ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು;
ಬೆಣ್ಣೆ ಕರಗಿ ತುಪ್ಪವಾಗಿ
ಮರಳಿ ತುಪ್ಪ ಬೆಣ್ಣೆಯಾಗದು ಕ್ರೀಯಳಿದು;
ಹೊನ್ನು ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು:
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗನು ಕ್ರೀಯಳಿದು.
Transliteration Maṇṇa maḍake maṇṇāgadu kriyāḷidu;
beṇṇe karagi tuppavāgi
maraḷi beṇṇeyāgadu kriyāḷidu;
honnu kabbunavāgadu kriyāḷidu,
muttu nīralli huṭṭi matte nīrāgadu kriyāḷidu:
Kūḍalasaṅgana śaraṇanāgi
maraḷi mānavanāgu kriyāḷidu.
Manuscript
English Translation 2 An earthen pot, by cancelling its form,
Cannot be earth again;
Once melted butter turns to ghee,
The ghee, by cancelling its form,
Cannot be butter again;
By cancelling its form
Gold will not turn to iron again
The water-born pearl will not,
By cancelling its form, become
Water again
Once you have been Kūḍala Saṅga'Śaraṇa,
You cannot, by cancelling your form,
Become again an ordinary man!
Translated by: L M A Menezes, S M Angadi
Hindi Translation मिट्टी का घडा अपना स्वरूप नष्ट कर
पुनः मिट्टी नहीं बन सकता ।
मक्खन पिघलकर घी बनता है,
पुनः वह अपना स्वरूप नष्ट कर
मक्खन नहीं बन सकता ।
सोना अपना स्वरूप नष्ट कर
पुनः लोहा नहीं बन सकता ।
मोती पानी में उत्पन्न होता है,
पुनः अपना स्वरूप नष्ट कर
पानी नहीं बन सकता ।
कूडलसंगमेश के शरण बनने के पश्चात्
पुनः अपना स्वरूप नष्ट कर
मानव नहीं बन सकता॥
Translated by: Banakara K Gowdappa
Telugu Translation కుండ పగిలి మఱల మన్ను కాదు క్రియచెడి;
నెయ్యికరిగి మఱల వెన్న కాదు క్రియచెడి;
పసిడి కరిగి మఱల యినుముకాదు క్రియచెడి;
ముత్యము మరలా నీరుకాదు శరణుడు మఱి మనిషి కాలేడయ్యా!
Translated by: Dr. Badala Ramaiah
Tamil Translation மட்குடம் தன் செயல்களை விடுத்து
மீண்டும் மண்ணாகாது, வெண்ணெய்
கரைந்து நெய்யாகி செயல்களை விடுத்து
மீண்டும் வெண்ணையாகாது பொன்
செயல்களை விடுத்து இரும்பு ஆகாது
முத்து நீரிலே தோன்றி தன்செயல்களை
விடுத்து மீண்டும் நீர் ஆகாது
கூடல சங்கனின் அடியாராகி செயல்களை
விடுத்து மீண்டும் மனிதனாக வியலாது
Translated by: Smt. Kalyani Venkataraman, Chennai
Marathi Translation
मातीचा घडा पुन्हा गुणरुप सोडून मातीत मिसळत नाही.
लोणी विरघळून तूप झाल्यावर पुन्हा लोणी होत नाही.
लोखंड परिसस्पर्शाने सुवर्ण झाल्यावर पुन्हा लोखंड होत नाही.
मोती पाण्याचा झाल्यावर पुन्हा पाणी होत नाही.
कूडलसंगाचे शरण झाल्यावर पुन्हा मानव होत नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಡಕೆ ಮಣ್ಣಿನಿಂದಲೇ ಮಾಡಿದುದಾದರೂ ಅದು ಮಣ್ಣಲ್ಲ –ಅದು ಆ ಮಣ್ಣಿಗಿಂತಲೂ ಕಲಾತ್ಮಕವಾಗಿರುವುದು. ತುಪ್ಪವು ಬೆಣ್ಣೆಯಿಂದಲೇ ಆದುದಾದರೂ ಅದು ಬೆಣ್ಣೆಯಲ್ಲ –ಅದು ಬೆಣ್ಣೆಗಿಂತಲೂ ಪರಿಪಕ್ವವಾದುದು. ಸ್ಪರ್ಶಮಣಿ ಮುಟ್ಟಿ ಚಿನ್ನವಾದ ಕಬ್ಬಿಣವು ಕಬ್ಬಿಣವಲ್ಲ –ಅದು ತೇಜೋಮಯವಾಗಿರುವುದು. ಮುತ್ತು ನೀರಿನಿಂದಲೇ ಆದುದಾದರೂ ಅದು ನೀರಲ್ಲ –ಅದು ನೀರಿಗಿಂತಲೂ ಅನರ್ಘ್ಯವಾಗಿರುವುದು. ಹಾಗೆಯೇ ಶರಣನು ಮೊದಲಿಗೆ ಸಾಮಾನ್ಯ ನರಮಾನವನೇ ಆಗಿದ್ದವನಾದರೂ ಅವನು ತನ್ನ ಶೀಲದಿಂದ ಸಚ್ಚಾರಿತ್ರದಿಂದ ಶರಣನೆನಿಸಿದ ಮೇಲೆ ಮರಳಿ ಅವನು ಅಧೋಗತಿಗಳಿದವನೆಂಬುದಾಗದು.
ವಿ : ಶಿವಭಕ್ತನನ್ನು ಶಿವಧರ್ಮದಿಂದ ಬಹಿಷ್ಕರಿಸುವುದನ್ನು ಈ ವಚನದ ಮೂಲಕ ಬಸವಣ್ಣನವರು ನಿಷೇದಿಸುತ್ತಿರುವರಾಗಬಹುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು