•  
  •  
  •  
  •  
Index   ವಚನ - 878    Search  
 
ಶರಣನ ಶರಣಸ್ಥಲ - ಭಕ್ತಿಮಾರ್ಗ
ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ. ಅನುಭಾವಲಿಂಗವಿಡಿದು ಮಾರ್ಗಕ್ರಿಯಾಲಿಂಗಸಿದ್ಧಿ. ಮಾರ್ಗಕ್ರಿಯಾಲಿಂಗವಿಡಿದು ಮೀರಿದ ಕ್ರಿಯಾಲಿಂಗಸಿದ್ಧಿ, ಮೀರಿದ ಕ್ರಿಯಾಲಿಂಗವಿಡಿದು ಕ್ರಿಯಾನಿಷ್ಪತ್ತಿಲಿಂಗಸಿದ್ಧಿ, ಇದು ಕಾರಣ, ಕೂಡಲಸಂಗಮದೇವ, ಲಿಂಗವಿಡಿದು ಲಿಂಗಸಿದ್ಧಿ!
Transliteration Ācāraliṅgaviḍidu anubhāvaliṅgasid'dhi. Anubhāvaliṅgaviḍidu mārgakriyāliṅgasid'dhi. mārgakriyāliṅgaviḍidu mīrida kriyāliṅgasid'dhi, mīrida kriyāliṅgaviḍidu kriyāniṣpattiliṅgasid'dhi, idu kāraṇa, kūḍalasaṅgamadēvā, liṅgaviḍidu liṅgasid'dhi!
Manuscript
English Translation 2 By aid of divine discipline Divine experience is attained; Divine experience is the means To action which the Rule demands; Through proper action you attain Transcendent action; and through that The consummation of all acts. Therefore, O Kūḍala Saṅgama Lord, By aid of Liṅga, Liṅga is attained! Translated by: L M A Menezes, S M Angadi
Hindi Translation आचारलिंग द्वारा अनुभावलिंग सिद्धि है, अनुभावलिंग द्वारा मार्गक्रियालिंग सिद्धि है, मार्गक्रियालिंग द्वारा श्रेष्ठ क्रियालिंग सिद्धि है, श्रेष्ठ क्रियालिंग द्वारा क्रिया निष्पत्तिलिंग सिद्धि है । अतः कूडलसंगमदेव, लिंग द्वारा लिंग सिद्धि है ॥ Translated by: Banakara K Gowdappa
Tamil Translation நன்னெறியைப் பின்பற்றி இலிங்கத்தை உணர்ந்தேன், இலிங்கத்தை உணர்ந்ததால் மூன்று நிலைகளை அடைந்தேன், அதன் பிறகு பிராணலிங்கி, சரணன், ஐக்கிய நிலைகளை அடைந்தேன் இதனால் மிக உயரிய நிலையான அனுபவம் செயலில் வெளிப்படும் நிலையை அடைவது எனவே கூடல சங்கமதேவனே இலிங்கத்தைப் பிடித்து இலிங்கத்தை உணர்ந்தேன் Translated by: Smt. Kalyani Venkataraman, Chennai
Marathi Translation आचार लिंगामुळे अनुभावलिंग सिध्दी. अनुभाव लिंगामुळे मार्गक्रियालिंग सिध्दी होते. मार्ग क्रियालिंगामुळे महालिंग सिध्दी होते. महालिंगामुळे क्रियानिष्पत्तीलिंग सिध्दी होते. म्हणून कूडलसंमदेवा लिंगामुळे लिंग सिध्दी होते. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿಯಾಗುವುದೆಂದರೆ ಆಚರಣೆಯ ಮೂಲಕ ಒಂದು ತತ್ತ್ವ ವಿಶದಗೊಳ್ಳುವುದೆಂದರ್ಥ. ಆಮೂರ್ತತತ್ತ್ವಗಳು ಕ್ರಿಯಾರೂಪದಲ್ಲಿ ಅಳವಟ್ಟಾಗ ಆ ತತ್ತ್ವಗಳ ಸ್ವರೂಪ ಸ್ಫುಟಗೊಳ್ಳುತ್ತದೆ. ದಾನತತ್ತ್ವವನ್ನು ಕುರಿತು ದೀರ್ಘವಾಗಿ ಮತ್ತೆಯೂ ದೀರ್ಘತರವಾಗಿ ವಿವರಿಸುವುದಕ್ಕೆ ಬದಲಾಗಿ ಹಸಿದು ಬಂದವನಿಗೆ ಅನ್ನ ನೀರಿನಿಂದ ಉಪಚರಿಸುವ ಒಂದು ಸೇವಾವಕಾಶವನ್ನು ಒದಗಿಸಿ ಕೊಟ್ಟರೆ ಆ ದಾನತತ್ತ್ವದ ಶಬ್ದಾರ್ಥಜ್ಞಾನಕ್ಕಿಂತಲೂ ಮಿಗಿಲಾದ ಹಿಂದು ಅನುಭಾವ ಉಂಟಾಗುತ್ತದೆ. ಈ ವಿಧವಾದ ಅನುಭಾವವೆ ಅಚ್ಚ ಜೀವನದರ್ಶನ –ಮಿಕ್ಕ ವಿವರಣಗಳೆಲ್ಲ ಆ ಜೀವನವನ್ನು ಕುರಿತ ಅಂತೆಕಂತೆಗಳಷ್ಟೆ. ಆದ್ದರಿಂದಲೇ ಬಸವಣ್ಣನವರು ಹೇಳುತ್ತಾರೆ : ನೀನು ಅನುಭಾವಿಯಾಗಬೇಕೋ –ಕ್ರಿಯೆಗಳನ್ನು ಕೌಶಲ್ಯದಿಂದ ಮಾಡು. ಆ ಮೂಲಕವೇ ನಿನ್ನ ಪ್ರಸ್ತುತಕಾಲದವರೆಗಿನ ಮಾನವ ಮಹಾಸಾಹಸಗಳನ್ನು ನೀನು ಅರಿತಂತಾಗುತ್ತದೆ, ಮತ್ತು ಅದನ್ನು ಮುಂದುವರೆಸಲು ನಿನ್ನ ಪಾಲಿನ ಕಾಣಿಕೆಯನ್ನೂ ನೀನು ಕೊಡಲನುವಾಗುತ್ತದೆ-ಎಂದು. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ -ಭಕ್ತನು ಮಹಾವಿಚಾರ ಪಂಥದಲ್ಲಿ ಪ್ರವಾಸ ಹೊರಟ ಒಬ್ಬ ಸಾಹಸಿ ಎಂಬುದನ್ನು. ನಡೆದುಬಂದೊಂದು ಸಿದ್ಧಾಂತಕ್ಕೆ ಕಾಲಕ್ರಮದಲ್ಲಿ ಕೆಲವು ಆಕ್ಷೇಪಗಳು ಬರುವವು. ಆ ಹಿನ್ನೆಲೆಯಲ್ಲಿ ಹೊಸ ಪ್ರಮೇಯವೊಂದು ಹುಟ್ಟಿಕೊಂಡು -ಹಿಂದಿನ ಸಿದ್ಧಾಂತ ಪರಿಷ್ಕಾರಗೊಳ್ಳುವುದು. ಹೀಗೆ ಚಿಂತನಶೀಲ ಮಾರ್ಗದಲ್ಲಿ ಸತ್ಯವು ನಿರಂತರವಾಗಿ ನವೋನವೀನವಾಗಿ ಅವಿಷ್ಕರಣಗೊಳ್ಳುತ್ತಲೇ ಇರುವುದು. ಅದೇ ಸತ್ಯದ ಘನತೆ ಮತ್ತು ದ್ರುವತೆ ಕೂಡ. ವಿ : (1) ಹಿಂದಿನವರು ಹೇಳಿದ ಆಚರಣೆಗಳನ್ನು ಆಚರಿಸಿ ಅವರ ವಿಚಾರಪ್ರಗತಿಯ ಘಟ್ಟವನ್ನು ಗುರುತಿಸಿಕೊಳ್ಳುವುದು ಮಾರ್ಗಕ್ರಿಯಾಲಿಂಗಸಿದ್ಧಿ. (2) ಅಲ್ಲಿಂದ ಮುಂದಕ್ಕೆ ಭಕ್ತನು ತನ್ನದೇ ಆದ ವಿಚಾರಗಳಿಗೆ ತಕ್ಕ ಆಚರಣೆಗಳನ್ನು ಜೋಡಿಸಿ ಆ ಆಚರಣೆಗಳ ಅಖಂಡತೆಯನ್ನು ಗುರುತಿಸಿಕೊಲ್ಳುವುದೇ ಮೀರಿದ ಕ್ರಿಯಾಲಿಂಗಸಿದ್ಧಿ. ಈ ಮೀರಿದ ಕ್ರಿಯಾಲಿಂಗವಿಡಿದು ಪಡೆಯುವ ನಿಮಗ್ನಸ್ಥಿತಿಯೇ ಕ್ರಿಯಾನಿಃಪತಿಲಿಂಗಸಿದ್ಧಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು