•  
  •  
  •  
  •  
Index   ವಚನ - 861    Search  
 
ಶರಣನ ಜ್ಞಾನಿಸ್ಥಲ - ಅರಿವು
ಉಂಬ ಬಟ್ಟಲು ಬೇರೆ ಕಂಚಲ್ಲ: ನೋಡುವ ದರ್ಪಣ ಬೇರೆ ಕಂಚಲ್ಲ; ಭಾಂಡ ಒಂದೆ, ಭಾಜನ ಒಂದೆ: ಬೆಳಗೆ ಕನ್ನಡಿಯೆನಿಸಿತ್ತಯ್ಯಾ! ಅರಿದರೆ ಶರಣ; ಮರೆದರೆ ಮಾನವ; ಮರೆಯದೆ ಪೂಜಿಸು ಕೂಡಲಸಂಗಯ್ಯನ.
Transliteration Umba baṭṭalu bēre kan̄calla: Nōḍuva darpaṇa bēre kan̄calla; bhāṇḍa onde,bhājana onde: Beḷage kannaḍiyenisittayyā! Aridare śaraṇa; maredare mānava; mareyade pūjisu kūḍalasaṅgayyana.
Manuscript
Music Courtesy: Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2 The eating bowl is not one bronze and the looking glass another. Bowl and mirror are one metal. Giving back light one becomes a mirror. Aware, one is the Lord's; unaware, a mere human. Worship the lord without forgetting, the lord of the meeting rivers.

Translated by: A K Ramanujan
Book Name: Speaking Of Siva
Publisher: Penguin Books
----------------------------------
The plate wherefrom we eat, And the mirror we look Are one and the same; Of the same metal Same size and shape; You, rub it -lo !a mirror shows ! A Śaraṇās if one knows: if one forgets, And ordinary man: do thou, Forgetless, woship the Lord Kūḍala Saṅga ! Translated by: L M A Menezes, S M Angadi

Hindi Translation खाने की थाली का काँसा और देखने के दर्पण का काँसा भिन्न भिन्न नहीं है । भाँड एक है, भाजन एक है, साफ़ करने पर दर्पण कहलाता है, जानने पर शरण है भूलने पर मानव, बिना भूले मम कूडलसंगमदेव की पूजा करो ॥ Translated by: Banakara K Gowdappa
Telugu Translation తినెడి పాత్ర వేరె కంచముకాదు. తిలకించు దర్పణము వేరెకాదు భాండ భాజనము లొక్కటియే; రుద్ద ఆద్దమనిపించు; అరయ శరణుడు మఱువ మానవుడు మఱువక కొల్వుమా మా కూడల సంగమ దేవుని Translated by: Dr. Badala Ramaiah
Tamil Translation உண்கலன் வேறு வெண்கலமன்று, காணும் கண்ணாடி வேறு வெண்கலமன்று அடுகலன் ஒன்றே, உண்கலன் ஒன்றே மெருகுடன் கண்ணாடியாகிறது ஐயனே அறிந்தான் சரணன், மறப்பின் மனிதன் கூடல சங்கனை மறவாது பூசிப்பாய் Translated by: Smt. Kalyani Venkataraman, Chennai
Marathi Translation जेवणाची धाळी वेगळा धातू नाही. पाहण्याचा आरसा वेगळा धातू नाही. दोन्हीतील धातू एकच पण घासल्याने आरसा झाला. जाणले तर शरण, विसरला तर मानव. न विसरता पूजा करा कूडलसंगमदेवाची. Translated by Shalini Sreeshaila Doddamani
Urdu Translation برتن یہ خوردونوش کے پیتل کےساختہ ہم سب کےدیکھنےکا یہ شفّاف آئینہ دونوں زمیں کی دَین ہیں ، ان میں نہیں ہےفرق جومانجھے تو دھات بھی بنتی ہےآئینہ انسان کا وجود بھی ہے بس اسی طرح جواس کوجان لےوہی بنتا ہے یاں شرن جوا س کوبھول جائےفقط آدمی ہےوہ جی نہ چُرائےکوئی عبادت سے روز روز بھُولےنہ کوئی کوڈلا سنگا کی بات کو Translated by: Hameed Almas
ಕನ್ನಡ ವ್ಯಾಖ್ಯಾನ ಹಿಂದಿನ ಕಾಲದಲ್ಲಿ ಕಂಚಿನ ಲೋಹವನ್ನೇ ಎರಕಹೊಯ್ದು ಮೆರಗು ಕೊಟ್ಟು ನೋಡಲು ಕನ್ನಡಿಯೆಂದು ಬಳಸುತ್ತಿದ್ದರು. ಊಟ ಮಾಡುವ ಬಟ್ಟಲನ್ನೂ ಆ ಕಂಚಿನಿಂದಲೇ ಒರಟಾಗಿ ಮಾಡುತ್ತಿದ್ದರು. ಆ ನೋಡುವ ಕನ್ನಡಿಗೂ ಉಣ್ಣುವ ಬಟ್ಟಲಿಗೂ ಬಳಸುವ ಕಂಚೊಂದೇ ಆದರೂ ಹದ ಬೇರೆಬೇರೆಯಾಗುತ್ತಿತ್ತು. ಹೊಟ್ಟೆ ಪಾಡಿಗೆ ಉಣ್ಣಲು ಬಳಸುವ ಕಂಚು ಬಟ್ಟಲೆನಿಸಿ, ಸ್ವರೂಪವನ್ನು ಕಾಣಲು ಬಳಸುವ ಕಂಚು ದರ್ಪಣ ಎನಿಸುತ್ತಿತ್ತು. ಅಂತೆಯೇ ಶರಣನ ದೇಹವೂ ಸಾಮಾನ್ಯನೊಬ್ಬನ ದೇಹವೂ ಒಂದೇ ರಕ್ತ ಮಾಂಸದಿಂದಾದುವಾದರೂ –ಒಂದೊಂದರ ಹದ ಒಂದೊಂದು. ಈ ವಚನದಲ್ಲಿ ಬಂದಿರುವ “ಬೆಳಗಿ”ಎಂಬ ಪದದ ಅರ್ಥವ್ಯಾಪ್ತಿ ವಿಶಿಷ್ಟವಾದುದು. ಪಾತ್ರೆಯನ್ನು ತೊಳೆದಂತೆ ಮೈಯನ್ನು ಮಡಿಮಾಡಿದರೆ ಸಾಲದು, ವಿಶ್ವವನ್ನೂ ಒಳಗೊಳ್ಳುವ ಕನ್ನಡಿಯನ್ನಂತೆ ಅದನ್ನು ನಿಷ್ಕಳಂಕ ಸಮತಲೋಜ್ವಲ ಮಾಡಬೇಕೆಂಬುದಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು