ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು.
Transliteration Upamisabārada upamātītaru,
kālakarmarahitaru, bhavavirahitaru,
kūḍalasaṅgamadēvā, nim'ma śaraṇaru.
Manuscript
English Translation 2 Thy Śaraṇās, O Kūḍala Saṅgama Lord,
Begger all telling, are beyond compare,
Exempt from death and action's fruit.
Free from rebirth!
Translated by: L M A Menezes, S M Angadi
Hindi Translation अनुपमेय हैं, उपमातीत हैं,
कालकर्म रहित हैं, भव विरहित हैं ।
कूडलसंगमदेव, तव शरण ॥
Translated by: Banakara K Gowdappa
Telugu Translation ఉపమాతీతుల నుపమింపరాదు; కాలకర్మ రహితులు
భవవిరహితులు సంగమదేవా నీ శరణులు.
Translated by: Dr. Badala Ramaiah
Tamil Translation உவமிக்கவியலாத, உவமைக்கு அப்பாற்பட்டவர்
குல, வினையற்றவர், பிறவியற்றவர்
கூடல சங்கமதேவனே, உம் அடியார் ஐயனே
Translated by: Smt. Kalyani Venkataraman, Chennai
Marathi Translation
उपमा देता येत नाही उपमातीतांना,
काळ-कर्मरहित, भवविरहीत,
कूडलसंगमदेवा तुमचे शरण.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಧರ್ಮದ ಈ ಶರಣರು ಯಾವ ಇತರ ಧರ್ಮದ ಸಂತರೊಡನೆಯೂ ಹೋಲಿಸಲಾಗದ ಉಪಮಾತೀತರು. ಅವರು ಒಂದು ಮುಕ್ತ ಸಮಾಜದ ಅನ್ವೇಷಣೆಯಲ್ಲಿರುವ ವೈಚಾರಿಕ ಜನ. ಕಾಲಕರ್ಮದ ಯಾವ ಒತ್ತಾಯಗಳಿಗೂ ಅವರು ಮಣಿಯುವರಲ್ಲ, ರೂಢಿಯ ಠೀವಿ ಠೇಂಕಾರಗಳೂ ಅವರಿಗಿಲ್ಲ. ಅಂಗೈಯಲ್ಲಿ ಬಿತ್ತಿದ ಲಿಂಗಬೀಜ ಅವರ ಕಾಲುಗಳಲ್ಲಿ ಬೇರುಬಿಟ್ಟ, ತೋಳುಗಳಲ್ಲಿ ಶಾಖೋಪಶಾಖೆಯಾಗಿ ಶಿರದಲ್ಲಿ ಸಹಸ್ರಾರವಾಗಿ ಅರಳುವ ಒಂದು ಜಂಗಮದಿವ್ಯವೃಕ್ಷ ಅವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು