•  
  •  
  •  
  •  
Index   ವಚನ - 842    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ಅನುಭಾವ
ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ; ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ; ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ: ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ! ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡ ನೋಡಯ್ಯಾ!
Transliteration Jñānada baladinda ajñānada kēḍa nōḍayya; jyōtiya baladinda tamandhada kēḍa nōḍayya; satyada baladinda asatyada kēḍa nōḍayya: Paruṣada baladinda avalōhada kēḍa nōḍayyā! Kūḍalasaṅgana śaraṇara anubhāvadinda enna bhavada kēḍa nōḍayya!
Manuscript
Music Courtesy: Album Name: Shivabasava Song Name: Gnanada Baladinda Singer: M. M. Keeravani & Sujatha Dutt Lyric: Basaveshwara Vachanas Music: M. M. Keeravani Label: Akash Audio
English Translation 2 Look, Sir. By dint of Knowledge, ignorance goes! By dint of Light, must darkness go! By dint of Truth, untruth! And iron's no more iron when It knows the alchemic stone! O Kūḍala Saṅgama Lord, By dint of Experience Of Kūḍala Saṅga'sŚaraṇās, My mind must cease! Translated by: L M A Menezes, S M Angadi
Hindi Translation देखो, ज्ञान-बल से अज्ञान नष्ट होता है। ज्योति-बल से घोर तम नष्ट होता है। सत्य के बल से असत्य नष्ट होता है । पारस के बल से लोह नष्ट होता है । कूडलसंगमेश के शरणों के अनुभाव से मेरा भव नष्ट होता है ॥ Translated by: Banakara K Gowdappa
Telugu Translation జ్ఞాన బలమున అజ్ఞానముచేటు చూడుమయ్యా; జ్యోతిర్బలమున తమసముచేటు చూడుమయ్యా; సత్యబలమున అసత్యముచేటు చూడుమయ్యా: స్పర్శవేది బలమున అవరోహము చేటు చూడుమయ్యా; సంగని శరణుల అనుభావమున నా మది చేటు చూడుమయ్యా! Translated by: Dr. Badala Ramaiah
Tamil Translation ஞான வலிமையால் அஞ்ஞானம் அழிகிறது விளக்கின் வலிமையால் இருள் அழிகிறது உண்மையின் வலிமையால் பொய் அழிகிறது பரிசவேதியின் வலிமையால் தாழ்ந்த உலோகம் அழிகிறது கூடல சங்கனின் அடியாரை உணர்ந்த வலிமையால் என் பிறவி அகன்றது காணாய் Translated by: Smt. Kalyani Venkataraman, Chennai
Marathi Translation ज्ञानाच्या प्रभावाने अज्ञान नष्ट झाले. ज्योतीच्या प्रभावाने अंधार नष्ट झाला. सत्याच्या प्रभावाने असत्य नष्ट झाले. परिसाच्या प्रभावाने लोखंड सोने झाले. कूडलसंगाच्या शरण अनुभावाच्या प्रभावाने माझे भवबंधन नष्ट झाले देवा. Translated by Shalini Sreeshaila Doddamani
Urdu Translation علم سےمٹتے ہیں دنیا میں جہالت کےنقوش روشنی ہوخیرہ کُن توتیرگی رہتی نہیں حکمرانی میںصداقت کی کہاںچلتی ہےجھوٹ قدرِ آہن ماند کردیتی ہے زرکی آب وتاب اس لیے اے کوڈلا سنگا ہے میری آرزو تیرے شرنوں کی طرف سے دولتِ عرفاں ملے تاکہ دل سے ہرکدورت ہر بُرائی مٹ سکے Translated by: Hameed Almas
ಕನ್ನಡ ವ್ಯಾಖ್ಯಾನ ಅಜ್ಞಾನವಿದ್ದರೆ –ಜ್ಞಾನವನ್ನು ಸಂಪಾದಿಸಿದರೆ ಸಾಕು –ಆ ಅಜ್ಞಾನ ಕಳೆದುಹೋಗುತ್ತದೆ. ಕತ್ತಲೆಯಿದ್ದರೆ -ದೀಪ ಹಚ್ಚಿದರೆ ಸಾಕು ಆ ಕತ್ತಲೆ ಕಳೆದುಹೋಗುತ್ತದೆ ಹೊರಗೆ ಆವರಿಸಿದ ಕತ್ತಲನ್ನು ಕಣ್ಣು ಪತ್ತೆಹಚ್ಚುವಂತೆ –ಒಳಗೆ ಆವರಿಸಿದ ಕತ್ತಲನ್ನು ವಿವೇಕ ಪತ್ತೆಹಚ್ಚಬೇಕು. ಆಮೇಲೆ ಆ ಅಜ್ಞಾನವನ್ನು ಪರಿಹರಿಸಿಕೊಳ್ಳುವುದು ಅಸಾಧ್ಯವೇನೂ ಅಲ್ಲ. ಶಿವಶರಣರ ಸಹವಾಸಮಾಡಿ –ಅವರ ಶಿವಾನುಭಾವ ಪ್ರಸಂಗವನ್ನು ಶ್ರದ್ಧೆಯಿಂದ ಆಲಿಸಿದರೆ ಎಲ್ಲ ಬೆಳ್ಳಂಬೆಳಕಾಗುವುದು. ಪರುಷವನ್ನು ಮುಟ್ಟಿದ ಕಬ್ಬಿಣ ತನ್ನ ಅವಲೋಹವನ್ನು ಥಟ್ಟನೆ ಕಳೆದುಕೊಂಡು ಮಿನುಗುವ ಚಿನ್ನವಾಗುವುದು. ಇಷ್ಟೇ ಸುಲಭ –ಮನೋವಿಕಾರದಿಂದಾದ ಅಸತ್ಯವನ್ನು ಕಳೆದುಕೊಂಡು ಸತ್ಯವನ್ನು ಕಾಣುವುದು ಕೂಡ. ಶರಣರ ಸಂಗ ಸಾಮಾನ್ಯವಾದುದಲ್ಲ –ಅದು ಉರಿಯುವ ದೀಪ, ಮಿರುಗುವ ಸ್ಪರ್ಶಮಣಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು