ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನೆ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಗಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನು ಘನವೆಂಬೆನೆ?
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು!
Transliteration Samudra ghanavembene? Dhareya mēlaḍagittu.
Dhare ghanavembene? Nāgēndrana phaṇāmaṇiya mēlaḍagittu.
Nāgēndra ghanavembene?
Pārvatiya kirukuṇikeya mudrikeyāgittu.
Anta pārvati ghanavembene?
Paramēśvarana ardhāṅgiyādaḷu.
Antaha paramēśvaranu ghanavembene?
Nam'ma kūḍalasaṅgana śaraṇara
manada koneya moneya mēlaḍagidanu!
Manuscript
English Translation 2 Should I say that the sea is great?
The earth holds it!
Should I say that the earth is great?
The jewel in the snake-god's hood
Holds that!
Should I say that the snake-god's great?
He is contained within the signet-ring
On the small finger of Pārvati !
Is then Pārvati great? She is
'Paramēśvara's better half!
Is this Paramēśvara great, then? He's
Contained within the point of points
Of our Kíðala Saþga's Śaraṇās '
Minds!
Translated by: L M A Menezes, S M Angadi
Hindi Translation समुद्र श्रेष्ठ कहूँ?
वह धरा पर स्थित है ।
धरा श्रेष्ठ कहूँ?
वह नागेंद्र की फणा-मणि पर स्थित है।
नागेंद्र को श्रेष्ठ कहूँ?
वह पार्वती की कनिष्ट-अंगुली की मुद्रिका है,
ऐसी पार्वती को श्रेष्ठ कहूँ?
वह परमेश्वर की अर्धांगिनी है
ऐसे परमेश्वर को श्रेष्ठ कहूँ?
वह मम कूडलसंगमदेव के शरणों के
मनाग्र पर स्थित है ॥
Translated by: Banakara K Gowdappa
Telugu Translation పయోథి ఘనమందునా ధరిత్రిపై యడగినది;
ధరిత్రి ఘనమందునా; నాగేంద్రుని ఫణామణులపై నిల్చినది
నాగేంద్రుని ఘనమందునా; పార్వతి చిరుగజ్జెల ముద్రిక అయ్యె
పార్వతిని ఘనమందునా పరమేశ్వరునకు అర్ధాంగి అయ్యె
పరమేశ్వరుని ఘనుడందునా మా కూడల సంగని
శరణుల మనశ్శిఖాగ్రములపై వెలింగె.
Translated by: Dr. Badala Ramaiah
Tamil Translation கடலைச் சிறந்தது என்பேனோ?
நிலத்தில் அடங்கிவிட்டது
நிலம் சிறந்தது என்பேனோ?
ஆதிசேடனின் படத்திலுள்ள மணியில்
அடங்கியது, ஆதிசேடன் சிறந்தது
என்பேனோ? பார்வதியின் சுண்டுவிரலின்
மோதிரமாயிற்று. அத்தகைய பார்வதியைச்
சிறந்தவள் என்பேனோ? பரமேசுவரனின்
பாதி உடலாயினள், பரமேசுவரனைச்
சிறந்தவன் என்பேனோ? நம் கூடல சங்கனின்
அடியாரின் மனத்தின் இறுதி முனையிலே
அடங்கி விட்டானன்றோ!
Translated by: Smt. Kalyani Venkataraman, Chennai
Marathi Translation
समुद्राला मोठा म्हणू ? धरतीवर आश्रीत आहे.
धरत्री मोठी म्हणू? नागेंद्राच्या फण्यावर आश्रीत आहे.
नागेंद्राला मोठा म्हणू ? पार्वतीच्या करंळीची मुद्रा आहे.
पार्वतीला मोठी म्हणू ? परमेश्वराची आर्धांगी आहे.
त्या परमेश्वराला मोठा म्हणू? आमच्या कूडलसंगाच्या शरणांच्या
मनाच्या अंतिम टोकावर तो आहे.
Translated by Shalini Sreeshaila Doddamani
Urdu Translation کیا سمندرکومیں عظیم کہوں
جبکہ دَھرتی کےایک کونےمیں
بن گیا ہے وہ خود پناہ گزیں
کیامیں سمجھوں عظیم ہے یہ زمیں
جبکہ خود یہ ہے کلاہِ افعی پر
ایستادہ ہے، کیا میں افعی کو
بحرو بَرسے بہت بڑا سمجھوں
جبکہ خود ہے یہ بن کےاک خا تم
زیب ِ انگشت ِ دست ِ پاروتی
اس سےاعلٰی ہیں کیا یہ پاروتی
یہ تو پرمیشور کی زوجہ ہیں
کیا یہ پرمیشور ہیں سب سےعظیم
یہ تووہ ہیں جو کوڈلا سنگا
تیرے ان پاکبازشرنوں کے
آخر ی کنجِِ د ل میں رہتے ہیں
Translated by: Hameed Almas
ಕನ್ನಡ ವ್ಯಾಖ್ಯಾನ ಶಿವಶರಣರ ದೇಹ ಎಲ್ಲರ ದೇಹದಂತೆಯೇ ತೋರಬಹುದು –ಆದರೆ ಅವರ ಅತಿಮಾನಸವು ಬ್ರಹ್ಮಾಂಡವನ್ನೂ, ಆ ಬ್ರಹ್ಮಾಂಡವನ್ನು ನಿರ್ವಹಿಸುವ ಆದಿಶೇಷನನ್ನೂ, ಅವೆಲ್ಲವನ್ನೂ ನಿಯಂತ್ರಿಸುವ ಪರಮೇಶ್ವರ ಶಿವನನ್ನೂ ಶಿವಶಕ್ತಿಯನ್ನೂ ಅತಿಕ್ರಮಿಸಿರುವುದು.
ಈ ಶರಣನ ಮನದ ಕೊನೆಯ ಒಂದಂಶದಲ್ಲಿ ಶಿವ ನೆಲೆಸಿದ, ಆ ಶಿವನ ಅರ್ಧಾಂಗದಲ್ಲಿ ಪಾರ್ವತೀ ಶಕ್ತಿ ಅಡಗಿದಳು, ಅವಳ ಕಿರುಬೆರಳ ಉಂಗುರವಾದನು ಆದಿಶೇಷ. ಆ ಆದಿಶೇಷನ ಒಂದು ಹೆಡೆಮಣಿಯಲ್ಲಿ ಈ ಭೂಮಿಯೊಂದು ಧೂಳೀ ಕಣವಾಯಿತು, ಈ ಭೂಮಿಯ ಒಂದು ಕುಳಿಯಲ್ಲಿ ಸಪ್ತಸಮುದ್ರಗಳೂ ಹರಡಿ ನಿಂತವು.
ಶರಣನ ಆದಿಮಾನಸವು ಸಪ್ತಸಮುದ್ರಕ್ಕಿಂತ ಅಗಾಧ, ಭೂಮಿಗಿಂತ ವಿಸ್ತಾರ, ಆದಿಶೇಷನಿಗಿಂತ ವಿವಿಧಾಧಾರ, ಪಾರ್ವತಿಗಿಂತ ಶಕ್ತಿಸಂಪನ್ನ ಶಿವನಿಗಿಂತ ಶಿವಶಂಕರ.
ಶಿವಧ್ಯಾನನಿರತನಾದ ಶರಣನ ಪಾದಗಳನ್ನು ಹಿಡಿದವನು ಎಲ್ಲವನ್ನೂ ಪಡೆದವನೆಂಬುದು ಈ ವಚನದ ಇಂಗಿತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು