•  
  •  
  •  
  •  
Index   ವಚನ - 872    Search  
 
ಶರಣನ ಜ್ಞಾನಿಸ್ಥಲ - ಪುನರ್ಜನ್ಮ
ಲಗ್ನವೆಲ್ಲಿಯದೊ, ವಿಘ್ನವೆಲ್ಲಿಯದೊ, ಸಂಗಯ್ಯಾ? ದೋಷವೆಲ್ಲಿಯದೊ, ದುರಿತವೆಲ್ಲಿಯದೊ, ಸಂಗಯ್ಯಾ? ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೊ, ಕೂಡಲಸಂಗಯ್ಯಾ?
Transliteration Lagnavelliyado, vighnavelliyado, saṅgayya? Dōṣavelliyado, duritavelliyado, saṅgayya? Nim'ma māṇade nenevaṅge bhavakarmavelliyado, kūḍalasaṅgayya?
Manuscript
English Translation 2 Where is the failure and success, O Lord? Where is the fault and sin? Where is the fruit of worldly life for one Who loves Thee without fail, O Kūḍala Saṅgama Lord? Translated by: L M A Menezes, S M Angadi
Hindi Translation लग्न कहाँ कि विघ्न कहाँ संगमेश? दोष कहाँ कि दुरित कहाँ संगमेश? तव स्मरण करनेवाले के लिए भव कर्म कहाँ कूडलसंगमेश? Translated by: Banakara K Gowdappa
Telugu Translation లగ్న మేదో, విఘ్న మేదో, సంగా! దోష మేదో, దురిత మేదో? నిన్ను విడువక తలచువానికి భవకర్మ మెక్కడిదో సంగయ్యా! Translated by: Dr. Badala Ramaiah
Tamil Translation இலக்கினம் எங்குள்ளது? தடை எங்குள்ளது? சங்கய்யனே, குற்றம் எங்குள்ளது? பாவம் எங்குள்ளது, சங்கய்யனே? உம்மை நினைவோனுக்கு, பிறவி சார்ந்த வினை உள்ளதோ கூடல சங்கமதேவனே. Translated by: Smt. Kalyani Venkataraman, Chennai
Marathi Translation शुभ कुठले, विघ्न कुठले लिंगदेव? दोष कुठले, दुरित कुठले लिंगदेवा? तव स्मरण करणाऱ्यांना भव कर्म कुठले कूडलसंगमदेवा? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅದಮ್ಯ ಉತ್ಸಾಹದಿಂದಲೂ ಆತ್ಮವಿಶ್ವಾಸದಿಂದಲೂ ಕೈಗೊಳ್ಳುವ ಶಿವಕಾರ್ಯಗಳಿಗೆ ಎಲ್ಲ ಕಾಲವೂ ಸುಲಗ್ನಸಾವಧಾನಕಾಲವೇ ಆಗಿ –ವಿಘ್ನಕಾಲವೆಂಬುದಿಲ್ಲ, ಫಲಪದವಿಗಳಿಗೆ ಆಶಿಸದೆ ಮಾಡುವ ಶಿವಧ್ಯಾನದಲ್ಲಿ ಏರ್ಪಡುವ ದೋಷವೂ ಇಲ್ಲ ಫಲಿಸುವ ಪಾಪವೂ ಇಲ್ಲ. ಲಗ್ನ ವಿಘ್ನವೆಂಬ ಮೀನಮೇಷವಿಲ್ಲದೆ, ದೋಷದುರಿತವೆಂಬ ಗತಾನುಗತಿಕವಿಲ್ಲದೆ ಶಿವಧ್ಯಾನ ನೌಕಾವಿಹಾರಿಯಾದ ಶಿವಭಕ್ತನಿಗೆ ಭವನಿಮಗ್ನತೆಯಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು