•  
  •  
  •  
  •  
Index   ವಚನ - 850    Search  
 
ಪ್ರಾಣಲಿಂಗಿಯ ಐಕ್ಯಸ್ಥಲ - ಶರಣಸತಿ-ಲಿಂಗಪತಿ
ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ; ನಮ್ಮ ನಲ್ಲ ಸುಳಿಯಲಿಲ್ಲ; ಸುಳಿದು ಸಿಂಗಾರವ ಮಾಡಲಿಲ್ಲ! ಕೂಡಲಸಂಗಮದೇವನು ತನ್ನೊಳಗೆ ಬೈಚಿಟ್ಟನಾಗಿ.
Transliteration Ellara gaṇḍara pariyantalla nōḍavvā; nam'ma nalla suḷiyalilla; suḷidu siṅgārava māḍalilla! Kūḍalasaṅgamadēvanu tannoḷage baiciṭṭanāgi.
Manuscript
Music Courtesy:
English Translation 2 Look, lady, he is not as others are: My husband knows no action, nor Dallies in acts of love! For Lord Kūḍala Saṅgama hid me Within Himself! Translated by: L M A Menezes, S M Angadi
Hindi Translation देखो सखी, वह सबके पतियों की भाँति नहीं है, मेरे पति चक्कर नहीं लगाते बनठन कर नहीं भटकते, क्योंकि कूडलसंगमदेव ने मुझे अपने में छिपा लिया है ॥ Translated by: Banakara K Gowdappa
Telugu Translation అందరివలె కాడమ్మా నా ప్రియుడు చూడమా; చేరరాడు వచ్చి సింగారము చేయబోడు; సంగడు తనలో నన్ను దాచుకొనె నమ్మా Translated by: Dr. Badala Ramaiah
Tamil Translation மற்ற அனைவரின் கணவரைப்போன்று இல்லை காண்பாய் என் கணவன் கண்ணில் தென்படுவதில்லை தென்பட்டு அணிசெய்து கொள்வதில்லை. கூடல சங்கமதேவன் தன் அகத்தே ஒளித்து வைத்துக் கொண்டான். Translated by: Smt. Kalyani Venkataraman, Chennai
Marathi Translation सर्वांच्या पतीप्रमाणे माझे पती नाही बाई. माझा पती हावभाव करीत नाही, श्रृंगार करीत नाही. कूडलसंगमदेवाने आपल्यात सामावून घेतले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಲೋಕದ ಗಂಡ(ಸ)ರು ಒಂದು ಹೆಣ್ಣನ್ನು ಒಲಿಸಲೆಂದು –ಅವಳ ಕಣ್ಣಿಗೆ ಬೀಳುವುದೇನು, ಅವಳ ಹಿಂದೆ ಮುಂದೆ ಸುಳಿದಾಡುವುದೇನು, ಶೃಂಗಾರಭಾವಗಳನ್ನು ಪ್ರಕಟಿಸುವುದೇನು –ತಾವೂ ಧಾವಂತಪಟ್ಟು ಆ ಹೆಣ್ಣಿಗೂ ಆತಂಕ ಉಂಟುಮಾಡುವುದೇನು ! ಇಷ್ಟೆಲ್ಲವಾಗಿ ಒಲಿದು ಒಲಿಸಿದ ಮೇಲೆ ಅವಳನ್ನು ಅಗಲುವುದೇನು, ತಾಪಕ್ಕೆ ಗುರಿಮಾಡುವುದೇನು ! ಇದು ಪ್ರೇಮವೇ ? ಈ ಹಿನ್ನೆಲೆಯಲ್ಲಿ ಬಸವಣ್ಣನವರು ಹೇಳುತ್ತಾರೆ : “ಶಿವನು ನನ್ನನ್ನು ಪ್ರೇಮಿಸುವ ಮುನ್ನ ರೂಢಿಯ ಗಂಡರಂತೆ ಘಾಸಿಪಡಿಸಲಿಲ್ಲ, ಪ್ರೇಮಿಸಿದ ಮೇಲೆ ಒಂದರೆಕ್ಷಣವೂ ಅಗಲಲಿಲ್ಲ. ನನ್ನನ್ನು ತನ್ನೆದೆಯಲ್ಲಿ ಅವುಚಿಟ್ಟುಕೊಂಡ”-ಎಂದು. ಬಸವಣ್ಣನವರ ಈ ಮಾತಿನಲ್ಲಿ ಅವರು ಒಳಗೂ ಹೊರಗೂ ಆವರಿಸಿರುವ ಶಿವನಲ್ಲಿ ಎಷ್ಟು ಗಾಢವಾಗಿ ಲೀನವಾಗಿದ್ದರೆಂಬುದರ ಒಂದು ಮುದ್ದಾದ ಚಿತ್ರವನ್ನು ಕಾಣಬಹುದು. “ಎಲ್ಲ ಗಂಡರ ಪರಿಯಂತಲ್ಲ ನೋಡವ್ವಾ ನಮ್ಮ ನಲ್ಲ” ಎಂಬ ಮಾತಿನಿಂದ ಪ್ರಾರಂಭವಾಗುವ ಈ ವಚನ –ಮುದ್ದು ಹೆಂಡತಿಯೊಬ್ಬಳು ಆ ಗಂಡನಿಂದ ಪಡೆದ ಸುಖವನ್ನು ತನ್ನ ಗೆಳತಿಯೊಡನೆ ಹೇಳಿಕೊಂಡು ಸುಖಿಸುವ ಧಾಟಿಯಲ್ಲಿದ್ದು ಬಹಳ ರಮ್ಯವಾಗಿದೆ. ಇದರ ಬೆಡಗನ್ನು ಈ ಮುಂದಿನಂತೆ ಬಿಡಿಸಬಹುದು : ಎಲ್ಲ ದೇವರುಗಳೂ ಉತ್ಸವಮೂರ್ತಿಯಾಗಿ ಬೀದಿಬೀದಿಯಲ್ಲಿ ಮೆರೆದು ಭಕ್ತರ ಮನವನ್ನು ಸೂರೆಗೊಂಡರೆ -ಫಳಫಳನೆ ಹೊಳೆಯುವ ಇಷ್ಟಲಿಂಗವು ಭಕ್ತನ ಅಂಗೈಯಲ್ಲಿ ಇದ್ದ ಸ್ಥಿತಿಯಲ್ಲೇ ತನ್ನ ಭಕ್ತನ ಬಿಂಬವನ್ನು ಮಾರ್ಪೊಳಿಸಿಕೊಂಡು ಅವನನ್ನು ಅದು ಒಳಗೊಳ್ಳುವುದು –ಎಂಬಂತೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು