•  
  •  
  •  
  •  
Index   ವಚನ - 843    Search  
 
ಪ್ರಾಣಲಿಂಗಿಯ ಪ್ರಸಾದಿಸ್ಥಲ - ಅನುಭಾವ
ಆದ್ಯರ ವಚನ ಆದ್ಯರಿಗಾಯಿತ್ತು; ವೇದ್ಯರಿಗಲ್ಲದೆ ಸಾಧ್ಯವಾಗದು, ಕೂಡಲಸಂಗಮದೇವಾ, ನಿಮ್ಮ ಅನುಭಾವದಿಂದ ಎನ್ನ ʼಭವಂ ನಾಸ್ತಿʼಯಾಯಿತ್ತು.
Transliteration Ādyara vacana ādyarigāyittu; vēdyarigallade sādhyavāgadu, kūḍalasaṅgamadēvā, nim'ma anubhāvadinda enna ʼbhavaṁ nāstiʼyāyittu.
Manuscript
Music Courtesy:
English Translation 2 The Pioneers word Is meant for the Pioneers: It's Greek except to those who know. O Kūḍala Saṅgama Lord, Through experience of Thee, My wheel of births has ceased! Translated by: L M A Menezes, S M Angadi
Hindi Translation आद्यों का वचन आद्यों के लिए है, ज्ञानियों के सिवा वह दूसरों को साध्य नहीं; कूडलसंगमदेव, तव अनुभाव से मेरा भव नष्ट हुआ॥ Translated by: Banakara K Gowdappa
Telugu Translation ఆద్యుల వచన మాద్యులకై పోయె వేద్యులకుగాని సాధ్యముకాదది. సంగమదేవా, నీ యనుభావముచే నా పుట్టువే గిట్టునయ్యా. Translated by: Dr. Badala Ramaiah
Tamil Translation முன்னோரின் அருளுரைகள் அவர்களுக்கே ஆயிற்று அறிந்தோருக்கன்றி சாத்தியமில்லை கூடல சங்கமதேவனே, உம்மை உணர்ந்ததால் என் பிறவி அகன்றது. Translated by: Smt. Kalyani Venkataraman, Chennai
Marathi Translation आद्यांची वचने आद्य (ज्ञानी) जाणतात. अज्ञानीला साध्य होणार नाही कूडलसंगमदेवा. तुमच्या अनुभावाने माझे भवबंधन नष्ट झाले देवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಧರ್ಮಕ್ಕೆ ಆದ್ಯರಾದವರ ಸಾಹಿತ್ಯ ಒಂದು ಗತಯುಗದ ಸಂಸ್ಕೃತಿ. ಅದನ್ನು ಅನ್ವಯಿಕವಾಗಿ ಸ್ವೀಕರಿಸುವುದು ಅರ್ಹರಿಗೆ ಮಾತ್ರ ಸಾಧ್ಯ –ಎನ್ನುತ್ತ ಬಸವಣ್ಣನವರು ತಮಗೆ ಬಿಡುಗಡೆಯ ಆನಂದವನ್ನು ಕೊಟ್ಟ ಆ ಆದ್ಯ ಶರಣರ ಸಾಹಿತ್ಯವನ್ನು ಕೃತಕೃತ್ಯತೆಯಿಂದ ಪ್ರಶಂಸಿಸುತ್ತಿದ್ದಾರೆ. ಕೊಂಡಗುಳಿ ಕೇಶಿರಾಜ, ಮಾದರ ಚೆನ್ನಯ್ಯ, ಡೋಹಾರ ಕ್ಕಕಯ್ಯ, ಜೇಡರ ದಾಸಿಮಯ್ಯ ಮುಂತಾದ ಆದ್ಯ ಶಿವಶರಣರ ತತ್ತ್ವದರ್ಶನ ಬಸವಣ್ಣನವರಿಗೆ ಒದಗಿದಾಗ –ಅವರು ತಮ್ಮ ಸುತ್ತುಮುತ್ತಿನ ನಿತ್ಯಜೀವನದ ಅಸಾಂಗತ್ಯಗಳನ್ನು ಗುರುತಿಸಿ -ಅದಕ್ಕೆ ವಿರುದ್ಧವಾಗಿ ಹೋರಾಡಿ -ಸುಸಂಗತ ಸರಳಜೀವನಕ್ಕೆ ಅಡಿಪಾಯವಾಗಬಲ್ಲ ತತ್ತ್ವಗಳನ್ನೂ ಆಚರಣೆಗಳನ್ನೂ ನಿಗದಿಪಡಿಸಿದರು. ತಾವೇ ಅವನ್ನು ಅನುಷ್ಠಾನಕ್ಕೆ ತಂದು ಮುಕ್ತರೂ ಆದರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು