾದರೋ ಇಟ್ಟರೆ ಒಂದಗುಳನ್ನೂ ತಿನ್ನುವುದಿಲ್ಲ ಮಾತಾಡುವುದೂ ಇಲ್ಲ. ಇಂಥ ನಿನ್ನನ್ನು ನಿನ್ನ ಪ್ರತಿರೂಪದ ಜಂಗಮಕ್ಕಿಂತ ಹೇಗೆ ಪ್ರಿಯವೆನ್ನಲಿ.
ಅನ್ನಕ್ಕಿಂತ ಸ್ಯಾವಿಗೆ ಮೇಲೆಂದಂತಾಗುವ -ಲಿಂಗಕ್ಕಿಂತ ಜಂಗಮ ಮೇಲೆನ್ನುವ ಬಸವಣ್ಣನವರ ಈ ಶಿವವಿಡಂಬನೆ ಅತ್ಯಂತ ತತ್ತ್ವಬದ್ಧವೂ, ಅದೇ ಸಮಯಕ್ಕೆ ಲಗುಬಗೆಯ ಸರಸಸಮನ್ವಿತವೂ ಆಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು