ಪೂರ್ವಜನ್ಮ ನಿವೃತ್ತಿಯಾಗಿ ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ?
ಭವಬಂಧನವೆಲ್ಲಿಯದೊ-
ಸಂಕಲ್ಪ-ವಿಕಲ್ಪವೆಂಬ ಸಂದೇಹ ಕಳೆದುಳಿದವಂಗೆ:
ಕೂಡಲಸಂಗಮದೇವನ ತ್ರಿಸಂಧ್ಯಾಕಾಲದಲ್ಲಿ
ಮಾಣದೆ ನೆನೆವಂಗೆ?
Transliteration Pūrvajanma nivr̥ttiyāgi gurukaruṇaviḍidaṅge bandhanavelliyadō?
Bhavabandhanavelliyado-
saṅkalpa-vikalpavemba sandēha kaḷeduḷidavaṅge:
Kūḍalasaṅgamadēvara trisandhyākāladalli
māṇade nenevaṅge?
Manuscript
English Translation 2 Where are the bonds for one
Who, shedding former bonds, enjoys
The Guru's grace? Where are the bonds
Of life for one for whom
The doubt called will and fancy has remained?
For one who recollects without fail
Lord Kūḍala Saṅgama thrice a day?
Translated by: L M A Menezes, S M Angadi
Hindi Translation पूर्वजन्म-मुक्त गुरु-कृपापात्र के लिए बंधन कहाँ?
जो संकल्प-विकल्प के संदेह से मुक्त है|
जो कूडलसंगमदेव का त्रिसंध्या में स्मरण करता है
उस के लिए भव-बंधन कहाँ?
Translated by: Banakara K Gowdappa
Telugu Translation తొలిజన్మ తొలిగి గురుకరుణ కల్గినవానికి
బంధమెక్కడిదో భవబంధ మెక్కడిదో!
సంకల్ప వికల్పములను సందేహము లుడిగినవానికి
భవబంధ మెక్కడిదో! త్రిసంధ్యల శివస్మరణ గలవానికి బంధమెక్కడిదో!
Translated by: Dr. Badala Ramaiah
Tamil Translation முற்பிறவி அழிந்து, குருவின் அருளைப்
பெற்றவனுக்குப் பிணைப்பு உண்டோ?
பிறவிப் பிணைப்பு உண்டோ?
சங்கல்பம் விகல்பம் எனும் ஐயம்
அகன்றவனுக்கு, கூடல சங்கமதேவனை
மூன்று சந்தியா நேரங்களில்
இடையறாது நினைவோனுக்குப் பிறவி உண்டோ?
Translated by: Smt. Kalyani Venkataraman, Chennai
Marathi Translation
पूर्वजन्म बंधन नष्ट होते ज्यांचे गुरुकृपेने त्याला बंधन कुठले ? त्याला भवबंधन कुठले?
संकल्प, विकल्पाचा संदेह नष्ट झालेल्यांना
कूडलसंगमदेवाच्या त्रिसंध्याकालाचे स्मरण करणाऱ्यांना बंधन कुठले ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಗುರುಕೃಪೆಗೆ ಪಾತ್ರನಾಗಿ ಹಿಂದಿನದನ್ನೆಲ್ಲ ಮರೆತವನಿಗೆ, ಸಂಕಲ್ಪ ವಿಕಲ್ಪ ಸಂದೇಹವೊಂದೂ ಇಲ್ಲದವನಿಗೆ, ಸದಾ ಶಿವಧ್ಯಾನಶೀಲನಿಗೆ -ಬಂಧನವಿಲ್ಲ ಭವಬಂಧನವಿಲ್ಲ.
ವಿ : ಈ ಮುಂತಾದ ವಚನಗಳ ಮೂಲಕ ಬಸವಣ್ಣನವರು –ತಾವು ಪ್ರವರ್ತಿಸಿದ ಧರ್ಮವ್ಯವಸ್ಥೆಯಲ್ಲಿ ಭಕ್ತನಾಗಿ ಸೇರಿದವನಿಗೆ ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದು ಮುಕ್ತಸ್ಥಿತಿಯಿರಬೇಕೆಂಬುದನ್ನು ದೃಢೀಕರಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು