•  
  •  
  •  
  •  
Index   ವಚನ - 851    Search  
 
ಪ್ರಾಣಲಿಂಗಿಯ ಐಕ್ಯಸ್ಥಲ - ಅನುಭಾವ
ಜ್ಞಾನದ ಗಮನದ ಸಹಜದ ಉದಯದಲ್ಲಿ ಏನೆಂದರಿಯೆನು; ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು; ಕೂಡಲಸಂಗನ ಧ್ಯಾನದಿಂದ ನಾನೇನೆಂದರಿಯೆನು!
Transliteration Jñānada gamanava sahajada udayadalli ēnendariyenu; liṅgada beḷagu sērudāgi ēnendariyenu; kūḍalasaṅgana dhyānadinda nānēndariyenu!
Manuscript
English Translation 2 When knowledge rises of its own accord, I know not what is what As Liṅga's splendour is absorbed in me, I know not what is what; Through meditation on Kūḍala Saṅgama, I know not what is what! Translated by: L M A Menezes, S M Angadi
Hindi Translation ज्ञान-विकास के सहज उदय में मैं और कुछ नहीं जानता; लिंग-प्रकाश के समाने के कारण मैं और कुछ नहीं जानता; कूडलसंगमदेव के ध्यान के कारण नहीं जानता कि मैं क्या हूँ ॥ Translated by: Banakara K Gowdappa
Telugu Translation జ్ఞానమేదో; గమన మేదో; సహజోదయములేవో; తెలియను; లింగ ప్రభలోగొను కారణమున; ఏమియూ తెలియ; సంగయ్య ధ్యానములో నాకేమీ తెలియదు? Translated by: Dr. Badala Ramaiah
Tamil Translation ஞானத்தின் கவனத்தால் பக்குவமாக, ஒன்றியதில் ஒளிர்ந்தது இலிங்கஒளி உட்கொண்டதால் என்னவென அறியேன் கூடல சங்கனைத் தியானிப்பதால் என்னவென அறியேன் Translated by: Smt. Kalyani Venkataraman, Chennai
Marathi Translation ज्ञानाची दिशा सहज उदयामध्ये दूसरे जाणत नाही. लिंग ज्योतीविना अंतर्लोक जाणत नाही. कूडलसंगमदेवाच्या ध्यानाविना काहीही जाणत नाही. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನಿಂದ ವಿಯೋಗವಾಗಿ ಸಂಸಾರಕ್ಕೆ ಬಿದ್ದ ಮೇಲೆ ಮರಳಿ ಆ ಶಿವನ ಸಂಬಂಧಿ ತಾನೆಂಬುದನ್ನು ತಿಳಿಯುವುದೇ ಜ್ಞಾನ. ಜೀವಕ್ಕೆ ಈ ಜ್ಞಾನಯೋಗವು ಪೂಜೆಯಿಂದ ಧ್ಯಾನದಿಂದ ಸಮರ್ಪಿತ ಭಕ್ತಿಯಿಂದ ಏರ್ಪಡುವುದೆಂಬುದು ಶರಣರ ಮಾರ್ಗ. ಬಸವಣ್ಣನವರು ಆ ಮಾರ್ಗದಲ್ಲಿ ನಡೆದರು -ಸಹಜವೆಂಬಷ್ಟು ಸಲೀಲವಾಗಿ ಆ ಶಿವನಲ್ಲಿ ಪುನರ್ಮಿಲನವಾದರು. ಅವರು ಆ ಅಮೃತಘಳಿಗೆಯಲ್ಲಿ ಸಂವೇದಿಸಿದ ಅತೀಂದ್ರಿಯ ಅನುಭವಗಳನ್ನು ಮೂರು ಹಂತಗಳಲ್ಲಿ ಕಾಣಬಹುದು : ತಾನು ಶಿವನ ಸಂಬಂಧಿಯೆಂಬ ವಿವೇಕದ ಸೂರ್ಯೋದಯಲ್ಲಿ, ಆ ಅನುರಾಗಪ್ರಭೆಯ ಸಮ್ಮುಖದಲ್ಲಿ ಬಸವಣ್ಣನವರು ಪ್ರಜ್ವಲಿತರಾದರು. ಲಿಂಗಕ್ಕೆದುರಾಗಿ ಕುಳಿತು ಪೂಜಿಸುವಾಗ –ಅದರ ಬೆಳಗು ಬಂದು ತಮ್ಮನ್ನು ಆವರಿಸಿದಂತಾಗಿ ಸವಿಕಲ್ಪ ಸಮಾಧಿಯಲ್ಲಿ ಪರವಶರಾದರು. ಆ ಪ್ರಾಣಲಿಂಗಧ್ಯಾನದಲ್ಲಿ ತೊಡಗಿದಾಗ ತಮಗೇನಾಯಿತೆಂಬುದೇ ಅರಿಯದಂತಾಗಿ ನಿರ್ವಿಕಲ್ಪ ಸಮಾಧಿಯಲ್ಲಿ ಐಕ್ಯವಾದರು. ಈ ಮೂರು ಹಂತವು ಬಸವಣ್ಣನವರ ಅಂಗವು ಲಿಂಗವಾದುದನ್ನು ಸೂಚಿಸುವುದು. ಹೀಗೆ ಶರಣಶಿವಪಂಥದಲ್ಲಿ ಅಂಗಲಿಂಗಸಾಮರಸ್ಯದ ಕೆಲವು ಪ್ರಮುಖ ಹಂತಗಳನ್ನೂ ಅವುಗಳ ಲಕ್ಷಣವನ್ನೂ ಈ ವಚನದಲ್ಲಿ ಗುರುತಿಸಬಹುದಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು