ಪ್ರಾಣಲಿಂಗಿಯ ಶರಣಸ್ಥಲ - ಅನುಭಾವ
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೆಂಬೆ?
ಕಡೆಗೋಡಿವರಿದುವೆನಗಯ್ಯಾ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವ ನಾನಾರಿಗೇನೆಂಬೆ?
Transliteration Ālikalla haraḷinante, aragina put'thaḷiyante
tanu karagi nereva sukhava nānembe?
Kaḍegōḍivariduvenagayya nayanada sukhajalaṅgaḷu!
Nam'ma kūḍalasaṅgamadēvara muṭṭi
nereva sukhava nānārigēnembe?
Manuscript
English Translation 2 When
like a hailstone crystal
like a waxwork image
the flesh melts in pleasure
how can I tell you?
The waters of joy
broke the banks
and ran out of my eyes.
I touched and joined
my lord of the meeting rivers.
How can I talk to anyone
of that?
Translated by: A K Ramanujan
Book Name: Speaking Of Siva
Publisher: Penguin Books
----------------------------------
What shall I say of the delight
When body melts and merges like
A hailstone or a waxen doll?
Lo, tears of joy brim o'er
And overflow my eyes!
When I have touched
Our Lord Kūḍala Saṅgama,
To whom shall I communicate
The rapture of our union?
Translated by: L M A Menezes, S M Angadi
Hindi Translation उपल सा लक्षा-पुत्थली सा
ओले के समान, लाख की पुतली के समान
तन के गलकर मिल जाने का सुख मैं कैसे कहूँ?
मेरे नयनों से आनंदाशृ उमड पड़े हैं ।
मम कूडलसंगमदेव का स्पर्श कर
मिलन का सुख कैसे कहूँ?
Translated by: Banakara K Gowdappa
Telugu Translation వడకల్లు స్పటికమువలె; లక్క బొమ్మవలె;
మెయ కరగి కలియు సుఖమునే నేమందునయ్యా?
కొలకుల మొరవలై పరువిడెనయ్య నయనసుఖాశ్రుజలములు:
కూడల సంగమదేవుని ముట్ట పడయు
సుఖము నే నెవరితో యేమని చెప్పగలనయ్యా?
Translated by: Dr. Badala Ramaiah
Tamil Translation ஆலங்கட்டியனைய அரக்கு பொம்மையனைய
உடல் கரைந்து இணையும் இன்பத்தை என்னென்பேன்
கண்களின் ஆனந்தக் கண்ணீர் கடைக்கோடியில் வழிந்தது
நம் கூடல சங்கனைத் தீண்டி இணைந்த
பேரின்பத்தை நான் என்னென்பேன் ஐயனே
Translated by: Smt. Kalyani Venkataraman, Chennai
Marathi Translation
गारांच्या खड्याप्रमाणे, लाखाच्या बाहुलीप्रमाणे,
तनू विरघळून मिळणारे मिलनसुख कसे ‘सांगू?
आनंद बाष्प ओघळती नयनातून सुखबिंदूसम
आमच्या कूडलसंगम देवाचे मिलनसुख कसे सांगू ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎರಡು ಜೀವಗಳಿಗೆ ಸ್ಪರ್ಶಾದಿ ಇಂದ್ರಿಯಪ್ರವೃತ್ತಿಯಿಂದ ಆಗುವ ಆಮೋದವೇ ಅವರ್ಣನೀಯವೆನ್ನುವುದಾದರೆ –ಇಂದ್ರಿಯ ನಿವೃತ್ತಿಯಿಂದ ಜೀವನಿಗೆ ಮತ್ತು ಶಿವನಿಗೆ ಆ ಅನನ್ಯ ಸಂಗದಲ್ಲಾಗುವ ಅತೀಂದ್ರಿಯಾನುಭೂತಿಯು ಅನುಭವಿಸಿದವರಿಂದಲೇ ಕೇಳಿಯೂ ತಿಳಿಯಬಾರದಷ್ಟು ವಿಶಿಷ್ಟವಾದುದು. ಅಂಥದೊಂದು ಅಪುರೂಪದ ದಿವ್ಯಭಾವವನ್ನು ಊಹಿಸಲಾದರೂ ಭಕ್ತರಿಗೆ ಒದಗಿಸಿಕೊಟ್ಟಿರುವರು ಬಸವಣ್ಣನವರು ತಮ್ಮ ವಚನದಲ್ಲಿ :
ವಿಶ್ವತೋ ಬಾಹುವಾದ ಶಿವನ ತೆಕ್ಕೆಗೊಳಗಾದ ಬಸವಣ್ಣನವರಿಗೆ ಮೊದಮೊದಲಲ್ಲಿ ಭಯದಿಂದ ರಕ್ತವೆಲ್ಲಾ ಹೆಪ್ಪುಗಟ್ಟಿದಂತಾಯಿತು. ಕ್ರಮವಾಗಿ ಬೆಳೆದ ವಿಶ್ವಾಸದಿಂದ ಅವರು ಬಿಸಿಗೊಡ್ಡಿದ ಆಲಿಕಲ್ಲಿನಂತೆ ಅವನ ಎದೆಯ ಬಿಸಿಗೆ ಹನಿಹನಿಯಾಗಿ ಕರಗಿಹೋದರು. ಮರುಘಳಿಗೆಯೇ ಈ ಪರಸುಖವಿನ್ನೆಲ್ಲಿ ಇಲ್ಲವಾಗುವುದೋ ಎಂಬ ಬರಲಿರುವ ವಿರಹದ ಬೆಂಕಿಯಿಂದ ಅರಗಿನ ಗೊಂಬೆಯಂತೆ ಅಲ್ಲೇ ಉರಿದು ಹೋದರು. ಬೆಚ್ಚಿ ಎಚ್ಚರವಾದಾಗ ಅಂಗೈಯ ಲಿಂಗದಲ್ಲಿ ಅವರ ದೃಷ್ಟಿನಟ್ಟಿತ್ತು, ಕಣ್ಣಿಂದ ಕಂಬನಿಗಳು -ಹರಿದ ಸರದಿಂದ ಮುತ್ತುಗಳಂತೆ ಉದುರುತ್ತಿದ್ದವು. ಅವರಿಗೆ ಹೀಗೆ “ಕೂಡಲ ಸಂಗಮದೇವರ(ನ್ನು) ಮುಟ್ಟಿ ನೆರೆವ ಸುಖ”ದಕ್ಕಿತು, ಈ ವಚನ ಉಕ್ಕಿತು, ಅದು ನಮಗೆ ಪೂರ್ವಪುಣ್ಯದಿಂದ ಸಿಕ್ಕಿತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು