•  
  •  
  •  
  •  
Index   ವಚನ - 853    Search  
 
ಪ್ರಾಣಲಿಂಗಿಯ ಐಕ್ಯಸ್ಥಲ - ಮುಕ್ತಿ
ಕಣ್ಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, ಮನ ತುಂಬಿದ ಬಳಿಕ ನೆನೆಯಲಿಲ್ಲ, ಮಹಂತ ಕೂಡಲಸಂಗಮದೇವನ!
Transliteration Kaṇgaḷu tumbida baḷika nōḍalilla, kivigaḷu tumbida baḷika kēḷalilla, kaigaḷu tumbida baḷika pūjisalilla, mana tumbida baḷika neneyalilla, mahanta kūḍalasaṅgamadēvana!
Manuscript
Music Courtesy:
English Translation 2 After the eyes are filled, there's nought to see, After the ears are filled, there's nought to hear, After the hands are filled, there's nought to adore, After the heart is filled, there's nought to think Of our great Lord Kūḍala Saṅgama Translated by: L M A Menezes, S M Angadi
Hindi Translation आँखें भर जाने पर नहीं देखा, कान भर जाने पर नहीं सुना, हाथ भर जाने पर नहीं पूजा, मन भर जाने पर महान् कूडलसंगमदेव का स्मरण नहीं किया ॥ Translated by: Banakara K Gowdappa
Telugu Translation కన్నులు నిండిన వెనుక చూడలేను; చెవులు నిండిన వినలేను; చేతులు నిండిన పూజింపలేను మనసు నిండిన తలచలేను మహాత్ముని కూడల సంగమ దేవునికి Translated by: Dr. Badala Ramaiah
Tamil Translation கண்கள் நிறைந்த பிறகு காணவில்லை செவிகள் நிறைந்தபிறகு கேட்கவில்லை கைகள் நிறைந்தபிறகு பூசிக்கவில்லை மனம் நிறைந்த பிறகு நினையவில்லை மேன்மை சான்ற கூடல சங்கமதேவனை. Translated by: Smt. Kalyani Venkataraman, Chennai
Marathi Translation नयन तृप्त झाल्यावर पाहिले नाही. कान तृप्त झाल्यावर ऐकले नाही. हात तृप्त झाल्यावर पूजा केली नाही. मन तृप्त झाल्यावर स्मरण केले नाही. कूडलसंगमदेवाच्या कृपेमुळे Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಂಗೈಯಲ್ಲಿ ಲಿಂಗವಿರಿಸಿಕ್ಕೊಂಡು ಪದ್ಮಾಸನದಲ್ಲಿ ನೆಟ್ಟಗೆ ಕುಳಿತು, ದೃಷ್ಟಿಯನ್ನು ಹುಬ್ಬಿನ ಬಿಲ್ಲಿನಲ್ಲಿ ಅನುಸಂಧಾನಿಸಿ ಮೂಗಿನ ತುದಿಗುಂಟ ಲಿಂಗದಲ್ಲಿ ನಟಿಸುವ ಒಂದು ಶಿವಯೋಗ ಭಂಗಿಯನ್ನು ನೆನೆಯಿರಿ. ಆ ಸಮಾಧಿಸ್ಥಿತಿಯಲ್ಲಿ –ಕಣ್ಣಪಾಪೆಗಳಲ್ಲಿ ಲಿಂಗ ಬಿಂಬ ತುಂಬಿರುತ್ತದೆ, ಮಾಡಿದ ಮಾನಸ ಜಪದಿಂದಾಗಿ ಕಿವಿಗಳಲ್ಲಿ ಅನಾಹತನಾದ ತುಂಬಿರುತ್ತದೆ, ಕೈಗೊಂಡ ಪೂಜೆಯಿಂದಾಗಿ ಕೈ ತೊಂಬಿರುತ್ತದೆ,ಸಾಧಿಸಿದ ಏಕಾಗ್ರತೆಯಿಂದಾಗಿ ಮನ ತುಂಬಿರುತ್ತದೆ. ಈ ಅತೀಂದ್ರಿಯಾವಸ್ಥೆಯಲ್ಲಿ ನೋಡುವುದೆಂಬ ಕೇಳುವುದೆಂಬ ಪೂಜಿಸುವುದೆಂಬ ಧ್ಯಾನಿಸುವುದೆಂಬ ಯಾವ ಉಪಾಧಿಯೂ ಇಲ್ಲದೆ ಕೈವಲ್ಯ ಸ್ಥಿತಿಯಲ್ಲಿರುವನು ಭಕ್ತನೆಂಬುದು ಈ ವಚನದ ತಾತ್ಪರ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು