ಪ್ರಾಣಲಿಂಗಿಯ ಪ್ರಸಾದಿಸ್ಥಲ - ಅನುಭಾವ
ಅಸಂಬಂಧ ಸಂಬಂಧವಾಯಿತ್ತು
ಲಿಂಗಸಾರಾಯರ ಸನುಮತದಿಂದ;
ಉತ್ತಮ ಮಧ್ಯಮವ ಕೆಡಿಸಿತ್ತು,
ಏಕೋ ಸತಿಪತಿ ಗುಣದಿಂದ-
ಗರುವರ ಗರುವತನವ ಕೂಡಲಸಂಗಯ್ಯನನುಭಾವದಿಂದ.
Transliteration Asambandha sambandhavāyittu
liṅgasārāyara sanumatadinda;
uttama madhyamava keḍisittu,
ēkō satipatiguṇadinda-
garuvara garuvatana kūḍalasaṅgayyananubhāvadinda.
Manuscript
English Translation 2 Through the behest of those
Who know the essence of Liṅga,
The intangible has become the tangible.
By virtue of the lord and wife
Becoming one, the best
The middle has destroyed.
By experience of Lord Kūḍala Saṅgama
The greatness of the great has been destroyed.
Translated by: L M A Menezes, S M Angadi
Hindi Translation लिंग तत्वज्ञों की संपत्ति से असंबंध, संबंध हुआ
उत्तम से मध्यम नष्ट हुआ ।
एको सती-पति गुण से, कूडलसंगमदेव के अनुभाव से
बडों का गौरव नष्ट हुआ ॥
Translated by: Banakara K Gowdappa
Telugu Translation అసంబంధము సంబంధమయ్యె లింగసారుల సమ్మతిచే
ఉత్తమ మధ్యమములు చెడె
ఏకో సతిపతి గుణముచే; గర్వితుల గర్వము
నంగని అనుభావముచే చెడునయ్యా!
Translated by: Dr. Badala Ramaiah
Tamil Translation தொடர்பற்றது, தொடர்புடையதாயிற்று
இலிங்க ஞானமுள்ளோரின் ஒப்புதலுடன்
முதல், இடையைக் கெடுத்தது, இணைந்த
கணவன் மனைவி தொடர்பு ஏற்பட
கூடல சங்கனை உணர்ந்ததால்
செருக்கனைத்தும் அகன்றது ஐயனே
Translated by: Smt. Kalyani Venkataraman, Chennai
Marathi Translation
असंबंध संबंध झाले लिंगज्ञानीच्या सत्संगाने,
उच्च-नीच भेद नष्ट झाला सती-पतीच्या समरसतेने,
गर्विष्ठाचा गर्व नष्ट झाला कूडलसंगाच्या अनुभावाने.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಂಗದ ಮೇಲೆ ಲಿಂಗ ಧರಿಸುವುದು ಮಾನ್ಯವಾಗಿ -ಸಂಬಂಧಿಕರಲ್ಲವೆನಿಸಿಕೊಂಡಿದ್ದ ಜನಸಾಮಾನ್ಯರೂ ಅನ್ಯೋನ್ಯ ಸಂಬಂಧಿಗಳಾದರು.
ಶರಣಸತಿ ಲಿಂಗಪತಿ ತತ್ತ್ವವನ್ನು ಒಪ್ಪಿಕೊಂಡಿದ್ದರಿಂದ –ಈ ಧರ್ಮಕ್ಕೆ ಸೇರಿದವರೆಲ್ಲಾ ಶಿವನ ರಾಣಿವಾಸಕ್ಕೆ ಸೇರಿದವರೆಂದು ಸಮಾನವಾಗಿ ಓರಗೆಯವರಾದರು. ಮತ್ತು ಇವನು ಮೇಲುಜಾತಿಯವನು, ಇವನು ಕೀಳುಜಾತಿಯವನು. ಇವನು ಬಲ್ಲಿದ ಇವನು ಬಡವನೆಂಬ ಪರಸ್ಪರ ತಾರತಮ್ಯ ಮಾಯವಾಯಿತು.
ಶಿವಾನುಭವ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಅನ್ಯೋನ್ಯ ವಿಚಾರವಿನಿಮಯದಲ್ಲಿ ತೊಡಗಿ ಅಲ್ಪಸಂಖ್ಯಾತರೆಲ್ಲ ಒಟ್ಟುಗೂಡಿ ಬಹುಸಂಖ್ಯಾತರಾದಾಗ –ಅದುವರೆಗೂ ಸಮಾಜದಲ್ಲಿ ಯಜಮಾನಿಕೆ ನಡೆಸಿಕೊಂಡು ಬಂದಿದ್ದ ಪ್ರತಿಷ್ಠಿತರ ಗರ್ವ ಇಳಿಯಿತು.
ಒಟ್ಟಿನಲ್ಲಿ ಜನಸಾಮಾನ್ಯರ ಒಂದು ಸಮರಸಯುಗ ಪ್ರಾರಂಭವಾಯಿತು ಬಸವಣ್ಣನವರ ಬೋಧನೆಗಳಿಂದ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು