•  
  •  
  •  
  •  
Index   ವಚನ - 849    Search  
 
ಪ್ರಾಣಲಿಂಗಿಯ ಶರಣಸ್ಥಲ - ಅನುಭಾವ
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ, ಸಾಲದೆ, ಅಯ್ಯಾ ? ಮಾಲೆಗಾರನ ಕೇಳಿ ನನೆ ಅರಳುವುದೆ? ಆಗಮವನಿದಿರಿಂಗೆ ತೋರುವುದು ಆಚಾರವೆ, ಅಯ್ಯಾ ? ನಮ್ಮ ಕೂಡಲಸಂಗನ ಕೂಡಿದ ಕೂಟದ ಕರುಳ ಕಲೆಯನು ಇದಿರಿಂಗೆ ತೋರುವುದು ಅಚಾರವೆ, ಅಯ್ಯಾ ?
Transliteration Nālage tāgida rucige manavē sākṣi, sālade, ayyā? Mālegārana kēḷi naneyaraḷuvude? Āgamavanidiriṅge tōruvudu ācārave, ayyā? Nam'ma kūḍalasaṅgana kūḍida kūṭada karuḷa kaleyanu idiriṅge tōruvudu ācārave, ayyā?
Manuscript
English Translation 2 Sir, isn't the mind witness enough, for the taste on the tongue? Do buds wait for the garland maker's word to break into flower? Is it right, sir, to bring out the texts for everything? And, sir, is it really right to bring into the open the mark on our vitals left by our lord's love-play?

Translated by: A K Ramanujan
Book Name: Speaking Of Siva
Publisher: Penguin Books
----------------------------------
The mind bears witness to the taste At touch of tongue: will it not do, good Sir? Does the bud blow At the florist's behest? Is it service, Sir, to explain The Āgamas to another man? It it service, Sir, to explain The heart's art of love wherewith One joins our Kūḍala Saṅgama? Translated by: L M A Menezes, S M Angadi

Hindi Translation जिह्वा-स्पृष्ट स्वाद का मन ही साक्षी है, यह पर्याप्त नहीं? माली से पूछकर कली खिलती है? अन्यों को आगम बताना आचार है? मम कूडलसंगमदेव से जो मिलन हुआ वह रहस्यपूर्ण कला को प्रकट करना आचार है ॥ Translated by: Banakara K Gowdappa
Telugu Translation నాలుక సోకు రుచికి మనసే సాక్షి చాలదే అయ్యా; మాలకరిని వేడి మొగ్గ విరియు నే? ఆగమ మెదిరికి చూపట ఆచారమే? మా సంగని కలిసిన కలియక మధురానుభూతి పరులకు చూప పాడియే?అయ్యా! Translated by: Dr. Badala Ramaiah
Tamil Translation நாக்கில் பட்ட சுவைக்கு மனமே சாட்சி போதாதோ ஐயனே? பூக்கட்டுவோனைக் கேட்டு மொட்டு மலருமோ? ஆன்மாவுடன் இணைந்த இன்பத்தை எதிரில் வைத்துக் காட்டவியலுமோ? நம் கூடல சங்கனுடன் இணைந்த இன்பத்தை எதிரில் வைத்துக் காட்ட வியலுமோ ஐயனே? Translated by: Smt. Kalyani Venkataraman, Chennai
Marathi Translation जीभेला झालेल्या रुचीला मन हेच साक्षी, पुरेसे नाही का? कळी माळ्याला विचारून उमलते ? आगमाच्या साक्षीने केलेली क्रिया आचार आहे का देवा? आमच्या कूडलसंगमदेवाच्या समरसतेच्या सुखाची प्रदर्शन क्रिया आचार आहे देवा ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾಲಗೆ ತಾಗಿದ ರುಚಿಗಾದರೂ –ಮನಸ್ಸಿಗಾದ ತೃಪ್ತಿಯಲ್ಲದೆ ಮತ್ತೊಂದು ಸಾಕ್ಷಿಯಿಲ್ಲ, ತನಗೇನು ಶಿವಾನಂದವಾಯಿತೆನ್ನುವುದಕ್ಕಾದರೂ –ಆತ್ಮಕ್ಕೆ ದಕ್ಕಿದ ನಿರಾಳವೇ ಸಾಕ್ಷಿ. ಆಗಮದ ಅನುಸಾರ ಪೂಜಾದಿಗಳನ್ನು ಮಾಡಿದೆನೆಂಬುದಷ್ಟೇ ಭಕ್ತನು ಶಿವಮಿಲವನ್ನು ಪಡೆದನೆಂಬುದಕ್ಕೆ ಪರಮಸಾಕ್ಷಿಯಾಗದು. ಆಗಮವು ಕ್ರಮಗಳನ್ನು ಹೇಳುತ್ತದೆ –ಆದರ ಮರ್ಮವನ್ನು ಭಕ್ತನು ತನ್ನ ದಿವ್ಯವೇದನೆಗನುಸಾರವಾಗಿ ತನಗೆ ತಾನೇ ಕಂಡುಕೊಳ್ಳುತ್ತಾನೆ. ಅದು ಅರಳುವ ಹೂವಿನಂತೆ –ತನಗೆ ತಾನೇ ಅರಳಬೇಕು. ಅದನ್ನು ಹೂವಾಡಿಗನಂತೆ ಆಗಮವು ನಾನಾ ವಿಧವಾಗಿ ಕಟ್ಟಿ ಪ್ರದರ್ಶಿಸಬಲ್ಲುದಷ್ಟೆ ! ಅಂದರೆ ಶಿವಾನಂದವನ್ನು ಆಗಮವು ಶಾಸ್ತ್ರಮಾಡಿ ಹೇಳಬಲ್ಲುದಾದರೆ–ಅದನ್ನು ಸಾಕ್ಷಾತ್ಕರಿಸಿಕೊಳ್ಳುವ ಕಸುವಿರುವುದು ಭಕ್ತನಲ್ಲಿಯೇ, ಅದನ್ನು ಅಕ್ಷರಕ್ಕೆ ಅಕ್ಷರ ಸೇರಿಸಿ ಪದಮಾಡಿ ವಾಕ್ಯಮಾಡಿ ವೈಖರಿಯಿಂದ ಆದೇಶಿಸುವುದು ಸಾಧ್ಯವಿಲ್ಲ. ಆದ್ದರಿಂದ ಇಡಿಯಾಗಿ ಧರ್ಮವೆಂಬುದು ಓದುವುದೂ ಅಲ್ಲ, ಬರೆಯುವುದು ಅಲ್ಲ, ಬಣ್ಣಬಣ್ಣವಾಗಿ ಒರೆಯುವುದೂ ಅಲ್ಲ –ಅದೊಂದು ಸ್ವಾಂತವಿಕಾಸದ ಪರಿಮಳ –ಗಿಡ ಚಿಗುರಿದಾಗ ಹೂವರಳಿದಂತೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು