ಅಡಿಗಡಿಗೆ ಸ್ಥಾನನಿಧಿ, ಅಡಿಗಡಿಗೆ ದಿವ್ಯಕ್ಷೇತ್ರ,
ಅಡಿಗಡಿಗೆ ನಿಧಿಯೂ ನಿಧಾನ, ನೋಡಾ!
ಆತನ ಇರವೆ ವಾರಣಾಸಿ, ಅವಿಮುಕ್ತಿ ಕ್ಷೇತ್ರ:
ಕೂಡಲಸಂಗನ ಶರಣ ಸ್ವತಂತ್ರನಾಗಿ.
Transliteration Aḍigaḍige sthānanidhi, aḍigaḍige divyakṣētra,
aḍigaḍige nidhiyū nidhāna, nōḍā!
Ātana irave vāraṇāsi, avimukti kṣētra:
Kūḍalasaṅgana śaraṇa svatantranāgi.
Manuscript
English Translation 2 Each following step of His
Is a treasure spot.
Each step of His
Is holy place.
Behold a treasure trove
At every step!
When Kūḍala Saṅga’s Śaraṇas
Is free, his home
Is Vāraṇāsi and
Avimuktakṣētra!
Translated by: L M A Menezes, S M Angadi
Hindi Translation पग पग पर स्थान-निधि
पग पग पर दिव्य क्षेत्र हैं,
पग पग पर निधि निधान है ।
उसका निवास ही वाराणसी है, अविमुक्तिक्षेत्र जो है,
क्योंकि कूडलसंगमेश का शरण स्वतंत्र जो है॥
Translated by: Banakara K Gowdappa
Telugu Translation అడుగడుగూ స్థాననిధి;
ఆడుగడుగూ దివ్యక్షేత్రము;
అడుగడుగూ నిధి నిధానము కదరా!
ఆతని నెలవే వారణాసి అవిముక్త క్షేత్రము
మీ శరణుడు స్వతంత్రుడయ్యా సంగమదేవా!
Translated by: Dr. Badala Ramaiah
Tamil Translation அடிக்கடி ஞானச் செல்வம் அடிக்கடி புனிதத்தலம்
அடிக்கடி புதையலைக் காணாய்!
அவன் இருப்பது வாரணாசி, முக்தித்தலம்
கூடல சங்கனின் சரணன் தன்னிச்சையாக இருப்பவனன்றோ
Translated by: Smt. Kalyani Venkataraman, Chennai
Marathi Translation
शरणांच्या चरणापाशी स्थाननिधी, दिव्यक्षेत्र आहे.
तया चरणी अपार संपत्ती दिसते देवा !
त्याचे वासस्थान वाराणसी अविमुक्त क्षेत्र आहे.
कूडलतंगाचे शरण स्वतंत्र आहेत.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣನು ನಡೆದಾಡಿದೆಡೆಯೆಲ್ಲಾ ಜ್ಞಾನಕೇಂದ್ರ ಪುಣ್ಯಕ್ಷೇತ್ರ ನಿಧಿನಿಧಾನ. ಅವನು ಬೀಡುಬಿಟ್ಟ ಕಡೆಯೆಲ್ಲಾ ವಾರಣಾಸಿ ಅವಿಮುಕ್ತಕ್ಷೇತ್ರ.
ವಿ : ನಿಧಿ : ಗೋಪ್ಯವಾಗಿಟ್ಟಿರುವ ಹಣ. ನಿಧಾನ : ಪ್ರಕಟವಾಗಿ ಹಣವನ್ನು ಜೋಪಾನಮಾಡಿರುವ ಭಂಡಾರ, ಅವಿಮುಕ್ತ : ಕಾಶಿಯ ಬಳಿಯಿರುವ ಒಂದು ತೀರ್ಥಕ್ಷೇತ್ರ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು