•  
  •  
  •  
  •  
Index   ವಚನ - 867    Search  
 
ಶರಣನ ಜ್ಞಾನಿಸ್ಥಲ - ಭಕ್ತಿ
ತೆರನನರಿವುದು ಅಪೂರ್ವ; ಅರಿದು ಮರೆವುದು ಅಪೂರ್ವ; ಕೂಡೆ ಶರಣೆಂಬುದು ಅಪೂರ್ವ! ಕೂಡಲಸಂಗಮದೇವನ ಭಕ್ತಿಯಭಿಮಾನಿಯ ಜವ್ವನದಂತೆ!
Transliteration Terananarivudu apūrva; aridu marevudu apūrva; kūḍe śaraṇembudu apūrva! Kūḍalasaṅgamadēvana bhaktiyabhimāniya javvanadante!
Manuscript
English Translation 2 To know the way is rare ; To know and then forget is rare; To be united and then to bow is rare! Your love for Lord Kūḍala saṅgama Is like youth of the proud ! Translated by: L M A Menezes, S M Angadi
Hindi Translation पथ जानना अपूर्व है; जानकर भूल जाना अपूर्व है; मिलकर ‘शरणु’ कहना अपूर्व है कूडलसंगमदेव की भक्ति अभिमानी के यौवन की भाँति है ॥ Translated by: Banakara K Gowdappa
Tamil Translation பக்தியின் உண்மை நிலையை அறிவது அரிது அறிந்து மறப்பது அரிது, இலிங்கத்துடன் இருந்து தன்னை மறப்பது அரிது கூடல சங்கமதேவனின் பக்தி குலப்பெண்ணின் யௌவன மனையதாம் Translated by: Smt. Kalyani Venkataraman, Chennai
Marathi Translation भक्ती रहस्य जाणणे अपूर्व आहे. जाणल्यावर विसरणे सुध्दा अपूर्व आहे. समरस होऊन दिव्यानुभव मिळविणे अपूर्व आहे. कूडलसंगमदेवाची भक्ती अभिमानीच्या यौवनासम आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸತ್ಯವನ್ನು ತಿಳಿಯುವುದು ಅಪುರೂಪ, ತಿಳಿದೂ ತಿಳಿಯದವನಂತಿರುವುದು ಇನ್ನೂ ಅಪುರೂಪ –ಆ ತಿಳಿದೂ ತಿಳಿಯದಂತಿರುವ ಶಿವಲೀನತೆಯಲ್ಲಿ ಎಚ್ಚರಿದ್ದು ಭಕ್ತವೃಂದಕ್ಕೆ ಶರಣುಶರಣಾರ್ತಿಯೆನ್ನುವುದು ಎಲ್ಲಕ್ಕಿಂತ ಅಪುರೂಪ. ಹೀಗೆ ಶಿವಜ್ಞಾನಿಗಳೂ ದಾಸೋಹಂಭಾವಿಗಳೂ ಆದ ಶಿವಶರಣರ ಘನತೆ ಬಿತ್ತರಗೊಳ್ಳದೆ ಗೋಪ್ಯವಾಗಿರುವುದೆಂಬುದಭಿಪ್ರಾಯ –ಅಭಿಮಾನೀ ಹೆಣ್ಣಿನ ಹರೆಯದ ಬಿನ್ನಾಣ ಅವಳ ಪ್ರಾಣ ಪ್ರಿಯನಿಗಲ್ಲದೆ ಅನ್ಯರಾರಿಗೂ ಗೋಚರವಾಗದಂತೆ ಶಿವಭಕ್ತನ ಭಕ್ತಿ ಶಿವನಿಗೆ ಮಾತ್ರ ನಿವೇದಿತವಾಗಿ ಮಿಕ್ಕವರಿಗೆ ಅಗೋಚರವಾಗಿರುವುದು. ಜ್ಞಾನಿಯಾಗಿಯೂ ಅಹಂಭಾವವಿಲ್ಲದೆ ಭಕ್ತರಲ್ಲಿ ವಿನೀತನಾಗಿರುವುದೇ, ಇದ್ದೂ ಪ್ರಚಾರಪ್ರಿಯನಾಗಿರುವುದೇ ನಿಜವಾದ ಭಕ್ತಿ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು