•  
  •  
  •  
  •  
Index   ವಚನ - 873    Search  
 
ಶರಣನ ಶರಣಸ್ಥಲ - ಶರಣರು
ಶರಣ ನಿದ್ರೆಗೆಯ್ದರೆ ಜಪ, ಕಾಣಿರೊ, ಶರಣನೆದ್ದು ಕುಳಿತರೆ ಶಿವರಾತ್ರಿ, ಕಾಣಿರೋ; ಶರಣ ನಡೆದುದೆ ಪಾವನ, ಕಾಣಿರೊ, ಶರಣ ನುಡಿದುದೆ ಶಿವತತ್ತ್ವ, ಕಾಣಿರೋ! ಕೂಡಲಸಂಗನ ಶರಣನ ಕಾಯವೇ ಕೈಲಾಸ, ಕಾಣಿರೋ!
Transliteration Śaraṇa nidregaidare japa, kāṇiro, śaraṇaneddu kuḷitare śivarātri, kāṇirō; śaraṇa naḍedude pāvana, kāṇiro, śaraṇa nuḍidude śivatattva, kāṇirō! Kūḍalasaṅgana śaraṇana kāyavē kailāsa, kāṇirō!
Manuscript
English Translation 2 Look you, the 'Śaraṇāss sleep is telling of beads; It's Śivarātri when he wakes and sits; Wherever he treads is holy ground; And Śiva doctrine whatever he speaks; The body of Kūḍala Saṅg's Śaraṇās Is very abode of Śiva! Translated by: L M A Menezes, S M Angadi
Hindi Translation देखो, शरण का सोना जप है, शरण का जागना शिवरात्रि है, शरण का चलना ही पावन है, शरण का बोलना ही शिवतत्व है, कूडलसंगमदेव के शरण की काया ही कैलास है ॥ Translated by: Banakara K Gowdappa
Telugu Translation శరణుడు నిద్రింప జపమని తెలియుడో; శరణుడు మేల్కొన్న శివరాత్రి తెలియుడో; శరణుడు నడచిన స్థలమే పవిత్రము తెలియుడో; శరణుడు పలికినదే శివతత్త్వము తెలియుడో; సంగని శరణుని కాయమే కైలాసము తెలియుడో! Translated by: Dr. Badala Ramaiah
Tamil Translation சரணனின் சரணத்தலம் சரணன் உறங்கின் அது செபம் காணீரோ சரணன் எழுந்து அமர்ந்தால் அவசிவராத்திரி காணீரோ சரணன் நடப்பதே புனிதம் காணீரோ சரணன் மொழிந்ததே சிவதத்துவம் காணீரோ கூடல சங்கனின் சரணனின் உடலே கைலாசம் காணீரோ Translated by: Smt. Kalyani Venkataraman, Chennai
Marathi Translation चालतसे जप, झोपता शरण शिवरात्र जाण, उठताचि भूमी ती पावन, चालताचि शरण बोलताच जाण, शिवतत्व कूडलसंगमदेवा ! शरणांची जाण कैलासचि भूमंडळी अर्थ : महात्मा बसवेश्वर, या वचनाद्वारे शिवशरणांचे स्वरुप स्पष्ट करीत आहेत. ते म्हणतात. ""शरण निद्रीस्त असता त्यांचा शिवनाम जप चालूच असतो ज्या रात्री ते जगतात ती शिवरात्रीच समजावी. ज्या भूभागावर ""ते चालत असतील तो भूभाग पावन जाणावा. त्यांच्या तोंडून बाहेर पडणारे शब्द म्हणजे परम शिवतत्वेच होत. माझ्या कूडलसंगमदेवाचे परम भक्त असणाऱ्याची काया हाच कैलास होय. इत्यर्थ- ज्यांचा आचार, विचार, उच्चार एकच असते ते शुद्ध सिद्ध व परम पवित्रच होत. म्हणूनच शरण सहज एकच असतात कोणत्याही गोष्टीचा ध्यास हाच त्याचा अभ्यास. कोणत्याही गोष्टीचे चिंतन तेच त्याचे मन त्या तत्वानुसार पाहता एकमेव परमेश्वर प्राप्ती हाच यांचा जीवन हेतु त्यांच्या रोमरोमी तीच शक्ती विराजमान असते. अहर्निश चिंतनाद्वारे ते स्वप्नी जागृती सुषुप्ती अवस्थेतही त्यांची सर्वेद्रीय क्रिया सहजतेने होत असते किंबहुना शिव चिंतन हा त्याचा स्वभावच होऊन जातो. श्वासोश्वासी चालणारा जप शिवैक्याचेच लक्षण होय महात्मा बसवेश्वराची शिकवण त्यांच्या रोमरोमी भिनली होती. शरीररूपी सर्व क्रिया नकळत सहज सदैव चालू असतात. अगदी शिव चिंतनही सहज व सदैव चालू असते. Translated by Rajendra Jirobe, Published by V B Patil, Hirabaug, Chembur, Mumbai, 1983 शरणांची निद्रा हाच जप पहा. शरणांची जागृती ही शिवरात्र पहा. शरण आचरण असलेली भूमी पावन पहा. शरण वाणी शिवतत्त्व पहा. कूडलसंगाच्या शरणाची कायक हाच कैलास पहा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣನ ದೇಹ ಪೀಠವಾಗಿ ಮನಸ್ಸು ಲಿಂಗವಾಗಿರುತ್ತದೆ. ಶಿವಶಕ್ತಿ ಸಂಗಮಸ್ಥಾನದಂತೆ ಶರಣನು ಕಂಗೊಳಿಸುತ್ತಾನೆ. ಅವನ ನಿದ್ರೆ ಯೋಗನಿದ್ರೆ, ಎಚ್ಚರ ಶಿವರಾತ್ರಿಯ ಜಾಗರಣೆ, ನಡೆದಾಡುವುದು ಯಾತ್ರೆ, ಮಾತು ಶಿವತತ್ತ್ವ ಪ್ರವಚನ. ಅವನ ಇರವೇ ಕೈಲಾಸವಾಗಿ -ಸುತ್ತಲೂ ಒಂದು ಪವಿತ್ರ ಪ್ರಭಾವಳಿ ಏರ್ಪಟ್ಟಿರುವುದು. ಶರಣನಲ್ಲದವನು ಜಪಮಾಡುತ್ತಿದ್ದರೆ ನಿದ್ರೆಹೋದಂತೆ, ಜಾಗರಣೆ ಮಾಡುತ್ತಿದ್ದರೆ ನಿದ್ರೆಗೆಟ್ಟವನಂತೆ, ತೀರ್ಥಯಾತ್ರೆ ಮಾಡುತ್ತಿದ್ದರೆ ವಿನೋದ ಪ್ರವಾಸ ಹೊರಟವನಂತೆ, ತತ್ತ್ವವಿಚಾರ ಮಾಡುತ್ತಿದ್ದರೆ ಹರಟುವನಂತೆ ಅನಿಸುವುದು. ಅವನು ಬಾಹ್ಯಾಭ್ಯಂತರ ತಾಮಸಮಯ, ಅಹಂಕಾರವೇ ಅವನಿಗೆ ಜೀವಾತ್ಮ ಅಂತರಾತ್ಮ ಪರಮಾತ್ಮ. ಪುಚ್ಛವಿಷಾಣಹೀನ ಪಶುವಿನ ಅಚ್ಚ ಅವತಾರವವನು. ಅಚ್ಚ ಶರಣನಿಗಾದರೋ ಜಪಜಾಗರಣೆ ಮುಂತಾದುವು ಅತ್ಯಂತ ಸಹಜಕ್ರಿಯೆಗಳಾಗಿಯೇ ಒಪ್ಪುವವು –ಏಕೆಂದರೆ ಅವನ ಸ್ಥೂಲದಲ್ಲಿ ಗುರು, ಸೂಕ್ಷ್ಮದಲ್ಲಿ ಲಿಂಗ, ಕಾರಣದಲ್ಲಿ ಜಂಗಮ ನೆಲಸಿರುವುದಾಗಿ ಅವನು ಸರ್ವತೋಮುಖವಾಗಿ ಶಿವನೇ ಆಗಿರುವನು. ಆದ್ದರಿಂದಲೇ ಅವನು ನಿದ್ರಿಸಿದರೆ ಜಪ, ಎಚ್ಚರವಾದರೆ ಶಿವರಾತ್ರಿ, ನಡೆದರೆ ಯಾತ್ರೆ, ನುಡಿದರೆ ಮಂತ್ರೋಚ್ಚಾರಣೆ –ಅವನ ಕಾಯವೇ ಕೈಲಾಸ. ಅವನ ಜೀವವೇ ಶಿವ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು