ಶರಣನ ಜ್ಞಾನಿಸ್ಥಲ - ಶಿವಾಚಾರ
ಮರುಳು ಕಂಡ ಕನಸಿನ ಪರಿಯಂತೆ ಶಿವಾಚಾರ,
ಕರಿಯು ಕನ್ನಡಿಯೊಳಗಡಗಿದಂತಯ್ಯಾ !
ಗುಣಿಯವಗುಣಿಯೊಡನಾಡಿದರೆ
ಅದೆ ಆತನ ಕರ್ಮದ ಫಲ, ನೋಡಾ !
ಕೂಡಲಸಂಗನ ಶರಣರ ಅನುಭಾವ
ಭವದುಃಖಿಗಳಿಗೆ ವೇದ್ಯವಾಗದಯ್ಯಾ.
Transliteration Maruḷu kaṇḍa kanasina pariyante śivācāra,
kariyu kannaḍiyoḷagaḍagidantayyā!
Guṇi avaguṇiyoḍanāḍidare
adē ātana karmada phala, nōḍā!
Kūḍalasaṅgana śaraṇara anubhāva
bhavaduḥkhigaḷige vēdyavāgadayyā.
Manuscript
English Translation 2 A Śiva-discipline which is
Like a fool's dream,
Is as an elephant lurking within
A looking-glass!
If a good man keeps company
With evil men, it is his Karma's fruit!
The experience of Kūḍala Saṅga's Śaraṇās
Cannot be grasped by men who bear
The miseries of the world!
Translated by: L M A Menezes, S M Angadi
Hindi Translation पागल के स्वप्नवत् है शिवाचार
दर्पण में हाथी के छिप जाने के समान है ।
गुणी अवगुणी के संग रहे,
तो वह उसका कर्म-फल है।
कूडलसंगमदेव के शरणों का अनुभाव
भाव-दुःखियों को वेद्य नहीं होता॥
Translated by: Banakara K Gowdappa
Telugu Translation పిచ్చివాడు కన్న కల రీతి శివాచారము
అద్దమున అడగిన హస్తివలె నుండెనయ్యా!
గుణవంతుడు గుణహీనుని కూడుటది వాని కర్మఫలము సుమీ!
శరణుల అనుభావమేమో? భవబాధితులకు తెలియదయ్యా!
Translated by: Dr. Badala Ramaiah
Tamil Translation சிவநெறி என்பது மருளன் கண்ட கனவனையது
யானை ஆடியில் அடங்கியதனையது
நல்லியல்பினன், தீயியல்பினனுடன் உரையாடின்
அதுவே அவனுடைய வினைப்பயன் காணாய்
கூடல சங்கனின் அடியாரின் அனுபவத்தை
உலகியலில் உழல்வோர் அறியாரையனே.
Translated by: Smt. Kalyani Venkataraman, Chennai
Marathi Translation
वेड्याने पाहिलेल्या स्वप्नाप्रमाणे शिवाचार,
हत्ती आरशात दडल्याप्रमाणे आहे देवा !
गुणी अवगुणीच्या संगात राहिले तर हेच त्यांच्या कर्माचे फळ पहा !
कूडलसंगाच्या शरणांचा अनुभाव भवदुःखीना समजणार नाही देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಾಚಾರವೆಂಬುದು ನಿರೂಪಣೆಯ ಹಂತದಲ್ಲಿ ಹುಚ್ಚನು ಕಂಡ ಕನಸಿನಂತೆ -ಸ್ಫುಟವೂ ಓರಣವೂ ಆದ ಮಾತಿಗೆ ಸಿಗದೆ ಒಂದು ಒಗಟೆಯಂತಿರುವುದು. ಆದರೇನು ಕನ್ನಡಿಯಲ್ಲಿ ಪಡಿಮೂಡಿದ ಆನೆಯ ಬಿಂಬದಂತೆ ಅದು ಶರಣರ ಆಚರಣೆಯಲ್ಲಿ ಸರ್ವಾಂಗಸಂಗ್ರಹವಾಗಿ ನಿಚ್ಚಳವಾಗಿ ಕಾಣಸಿಗುವುದು. ಆದ್ದರಿಂದ ವರ್ಣಿಸಿ ಹೇಳಲಾಗದ ಶಿವಾಚಾರ ಶಿವಾನುಭಾವಗಳನ್ನು ಭಕ್ತರಾದವರು ಶರಣರ ಸಹವಾಸದಲ್ಲಿದ್ದು, ಅವರ ಪ್ರವಚನಾದಿಗಳಲ್ಲಿ ತಿಳಿದದ್ದನ್ನು, ಅವರ ಆಚರಣೆಗಳಲ್ಲಿ ಅನ್ವಯಿಕವಾಗಿ ಅವಗಾಹನೆಗೆ ತಂದುಕೊಂಡು ಭಕ್ತಿಯಿಂದ ಸಿದ್ಧಿಸಿಕೊಳ್ಳಬೇಕು.
ಈ ಮಾರ್ಗ ದುಷ್ಕರವೆಂದು ಹಾಗೆ ಮಾಡದೆ ಧೂರ್ತರ ನಯವಂಚಕರ ಸಹವಾಸಮಾಡಿ ವಾಮಮಾರ್ಗಗಳಲ್ಲಿ ನುಗ್ಗಿದರೆ ದುರ್ಗತಿಗೆ ಬೀಳುವರು. ಅದು ಅವರ ಪಾಪದ ಫಲವಲ್ಲದೆ ಅನ್ಯವಲ್ಲ. ಇಂಥವರಿಗೆ ಶಿವನು ಶಿವಶರಣರು ಶಿವಾನುಭಾವವು ಆತ್ಮಸಾಕ್ಷಾತ್ಕಾರವು ದೂರ, ಬಲು ದೂರ, ಬಹುದೂರ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು