•  
  •  
  •  
  •  
Index   ವಚನ - 876    Search  
 
ಶರಣನ ಶರಣಸ್ಥಲ - ಶರಣರು
ಬ್ರಹ್ಮಂಗೆ ವಾಕ್‌ ಪರುಷ, ವಿಷ್ಣುವಿಂಗೆ ನಯನ ಪರುಷ, ರುದ್ರಂಗೆ ಹಸ್ತ ಪರುಷ, ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ!
Transliteration Brahmaṅge vāk paruṣa, viṣṇuviṅge nayana paruṣa, rudraṅge hasta paruṣa, nam'ma kūḍalasaṅgana śaraṇaṅge pādavē paruṣa!
Manuscript
English Translation 2 Speech is in Brahma alchemy, In Viṣṇu eyes, in Rudra hands; In our 'Kūḍala Saṅga's Śaraṇā The feet are alchemy! Translated by: L M A Menezes, S M Angadi
Hindi Translation ब्रह्म का वाक् पारस है, विष्णु के नयन पारस हैं, रुद्र के हस्त पारस हैं, मम कूडलसंगमेश के शरण के चरण ही पारस हैं ॥ Translated by: Banakara K Gowdappa
Telugu Translation పలుకే పరుసము బ్రహ్మకు; కనులే పరుసము విష్ణువునకు; కరమే పరుసము రుద్రునకు; పదమే పరుసము సంగని శరణునకు. Translated by: Dr. Badala Ramaiah
Tamil Translation பிரம்மனுக்கு வாக்கு பரிசவேதி திருமாலிற்கு கண் பரிசவேதி உருத்திரனுக்குக் கை பரிசவேதி நம் கூடல சங்கனின் அடியாருக்குத் திருவடியே பரிசவேதி ஐயனே. Translated by: Smt. Kalyani Venkataraman, Chennai
Marathi Translation ब्रह्माची वाणी परिस आहे, विष्णूचे नेत्र परिस आहे. रुद्राचे हस्त परिस आहे. आमच्या कूडलसंगाच्या शरणांचे चरण परिस आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಸೃಷ್ಟಿ ಬ್ರಹ್ಮನು ಆಗೆಂದರೆ ಆಯಿತಾಗಿ ಆ ಬ್ರಹ್ಮನು ವಾಕ್ಪುರುಷದವನು. ವಿಷ್ಣುವಿನ ಕಣ್ಸನ್ನೆಯಲ್ಲಿ ಈ ಸೃಷ್ಟಿ ಉಸಿರಾಡುವುದಾಗಿ ಆ ವಿಷ್ಣು ನಯನಪರುಪದವನು. ರುದ್ರನ ಕರಾಘಾತಕ್ಕೆ ಸಿಲುಕಿ ಈ ಸೃಷ್ಟಿವಿಲಯವಾಗುವುದಾಗಿ ಆ ರುದ್ರನು ಹಸ್ತಪರುಷದವನು. ಆದರೆ ಈ ಗತಾನುಗತಿಕವಾದ ಸೃಷ್ಟಿ ಸಾರ್ಥಕವಾದೊಂದು ಬದುಕನ್ನು ಬದುಕುವುದು ಶಿವಶರಣರು ನಡೆದು ತೋರಿದ ಹಾದಿಯಲ್ಲಿ ವಿಕ್ರಮಿಸಿದಾಗಲಾದ್ದರಿಂದ ಶರಣನು ಪಾದಪರುಷದವನು. ಕೇವಲ ಹುಟ್ಟುವ ಉಸಿರಾಡುವ ಸಾಯುವ ಜೀವನ ರೀತಿ ತೀರ ಪ್ರಾಕೃತಿಕವಾದುದು. ಅದು ಪರಿಷ್ಕಾರಗೊಂಡು ಅರ್ಥಪೂರ್ಣವಾಗುವುದು ಶರಣರ ಮಾರ್ಗದಲ್ಲಿ ಪ್ರವರ್ತಿಸಿದಾಗಲೇ ಎಂಬುದು ಈ ವಚನದ ತಾತ್ಪರ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು