•  
  •  
  •  
  •  
Index   ವಚನ - 865    Search  
 
ಶರಣನ ಜ್ಞಾನಿಸ್ಥಲ - ಜಂಗಮ
ಭಕ್ತನ ಮಠವೆಂದು ಜಂಗಮ ನಡೆದು ಬಂದಲ್ಲಿ, ಆ ಭಕ್ತನ ಕಾಣುತ್ತ, ಆಸನತ್ಯಜತೆಯ ಮಾಡುತ್ತ, ಕೊಂಕುತ್ತ, ಕೈಮುಗಿದು ನಿಂದಿರ್ದು, ಬಾಗಿ ಬಳಕುತ್ತ, ` `ಬಿಜಯಂ ಮಾಡಿ, ದೇವಾ!' ಎಂದು ಕರೆದು ಕುಳ್ಳಿರಿಸಿ, ಪಾದಾರ್ಚನೆಯಂ ಮಾಡಿ, ಪಾದೋದಕವಂ ಕೊಂಡು, ವಿಭೂತಿ-ವೀಳೆಯಂ ಕೊಟ್ಟು, ಕಂಗಳು ತುಂಬಿ ನಿರೀಕ್ಷಿಸಿ, ಶ್ರೋತ್ರ ತುಂಬಿ ಹಾರೈಸಿ, ಬಾಯಿ ತುಂಬಿ ಮಾತನಾಡಿ, `ಏಗುವುದು ಏ ಬೆಸನೆಂ'ದು; ತನುಕರಗಿ ಮನಕರಗಿ ನೋಡಿ, ಮಾಡುವುದು ಭಕ್ತಿಸ್ಥಲ. ಬಡವನಾಗಲಿ, ಬಲ್ಲಿದನಾಗಲಿ, ಇನಿತು ಮುಖ್ಯವಾಗಿ ಮಾಡಿಸಿಕೊಂಬುದು ಜಂಗಮಸ್ಥಲ. ಈ ಎರಡೊಂದಾದ ಘನವನಂತಿಂದೆಂದುಪಮಿಸಲಾಗದಂತಿರಲಿ ! ಇನಿತಲ್ಲದೆ ಮಾಡಿದ ಮಾಟ ಭಕ್ತಿಸ್ಥಲಕ್ಕೆ ಸಲ್ಲದು; ಫಲದಾಯಕನೈಸೆ ! ಇನಿತಲ್ಲದೆ ಮಾಡಿಕೊಂಬುದು ಜಂಗಮಸ್ಥಲಕ್ಕೆ ಸಲ್ಲದು, ಉಪಜೀವಿತನೈಸೆ ? ಈ ಎರಡಕ್ಕೆಯೂ ಭವ ಹಿಂಗದು, ಕಾಣಾ, ಕೂಡಲಸಂಗಮದೇವಾ!
Transliteration Bhaktana maṭhavendu jaṅgama naḍedu bandalli, ā bhaktana kāṇutta, āsana tyajateya māḍutta, koṅkutta, kaimugidu nindirdu, bāgi baḷukutta, ` `bijayaṁ māḍi, dēvā!' Endu karedu kuḷḷirisi, pādārcaneyaṁ māḍi, pādōdakaṁ koṇḍu, vibhūti-vīḷeyaṁ koṭṭu, kaṅgaḷu tumbi nirīkṣisi, śrōtra tumbi hāraisi, bāyi tumbi mātanāḍi, `ēguvudu ē besaneṁ'du; tanu karagi mana karagi nōḍi, māḍuvudu bhaktisthala. Baḍavanāgali, ballidanāgali, initu mukhyavāgi māḍisikombudu jaṅgamasthala. Ī eraḍondāda ghanavanantendupamisalāgadantirali! Initallade māḍida māta bhaktisthalakke salladu; phaladāyakanaise! Initallade māḍikombudu jaṅgamasthalakke salladu, upajīvitanaise? Ī eraḍakkeyū bhava hiṅgadu, kāṇā, kūḍalasaṅgamadēvā!
Manuscript
English Translation 2 When a Jaṅgama comes along Because it is a bhakta's house, The bhakta, seeing him, clears his seat, Stands bowing low with folded hands, Bends and sways, and calling him, "Lord, do us the grace to come in," Offers a seat, adores his feet, Drinks the water after washing them, Offers the sacred ash and tāmbūlaṁ , Gazes at him until his eyes are filled, Greets him until his ears are surfeited, And speaks to him until his mouth is full, Saying, "What must I do, what's thy behest?" To look at him with melting body and mind, And serve him, that is Bhaktisthala. Be he or rich or poor, to take this much As the important thing, is Jaṅgamasthala. The glory when these two become as one Cannot be said This way or that: so let it be! Another act than this does not befit Bhaktisthala: it bears a fruit! To have another act than this Done, does not befit the:Jaṅgamasthala: It turns to means of livelihood! Behold, O Kūḍala Saṅgama Lord,.. For these two this our worldly life, Will never cease! Translated by: L M A Menezes, S M Angadi
Hindi Translation भक्त का मठ समझ जंगम के चले आनेपर उसे देखा भक्त का अपना आसन तजकर हाथ जोडता हुआ खडा होना, नमन कर, विनम्रता से पधारिए देव, कहकर उन्हें बिठाना, पादार्चन कर पादोदक लेना, विभूति तथा तांबूल समर्पित करना नेत्र भर देखकर, श्रोत्र भर सुनकर हृदय से बोलकर ‘क्या सेवा करूँ? क्या आज्ञ है? कहता हुआ द्रवीभूत तन मन से सेवा करना भक्तिस्थ्ल है । धनी हो या निर्धन हो सेवा करा लेना जंगम-स्थल है। इन दोनों के एक होने की महिमा अनुपमेय है । इसके अतिरिक्त आचरित क्रिया भक्तिस्थल के योग्य नहीं है । वह फलदायक है । इसके अतिरिक्त कुछ करा लेना जंगमस्थल के योग्य नहीं है । वह जीविकोपार्जन मात्र है । इन दोनों को भी भव से मुक्ति नहीं; कूडलसंगमदेव ॥ Translated by: Banakara K Gowdappa
Telugu Translation భక్తుని మఠమని జంగముడు నడచిరాగ; ఆ భక్తుడతనిజూచి ఆసనము విడిచి లేచి కొంకుచు కేల్ముడిచి; నిలచి వంగి వడకుచు దయచేయుమో స్వామీ! అని పిలచి సుఖాసీనుజేసి; పాదార్చనము చేసి ఆ పాదోదకము గొని; విభూతి వీడ్యములిచ్చి కనులార చూచి చెవులార విని నోరూర దేవా! ఏమిరాక; ఆజ్ఞయేమి సెలపిండని మేను కరుగ; మది పొంగచూచి చేయుట భక్త స్థలము పేదjైునా; పెద్దjైునా భక్తియే ముఖ్యమని చేయించుకొనుటయే జంగమస్థలము ఈ రెండిరట నతికిన ఘనత యింతింతని యుపమింపరాదు! ఇటుగాక చేసినచేత చెల్లదు భక్తస్థలమునకు; కర్త ఫలదాయకుడౌ! ఇటుగాక చేయించుకొనుట జంగమ స్థలమునకు చెల్లదు; వా డుపజీవితుడౌ! ఈ యిరువురికీ భవము తప్పదురా సంగమదేవా! Translated by: Dr. Badala Ramaiah
Tamil Translation பக்தனின் மனைக்கு ஜங்கமன் நடந்துவரின் அதனைக் கண்டு பக்தன் எழுந்து வந்து உபசரித்து பணிவுடன் கைகூப்பி நின்று குனிந்து நடுங்கி “தேவரீர் வருவீர் என அழைத்து, அமர்த்தி திருவடியை அர்ச்சித்து, திருவடித் திருநீரைப் பெற்று திருநீறு வெற்றிலை அளித்து, கண்கள் நிறைந்து கண்டு, செவி நிறைந்து வாழ்த்தி வாய் நிறைந்து பேசி என்ன செய்வது ஆணை யிடும் என உடல் கரைந்து மனம் கரைந்து கண்டு செய்வது பக்தித்தலமாகும் ஏழையோ, செல்வந்தனோ, இதனை ஏற்றுக் கொள்வது ஜங்கமத்தலமாகும், இவ்விரண்டும் ஒன்றான மேன்மையை அவ்விதம் இவ்விதமென உவமிக்கவியலாது. இவ்விதமின்றி செய்த செயல் பக்தித்தலத்தில் செல்லாது இவ்விதமின்றி செய்வித்துக் கொள்வது ஜங்கமத் தலத்தில் செல்லாது இவ்விரண்டும் பொருந்தவில்லை எனின் பிறவி அகலாது காணாய், கூடல சங்கமதேவனே. Translated by: Smt. Kalyani Venkataraman, Chennai
Marathi Translation भक्ताचा मठ म्हणून जंगम येता त्या भक्ताने पाहून आपले आसन त्यागून, किंकरतेने हात जोडून, वाकून, `यावे, पादार्पण करावे देवा` म्हणून बसवून पादार्चना करुन पादोदक घ्यावे. विभूती-तांबूल देवून डोळे भरून पाहून कानाने त्यांचे अनुभाव ऐकून, तोंड भरुन स्तुती करावी. `कसे आहात? काय आज्ञा आहे!` असे मनापासून विचारणे, सेवा करणे हे भक्तस्थल आहे. गरीब असो, श्रीमंत असो, अशी सेवा करविणे जंगमस्थल. या दोन्हीचा मिलन महिमा अनुपम आहे. याविना केलेले आचरण भक्तस्थलाला योग्य नाहीः फलदायक आहे. याविना केलेले आचरण जंगमस्थलाला योग्य नाहीः उपजीविका आहे. यामुळे दोघांचा भवबंध सुटणार नाहीत कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತನ ಮನೆಗೆ ಜಂಗಮ ನಡೆದು ಬಂದಾಗ –ಅದನ್ನು ಕಂಡ ಭಕ್ತನು ಒಡನೆಯೇ ಕುಳಿತ ಪೀಠದಿಂದೆದ್ದು ಭಕ್ತಿಯಿಂದ ಕುಗ್ಗಿ ಕೈಮುಗಿದು ಮುಂದಾಗಿ ನಡೆದು -ಬಿಜಯಮಾಡಿ ದೇವ ಎಂದು ಸ್ವಾಗತಿಸಿ ಕುಳ್ಳಿರಿಸಬೇಕು, ಕಾಲು ತೊಳೆಯಬೇಕು, ಪಾದೋದಕವನ್ನು ಸ್ವೀಕರಿಸಬೇಕು, ವಿಭೂತಿ ಮತ್ತು ತಾಂಬೂಲವನ್ನು ತಂದು ಕೊಡಬೇಕು, ಅವನನ್ನು ಕಣ್ತುಂಬ ನೋಡಿ ಅವನ ಶಿವಾನುಭವದ ಮಾತುಗಳನ್ನು ಕಿವಿತುಂಬ ಆಲಿಸಿ, ಬಾಯಿತುಂಬ ಮಾತನಾಡಿ -ನನ್ನಿಂದ ತಮಗೇನಾಗಬೇಕು ಅಪ್ಪಣೆಮಾಡಿರೆಂದು ಮನಃಪೂರ್ವಕವಾಗಿ ಬಿನ್ನೈಸಿಕೊಂಡು ಸೇವೆಮಾಡಬೇಕು –ಇದು ಭಕ್ತನ ಕರ್ತವ್ಯ. ಇನ್ನು ಜಂಗಮದ ಕರ್ತವ್ಯವೆಂದರೆ ತಾನು ಬಂದ ಮನೆಯ ಒಡೆಯ ಬಡವನಾಗಲಿ ಬಲ್ಲಿದನಾಗಲಿ ತಾರತಮ್ಯವೆಣಿಸಿದೆ ಮಾಡಿದ ಸೇವೆಯನ್ನು ಕೈಗೊಳ್ಳಬೇಕು. ಹೀಗೆ ಭಕ್ತ ಮತ್ತು ಜಂಗಮ ಅನ್ಯೋನ್ಯವಾಗಿರುವುದೇ ಘನತೆ. ಅದಕ್ಕೆ ಸಮಾನವಾದ ಧಾರ್ಮಿಕಾಚರಣೆ ಮತ್ತೊಂದಿಲ್ಲ. ಈ ವಚನದಿಂದ ವ್ಯಕ್ತಪಡಿಸುವ ಭಕ್ತಜಂಗಮರ ನಿಯಮಾವಳಿ : (1) ಜಂಗಮ ಬಡಭಕ್ತರ ಮನೆಗಳಿಗೂ ಹೋಗಬೇಕು. (2) ಬಡಭಕ್ತರನ್ನೂ ಸಿರಿವಂತ ಭಕ್ತರನ್ನೂ ಅನುಗ್ರಹಿಸುವಲ್ಲಿ ಭೇದಮಾಡಬಾರದು. (3) ಭಕ್ತನು ಯಥಾಶಕ್ತಿ ಮಾಡಿದ ಸೇವೆಯಿಂದ ಜಂಗಮ ತೃಪ್ತನಾಗಬೇಕು. (4) ಮತ್ತು ಭಕ್ತನ ಆಧ್ಯಾತ್ಮಿಕ ಯೋಗಕ್ಷೇಮವನ್ನು ಕೇಳಿ ತಿಳಿದು ತಕ್ಕ ದಿಗ್ದರ್ಶನ ಮಾಡಬೇಕು. ಹಾಗಲ್ಲದೆ ಕೇವಲ ವಸೂಲಿಗಾಗಿ ಭಕ್ತನ ಮನೆಗೆ ಹೋಗಬಾರದು. (5) ಭಕ್ತನಾದರೋ ಜಂಗಮವನ್ನು ಅತ್ಯಂತ ಗೌರವದಿಂದ ಬರಮಾಡಿಕೊಂಡು ಅವರಿಗೇನು ಬೇಕೆಂಬುದನ್ನು ತಾನಾಗಿಯೇ ಕೇಳಿ ಕೊಡಬೇಕು –ಆದರೆ ತಾನು ಕೊಡುವವನೆಂಬ ಅಹಂಕಾರ ಅವನಿಗೆ ಸಲ್ಲದು. ವಿ : (1) ಈ ಜಂಗಮವನ್ನು ಒಬ್ಬ ಸನ್ಯಾಸಿಯೆಂದು ಗ್ರಹಿಸಬೇಕು. ಹಾಗಲ್ಲದೆ ಅವನು ಜಾತಿಯಿಂದ ಜಂಗಮನಾದವನೆಂದು ಬಗೆದರೆ –ಅದು ಬಸವಣ್ಣನವರ ವರ್ಣಸಂಕರ್ಯನೀತಿಗೆ ವಿರೋಧವಾಗುತ್ತದೆ. (2) ಭಕ್ತರ ಮನೆಯನ್ನೂ “ಮಠ”ವೆಂದು ಬಸವಣ್ಣನವರು ಕರೆದಿರುವುದನ್ನು ಗಮನಿಸಿ. ಜಂಗಮನು ಗೃಹಸ್ಥನಲ್ಲವಾಗಿ ಅವನ ವಾಸಸ್ಥಾನ “ಮಠ”ವೆಂದಾಗ ಒಬ್ಬ ಸನ್ಯಾಸಿಯ ಆವಾಸಸ್ಥಾನವೆಂದು ರೂಢಾರ್ಥವೇ ಆಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು