ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು;
ಭಕ್ತಿ ನಿಷ್ಠೆ ಆಚರಣೆಯಲ್ಲಿ ಬೀಯವಾಯಿತ್ತು,
ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಯಿತ್ತು:
ಒಂದೊಂದರರ ನಿಷ್ಠೆ ಅಂದಂದಿಗೆ ಬೀಯವಾಯಿತ್ತು,
ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು.
Transliteration Liṅganiṣṭhe pūjeyalli bīyavāyittu;
bhakti niṣṭhe ācaraṇeyalli bīḷuvāyittu,
prasādaniṣṭhe berakeyalli bīḷuttittu:
Ondondara niṣṭhe andandige bīḷuttittu,
kūḍalasaṅgamadēvana bhakti trijagavanāḷigoṇḍittu.
Manuscript
English Translation 2 One’s faith in Liṅga goes to waste
In worship ;
One’s faith in Bhakti goes to waste
In discipline;
One’s faith in each goes waste
Each day :
One’s love for Lord Kūḍala saṅgama
Disdains the triple world !
Translated by: L M A Menezes, S M Angadi
Hindi Translation लिंग-निष्ठा पूजा में नष्ट होती है;
भक्ति-निष्ठा आचरण में नष्ट होती है;
प्रसाद-निष्ठा समूह में नष्ट होती है;
प्रत्येक की निष्ठा प्रत्येक दिन नष्ट होती है;
कूडलसंगमदेव की भक्ति त्रिभुवनों का तिरस्कार करती है ॥
Translated by: Banakara K Gowdappa
Telugu Translation ఉదయం లింగనిష్ఠపూజలో వ్యయమైపోయె;
భక్తినిష్ఠ ఆచరణలో వ్యయమైపోయె;
ప్రసాదినిష్ఠ, సంక్రమములో వ్యయమైపోయె
ఒక్కొక్కరి నిష్ఠ ఒక్కొక్కరికే వ్యయమయ్యె!
సంగమదేవుని భక్తి ముల్లోకము లేలుకొనుచుండె.
Translated by: Dr. Badala Ramaiah
Tamil Translation இலிங்க நியமம், பூசையில் பயனற்றதாயிற்று
பக்தி நியமம் நடைமுறையில் பயனற்றதாயிற்று
ஜங்கம நியமம், தியாகத்தில் பயனற்றதாயிற்று
பிரசாத நியமம் கூடுவதில் பயனற்றதாயிற்று
ஒவ்வொரு நியமமும் அன்றன்றே பயனற்றதாயிற்று
கூடல சங்கம தேவனின் பக்தி மூவுலகிலும்
எவருக்கும் பொருந்தவில்லை ஐயனே
Translated by: Smt. Kalyani Venkataraman, Chennai
Marathi Translation
लिंगनिष्ठा पूजेत व्यर्थ गेली.
जंगमनिष्ठा आचरणात व्यर्थ गेली.
प्रसादनिष्ठा सेवेत व्यर्थ गेली.
एकेक निष्ठा त्यांच्या त्यांच्या सीमेत व्यर्थ गेली.
कूडलसंगमदेवाची भक्ती तिन्ही लोकानां भ्रमीत करते.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಲಿಂಗನಿಷ್ಠೆ ಭಕ್ತಿನಿಷ್ಠೆ ಪ್ರಸಾದನಿಷ್ಠೆ ಎಂಬ ಮೂರು ನಿಷ್ಠೆಗಳು ಭಕ್ತನ ದಿವ್ಯಜೀವನದ ಕ್ರಮಾಗತ ಮೂರು ಹಂತಗಳೆಂದು ತಿಳಿಯದೆ -ಲಿಂಗಧಾರಣೆಯು ಭಕ್ತಿಯಲ್ಲಿ, ಭಕ್ತಿಯು ಮನಃಪ್ರಸನ್ನತೆಯಲ್ಲಿ ಪರಿಣಮಿಸದೆ -ಲಿಂಗನಿಷ್ಠೆಯು ಕೇವಲ ಪೂಜೆಯಲ್ಲಿ, ಭಕ್ತಿನಿಷ್ಠೆಯು ಕೇವಲ ವ್ರತಶೀಲಾದಿ ಆಚರಣೆಗಳಲ್ಲಿ, ಪ್ರಸಾದನಿಷ್ಠೆಯು ಬಗೆಬಗೆಯ ಭಕ್ಷ್ಯಭೋಜ್ಯಗಳಲ್ಲಿ ಮುಗಿಯಿತು. ಹೀಗಾಗಿ ಈ ಮೂರು ನಿಷ್ಠೆಗಳು ಅಂದಂದಿನ ಕರ್ಮಗಳಾಗಿ ಮುಗಿದವು.
ಹೀಗೆ ಪರಮಾರ್ಥವನ್ನು ಕಳೆದುಕೊಂಡ(ಶಿವ) ಭಕ್ತಿಯೆಂಬ ಎರಡಕ್ಷರ ಮೂರು ಲೋಕವನ್ನೂ ಘಾಸಿಗೊಳಿಸುತ್ತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು