•  
  •  
  •  
  •  
Index   ವಚನ - 856    Search  
 
ಶರಣನ ಜ್ಞಾನಿಸ್ಥಲ - ಅನುಭಾವ
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ, ಅನುಭಾವವೆಲ್ಲಿಯದೊ- ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ, ಅರಿಷಡ್ವರ್ಗ ದಶವಾಯು ಬೆರಸಿರ್ಪ ಕಳಂಕವಪ್ಪ ತನು ಬಿಡದನ್ನಕ್ಕ? ಸಂಸಾರ ಮಾಣ್ದಲ್ಲದೆ ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು ದುರಾಚಾರಿಗಳಿಗಳವಡದು, ನಮ್ಮ ಕೂಡಲಸಂಗನ ಶರಣರಿಗಲ್ಲದೆ.
Transliteration Śaraṇasanmatavappa nijaguṇabharitanappaḍe satva raja tama krōdha biḍadannakka, anubhāvavelliyado- ātmastuti paranindeya biḍadannakka, ariṣaḍvarga daśavāyu beresirpa kaḷaṅkavappa tanu biḍadannakka? Sansāra māṇdallade śaraṇasajjanike, samayācāra, nijavratavu durācārigaḷavaḍadu, nam'ma kūḍalasaṅgana śaraṇarigallade.
Manuscript
English Translation 2 Would you be filled With real virtue fit for a Śaraṇas, How can you leave Goodness and passion, anger, ignorance? Unless you leave malice and vanity, Unless you leave The tainted body, bound With six pernicious passions and ten airs? It is beyond the unrighteous man, To attain the gentleness of the Śaraṇas, The practice of the faith, true vows, Without renunciation of the world: That is reserved For our Kūḍala Saṅga’s Śaraṇas ! Translated by: L M A Menezes, S M Angadi
Hindi Translation शरण-सम्मत निजगुण से परिपूर्ण होने पर, सत्त्व, रज, तम, क्रोध न त्यागने तक, आत्मस्तुति, परनिंदा न त्यागने तक, अरिषड्वर्ग और दशवायु से युक्त कलंकित तन न त्यागने तक अनुभाव कहाँ? संसार को बिना त्यागे शरण-सज्जनता, समयाचार और निजव्रत मम कूडलसंगमेश के शरणों के सिवा दुराचारियों को प्राप्त नहीं हो सकते ॥ Translated by: Banakara K Gowdappa
Telugu Translation శరణులు మెచ్చ నిజగుణ భరితుడగునే? సత్త్వరజస్తమో క్రోధములు సడలనందాక ? అనుభావ మెక్కడిదో; ఆత్మ స్తుతి పర నిందలు వదలనందాక? అరిషడ్వర్గ దశ వాయువుల కళంకితమగు తనువు పడకుండ సంసారము తెగదయ్యా? శరణ సజ్జనత్వము; నిజవ్రతము సమయాచారము శరణులకు దప్పు దురాచారులకు పట్టదయ్యా! Translated by: Dr. Badala Ramaiah
Tamil Translation பக்தனுக்குச் சரணன் ஒப்பும் நல்லியல்புகள் இருத்தல் வேண்டும். சத்துவம், ராஜசீகம் தமோகுணம் சினத்தை விடாதவரையில் இறைவனை உணரவியலுமோ? தற்புகழ்ச்சி, பிறரை இகழ்தலை விடாதவரையில் அறுபகை, பத்துவாயுக்கள் கூடியுள்ள களங்கமுள்ள உடலை விடும்வரையில் உலகியலில் ஆசை விடாதவரையில் சரணரின் நல்லியல்புகள் நன்னெறி உண்மையான நோன்பு என்னுமிவை நெறியற்றோருக்குப் பொருந்துமோ நம் கூடல சங்கனின் அடியாருக்கின்றி ஐயனே. Translated by: Smt. Kalyani Venkataraman, Chennai
Marathi Translation शरणपथ स्वीकारणारे शरण गुणसंपन्न होऊन, सत्त्व, रज, तम, क्रोध सोडेपर्यंत अनुभाव कसा मिळणार? आत्मस्तुती, परनिंदा सोडेपर्यंत. अरिषइवर्ग, दशवायूने कलंकीत झालेला देह सोडेपर्यंत. संसारमोह सोडेपर्यंत अनुभाव कसा मिळणार? शरणांचा सज्जनपणा, समयाचार, सत्यव्रत दुराचारीना मिळणार नाही. आमच्या कूडलसंगाच्याशरणांना मात्र मिळणार. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸತ್ವ-ರಜ-ತಮಗಳ ಏರುಪೇರು ತಗ್ಗಿ ಶರಣರಿಗೆ ಪ್ರಿಯವಾದ ನೈಜಗುಣವೇರ್ಪಡದಿದ್ದರೆ ಅಂಥವರಿಗೆ ಶಿವಾನುಭವವೆಲ್ಲಿ ದಕ್ಕುವುದು ? ಆ ಶಿವಾನುಭಾವದಿಂದ ಪಡೆಯಬೇಕಾದ್ದು ಅಂತರಂಗದ ಐಶ್ವರ್ಯ ರೂಪವಾದ ಸಮಚಿತ್ತವೇ ಆಗಿದೆ. ಆತ್ಮಸ್ತುತಿಯಲ್ಲಿ ಮುಳುಗಿಸುವ ಕಾಮ ಮದ ಮತ್ಸರಗಳೂ, ಪರನಿಂದೆಯಲ್ಲಿ ತೊಡಗಿಸುವ ಲೋಭ ಕ್ರೋಧ ಮೋಹಗಳೂ ತುಂಬಿ ವಾಯುವಿಕಾರದಿಂದ ಬಾತಿರುವ ಈ ದೇಹವನ್ನು ತಹಬಂದಿಗೆ ತಂದಲ್ಲದೆ ಶಿವಾನುಭಾವ ದಕ್ಕುವುದು ಹೇಗೆ ? ಈ ಪ್ರಾಪಂಚಿಕ ದುರ್ಗುಣಗಳು ಮಾದ ಹೊರತು ಶರಣರ ಸಹವಾಸ ಸುಹಾಸ ದೊರೆಯದು, ಧರ್ಮಾಚರಣೆ ಊರ್ಜಿತವಾಗದು, ಶೀಲಸಂಪನ್ನತೆ ನಿಲ್ಲದು. ಈ ಎಲ್ಲವೂ ಸಾಧ್ಯವಾಗುವುದು ಶಿವಕ್ಕೇ ಶರಣಾಗತರಾದ ಶರಣರಿಗಲ್ಲದೆ ಅನ್ಯರಿಗಲ್ಲ. ವಿ : ಷಟ್ಸ್ಥಲದಲ್ಲಿ ಶರಣ ಮತ್ತು ಐಕ್ಯಸ್ಥಲಗಳೆರಡೂ ಜೀವನ್ಮುಕ್ತನಿಗೆ ಅನ್ವಯಿಸುವವು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು