•  
  •  
  •  
  •  
Index   ವಚನ - 868    Search  
 
ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ : ಇದು ನಮ್ಮ ಬಾಳುವೆ, ಮದವಳಿಗೆ ; ಇದು ನಮ್ಮ ವಿಸ್ತಾರ, ಮದವಳಿಗೆ ! ಮದವಳಿದು ನಿಜವುಳಿದ ಬಳಿಕ, ಅದು ಸತ್ಯ ಕಾಣಾ, ಕೂಡಲಸಂಗಮದೇವಾ.
Transliteration Aidu mānava kuṭṭi ondu mānava māḍu, kaṇḍa madavaḷige: Idu nam'ma bāḷuve, madavaḷige; idu nam'ma vistāra, madavaḷige! Madavaḷidu nijavuḷida baḷika, adu satya kāṇā, kūḍalasaṅgamadēvā.
Manuscript
English Translation 2 The five bushels – pound them, bride, And make them one ; This is our life, O bride, This is our growth, O bride! When pride is crushed and the grain remains Look you, that is the Truth, O Kūḍala saṅgama Lord! Translated by: L M A Menezes, S M Angadi
Hindi Translation पाँच मापों को कूटकर एक माप बनाओ वधू यह हमारा जीवन है, दुलहन, यह हमारा विकास है, दुलहन, मद नष्ट होने पर बचा तत्व विकास ही सत्य है, कूडलसंगमदेव ॥ Translated by: Banakara K Gowdappa
Tamil Translation ஐம்புலன்களை இடித்து, ஒருமுகப் படுத்துவாய், மணப்பெண்ணே இது நம் வாழ்வு, மணப்பெண்ணே இது நம் அகத்தின் மலர்ச்சி மணப்பெண்ணே மதம் அழிந்து, உண்மை எஞ்சியபிறகு அது இறைவன் காணாய் கூடல சங்கமதேவனே. Translated by: Smt. Kalyani Venkataraman, Chennai
Marathi Translation पाच माप कुटून एक माप कर पाहू नववधू ! हेच आमचे जीवन आहे नववधू ! हेच आमचे वैभव आहे नववधू ! अहं नष्ट होऊन राहिलेले निज हेच सत्य पहा कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಐದು ಇಂದ್ರಿಯಗಳನ್ನು ಶಿಕ್ಷಿಸಿ ಮನವನ್ನು ಏಕಾಗ್ರಮಾಡಬೇಕು. ಇದೇ ನಮ್ಮ ಬಾಳುವೆ, ಮತ್ತು ನಮ್ಮ ಸತ್ಯ ಸಂಪತ್ತು. ಈ ಕಣ್ಣು ನಾಲಗೆ ಮುಂತಾದ ಇಂದ್ರಿಯಗಳಿಗೆ ಅಂಟಿರುವ ಮದವನ್ನು ಥಳಿಸಿ ಕಳೆದರೆ ಉಳಿಯುವುದು ನಮಗೆ ನಿಜಾನಂದಸ್ಥಿತಿ : ಎಂದು ಲಿಂಗಪತಿಯ ಕೈಹಿಡಿದ ಶರಣಸತಿಗೆ ಅವಳ ಹಿರಿಯ ಸಖಿಯಾದ ಇನ್ನೊಬ್ಬ ಶರಣಸತಿ ಬುದ್ಧಿವಾದ ಹೇಳುತ್ತಿರುವ ಧಾಟಿಯಲ್ಲಿದೆ ಈ ವಚನ. ಎಲ್ಲ ಕಾಲದ ಎಲ್ಲ ಭಕ್ತರಿಗೂ ಪತಿಯಾದವನು ಶಿವನೊಬ್ಬನೇ. ಅವನು ಪುರಾತನಪುರುಷನಾದರೂ –ವಸಂತದಂತೆ ನಿತ್ಯ ಯೌವನಿಗ. ಅಂದಂದಿನ ಜೀವ ಅವನ ಪ್ರಿಯತಮೆಯಾದಂದಂದಿಗೆ ಈ ಬುದ್ಧಿವಾದವನ್ನು ಪರಂಪರೆಯ ಗುರುಸ್ಥಾನದಲ್ಲಿರುವವರು ಹೇಳುತ್ತಲೇ ಇರುವರು. ಕೇಳಿದವರು ಬದುಕುತ್ತಾರೆ –ಇಲ್ಲದವರು ಬೀದಿಪಾಲಾಗುತ್ತಾರೆ. ಇನ್ನೊಂದು ರೀತಿಯಲ್ಲೂ ಹೇಳಬಹುದು : ಮನೆಗೆ ಹೊಸದಾಗಿ ಬಂದ ಹೆಣ್ಣಿಗೆ –ಆ ಮನೆಯಲ್ಲಿ ಅವಳು ನಡೆದುಕೊಳ್ಳಬೇಕಾದ ವಿಶಿಷ್ಟ ರೀತಿನೀತಿಗಳನ್ನು ಕುರಿತು ಅವಳಿಗೆ ಮುತ್ತೈದೆಯರು ಮುದ್ದು ಮಾತಿನಲ್ಲಿಯೇ ಬುದ್ಧಿವಾದ ಹೇಳುತ್ತಾರೆ. ಹಾಗೆಯೇ ಶಿವನ ಸಂಸಾರಕ್ಕೆ ಸೇರಿದ ಭಕ್ತನೊಬ್ಬನು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅವನಿಗೆ ಹಿರಿಯ ಭಕ್ತರು ಹೇಳುತ್ತಿದ್ದಾರೆಂದು –ಈ ವಚನ ಸಂದರ್ಭವನ್ನು ಕಲ್ಪಿಸಿಕೊಳ್ಳಬೇಕು. ಆ ಸುಸಂಸ್ಕೃತರ ಮನೆಯಲ್ಲಿ ಅನ್ನ ಮಲ್ಲಿಗೆಯಂತೆ ಬೆಳ್ಳಗು ಇರಬೇಕು ಸುವಾಸಿತವೂ ಆಗಿರಬೇಕು -ಹಾಗಾಗುವಂತೆ ಭತ್ತವನ್ನು ಹೇಗೆ ಕುಟ್ಟಬೇಕೋ ಹಾಗೆ –ಶಿವನ ವಿಶ್ವನೀಡಂನಲ್ಲಿ ಅವನ ಹೆಂಡಿರಾದ ಜೀವರು ಇಂದ್ರಿಯಗಳನ್ನು ಶುದ್ಧವಾಗಿಟ್ಟುಕೊಂಡಿರಬೇಕು –ಮತ್ತು ಮನಸ್ಸನ್ನು ಅತ್ತಿತ್ತ ಹರಿಯಬಿಡದೆ ಪತಿರತ್ನದಲ್ಲಿಯೇ ಹುರಿಗೊಳಿಸಿ ಪೋಣಿಸಿಕೊಂಡಿರಬೇಕು. ಶಿವಸಂಸಾರದಲ್ಲಿ ಶರಣಸತಿಯು ರೂಢಿಸಿಕೊಳ್ಳಬೇಕಾದ ಸತ್ಸಂಪ್ರದಾಯವಿದು. ವಿ : ಈ ವಚನದಲ್ಲಿ ಬಳಸಿರುವ “ಮದವಳಿಗೆ”ಎಂಬ ಪದ ನಾಮಪದವಾದರೆ ನವವಧುವೆಂದರ್ಥ, ಕ್ರಿಯಾಪದವಾದರೆ ಮದವಳಿಯಲಿ ಅಥವಾ ಮದ ನೀಗಲಿ ಎಂದರ್ಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು