•  
  •  
  •  
  •  
Index   ವಚನ - 852    Search  
 
ಪ್ರಾಣಲಿಂಗಿಯ ಐಕ್ಯಸ್ಥಲ - ಮುಕ್ತಿ
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯಿದಾನ, ಸಮತೆಯೆಂಬ ಜಲ, ಕರಣಾದಿಗಳೆ ಶ್ರವಣ; ಜ್ಞಾನವೆಂಬಗ್ನಿಯನಿಕ್ಕಿ, ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದರೆ ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.
Transliteration Kāyavemba ghaṭakke caitan'yave sāyadāna, samate emba jala, karaṇādigaḷe śravaṇa; jñānavembagniyanikki, matiyemba saṭṭugadalli ghaṭṭisi pākakke tandu, bhāvadalli kuḷḷirisi pariṇāmadōgarava nīḍidare kūḍalasaṅgamadēvaṅge ārōgaṇeyittu.
Manuscript
Music Courtesy: Album Name - Vachana Dhare Vol -4 Singer : B.S.Mallikarjuna, Nanditha, Meghana, Sneha Music : M.S. Maruthi Label : Ashwini audio
English Translation 2 For body's pot, the ingredients Is energy; equipoise is water, The senses are pincers; The fire of knowledge being fed, And the broth thickened to a point With reason's spoon, to make him sit Within your heart and serve The food of joy- that is For Lord Kūḍala Saṅgama a meal. Translated by: L M A Menezes, S M Angadi
Hindi Translation तन रूपी घट के लिए चैतन्य ही द्रव्य है, समता रूपी जल है और करणादि चिमटी है ज्ञान रूपी अग्नि सुलगाकर, मति रूपी कलछी चलाकर पकाओ, भाव में बिठाकर संतुष्ट भोजन परोसने से कूडलसंगमदेव का वह भोग होगा ॥ Translated by: Banakara K Gowdappa
Telugu Translation కాయ మను ఘటమునకు చైతన్యమే సైఁదము; సమతయే జలము: కరణాదులే శ్రాణము జ్ఞానాగ్నిని రగిల్చి మతియను గరటిచే ఘట్టించి; పాకమునకు దెచ్చి భావమున కూర్చొన చేసి పరిణామపు టోగిరమును వడ్డించి నట్లైన కూడల సంగమ దేవునకు సంతృప్తి యగు. Translated by: Dr. Badala Ramaiah
Tamil Translation உடல் எனும் பானைக்கு சைதன்னியமே உணவுப்பொருட்களாம் சமநிலை எனும் நீர், புலன்களே விறகு ஞானம் எனும் நெருப்பை இட்டு அறிவெனும் சட்டுவத்தில் திருப்பி பக்குவம் செய்து உணர்வில் அமர்த்தி, இறைவன் நிறைவு எய்தும் வகையில் உள்ள உணவை அளிப்பின் கூடல சங்கம தேவனுக்கு உணவாயிற்று Translated by: Smt. Kalyani Venkataraman, Chennai
Marathi Translation कायारुपी घटाला चैतन्य ही सामग्री आहे, समतारुपी जल करणादि हे सायास (श्रम) आहे. ज्ञानरुपी अग्नीत टाकून मतीरूपी पळीने शिजविले. भावात बसवून परिणामरूपी भोजन वाढले. कूडलसंगमदेवाचे हेच भोजन. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮನುಷ್ಯನು ಉದ್ಧಾರವಾಗುವುದಕ್ಕೆ ಏನೆಲ್ಲ ಸಾಮಗ್ರಿ ಈ ಭೂಮಂಡಲದಲ್ಲಿ ಹೇಗಿದೆಯೋ -ಹಾಗೆ ಆತ್ಮವು ಉದ್ಧಾರವಾಗುವುದಕ್ಕೆ ಎಲ್ಲ ಸಾಧನಗಳೂ ಈ ದೇಹದಲ್ಲಿಯೇ ಇವೆ. ಅವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದರಲ್ಲೇ ಅವನ ಕಲೆ ಜ್ಞಾನ ವಿಜ್ಞಾನವೆಲ್ಲಾ ಅಡಗಿದೆ. ದೇಹವೇ ಮಡಕೆ, ಅಲ್ಲಿ ಜೀವಚೈತನ್ಯವೇ ಅಕ್ಕಿ ಬೇಳೆ ಲವಾಜಮೆ. ಸ್ಥಿತಪ್ರಜ್ಞೆಯೇ ನೀರು, ಇಂದ್ರಿಯಗಳೇ ಹಿಡಿ, ಜ್ಞಾನವೇ ಉರಿಯುವ ಬೆಂಕಿ, ಬುದ್ಧಿಯೆಂಬ ಸಟ್ಟುಗದಲ್ಲಿ ತಿರುವಿ ಈ ಜೀವಾತ್ಮನನ್ನು ಪರಿಪಾಕಮಾಡಿ -ಭಾವವೆಂಬ ಬಟ್ಟಲಲ್ಲಿ ಬಡಿಸಿದರೆ –ಅದನ್ನು ದೇವರು ಸ್ವೀಕರಿಸುವನು –ಮಾಮೂಲೀ ಅನ್ನಾಹಾರವನ್ನಲ್ಲ. ಈ ದೇಹದಲ್ಲಿರುವ ಜೀವನು ಇಂದ್ರಿಯಗಳ ಮತ್ತು ಅಂತಃಕರಣಗಳ ಉಚಿತ ಅನುಸಂಧಾನದಿಂದ ಶಿವನೊಳಗಾಗಲು ತಕ್ಕ ಪರಿಪಕ್ವತೆಯನ್ನು ಪಡೆಯುವನೆಂಬುದಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು