•  
  •  
  •  
  •  
Index   ವಚನ - 875    Search  
 
ಶರಣನ ಶರಣಸ್ಥಲ - ಶರಣರು
ಭವಕ್ಕೆ ಹುಟ್ಟುವನಲ್ಲ, ಸಂದೇಹಿ ಸೂತಕಿಯಲ್ಲ, ಆಕಾರ ನಿರಾಕಾರನಲ್ಲ, ನೋಡಯ್ಯಾ; ಕಾಯವಂಚಕನಲ್ಲ, ಜೀವವಂಚಕನಲ್ಲ, ಶಂಕೆಯಿಲ್ಲದ ಮಹಾಮಹಿಮ, ನೋಡಯ್ಯಾ; ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ!
Transliteration Bhavakke huṭṭuvanalla, sandēhi sūtakiyalla, ākāra nirākāranalla, nōḍayya; kāyavan̄cakanalla, jīvavan̄cakanalla, śaṅkeyillada mahāmahima, nōḍayya; kūḍalasaṅgana śaraṇanupamātīta, nōḍayya!
Manuscript
English Translation 2 Mark you, good Sir: He is not born unto the world, No prey to doubt or impurity, Neither a form nor formlessness; He neither cheats his body nor his soul; A glory lifted above doubt: 'Kūḍala Saṅgas Śaraṇās is beyond compare! Translated by: L M A Menezes, S M Angadi
Hindi Translation भव में जन्म लेनेवाला नहीं है न वह संदेही है, न सूतकी, न साकार है, न निराकार, न कायवंचक है, न जीववंचक, वह शंकारहित महामहिम है, कूडलसंगमेश का शरण उपमातीत है ॥ Translated by: Banakara K Gowdappa
Telugu Translation భవమున పడువాడు కాడు; సందేహి సూతకి కాడు; ఆకార నిరాకారుడు కాడు; కాయవంచకుడు కాడు; ప్రాణవంచకుడు కాడు; శంకలేని మహామహిముడు చూడయ్యా సంగని శరణుడు ఉపమాతీతుడయ్యా! Translated by: Dr. Badala Ramaiah
Tamil Translation பிறவிச்சக்கரத்தில் சுழல்வோனன்று ஐயமுள்ள, மாசுள்ளவன் அல்லன் உருவம், அருவம் இல்லை, காணாய் உடலை வஞ்சிப்போனன்று, உயிரை வஞ்சிப் போனன்று ஐயமற்ற மேன்மையோன் காணீர் கூடல சங்கனின் சரணர் உவமைக்கு அப்பால்பட்டவர்கள் காணீர். Translated by: Smt. Kalyani Venkataraman, Chennai
Marathi Translation भवात जन्मणारे नाही, संदेह-सूतकी नाही. आकार-निराकार नाही पहा देवा. काया वंचक नाही, जीव वंचक नाही. शंका रहित महामहिम पहा देवा. कूडलसंगाचे शरण उपमातीत पहा देवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣನು ಭವಕ್ಕೆ ಹುಟ್ಟಿದವನಲ್ಲವಾಗಿ ಜಗದ ಜನರ ಭವಿತವ್ಯಕ್ಕಾಗಿ ಜೀವಿಸುವನು. ಅವನೆಂದಿಗೂ ಎಲ್ಲವನ್ನೂ ಸಂದೇಹಿಸುತ್ತ, ಎಲ್ಲವನ್ನೂ ದೂರೀಕರಿಸುತ್ತ, ಏನನ್ನೂ ತಟ್ಟದೆ ಮುಟ್ಟದೆ ಮಡಿಯಾಗಿಯೇ ಮಡಿಯಬೇಕೆಂಬವನಲ್ಲ. ಆರೋಗ್ಯವಂತನ ಉಸಿರಾಟದಲ್ಲಿ ಒಂದು ನಿಯತಲಯವಿರುವಂತೆ –ಆ ಶರಣನ ಬಾಳಿನ ಬಗೆಯಲ್ಲಿ ಅತಿರೇಕವಲ್ಲದ ಒಂದು ಗಹನತೆಯೂ, ಅತಿಪರಿಚಿತವಲ್ಲದ ಒಂದು ಸರಳತೆಯೂ ಇರುತ್ತದೆ. ಅದರ ಫಲವಾಗಿಯೇ ಅವನು ಅತಿಮಾನವನೂ ಅಲ್ಲದೆ, ಗಾವಿಲಮಾನವನೂ ಅಲ್ಲದೆ ; ಅತೀತವಾದಿಯೂ ಅಲ್ಲದೆ, ಭೌತವಾದಿಯೂ ಅಲ್ಲದೆ ; ಜೀವಕ್ಕೂ ದ್ರೋಹಬಗೆಯದೆ, ಕಾಯಕ್ಕೂ ವಂಚನೆ ಮಾಡದೆ ನಿಜಜೀವನದಲ್ಲಿ ನೈಜವಾಗಿರುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು