ಮಧ್ಯಪಿಂಡಂಗಳೆಲ್ಲವೂ ಶಿವನಿದ್ದೆಡೆಯನರಿಯವು;
ಪೂರ್ವಪಿಂಡಂಗಳೆಲ್ಲವೂ ಶಿವನಾದ್ಯಂತವನರಿಯವು;
ಕಾಲಪಿಂಡಂಗಳೆಲ್ಲವೂ ಶಿವನ ನಿಲುಗಡೆಯನರಿಯದೆ
ಕಾಲಚಕ್ರದೊಳಗಾದುವೆಲ್ಲವೂ!
ಸಂಶಯಪಿಂಡಂಗಳೆಲ್ಲವ ಮರೆದು
ನಿಮ್ಮ ಶರಣ ಸೇವೆಯಲ್ಲಿರಿಸಯ್ಯಾ, ಕೂಡಲಸಂಗಮದೇವಾ.
Transliteration Madhyapiṇḍaṅgaḷellavū śivaniddeḍeyanariyavu;
pūrvapiṇḍaṅgaḷellavū śivanādyantavanariyavu;
kālapiṇḍagaḷellavū śivana nilugaḍeyanariyade
kālacakradoḷagāḍuvellavū!
Sanśayapiṇḍaṅgaḷellava maredu
nim'ma śaraṇara sēveyallirisayyā, kūḍalasaṅgamadēvā.
Manuscript
English Translation 2 The middle bodies cannot know
Where Śiva dwells;
Nor can the bygone bodies know
Śiva's beginning or his end;
Since bodies born in time can never know
Śiva's full majesty, they're all
Subject to time and to the curse of birth!
O Kūḍala Saṅgama Lord, make me to live
To serve ThyŚaraṇa ,
Oblivious of the body prove to doubt!
Translated by: L M A Menezes, S M Angadi
Hindi Translation समस्त मध्यपिंड शिव-स्थान नहीं जानते ।
समस्त पूर्वपिंड शिव का आद्यंत नहीं जानते ।
समस्त कालपिंड शिव-स्थान नहीं जानते ।
सब कालचक्र में विलीन हुए ।
इन संशय-पिंडों को भुलाकर
कूडलसंगमदेव, निज शरणों की सेवा में रखो ॥
Translated by: Banakara K Gowdappa
Telugu Translation మధ్య పిండములకు శివుడున్నచోటు తెలియదు;
తొలి పిండములు శివుని ఆద్యంతము లెరుగవు;
కాలపిండములు స్వామి నిలుకడ చూడవు
కాలచక్రమున కివి లోనయ్యె యీ సంశయ పిండముల మఱువ
నీ శరణుల సేవ నిల్పుమయ్యా కూడల సంగయ్యా!
Translated by: Dr. Badala Ramaiah
Tamil Translation மனிதர்கள் சிவன் உள்ள இடத்தை அறியார்
தேவதைகள் சிவனின் முதல், முடிவை அறியார்
மற்ற உயிர்கள் சிவன் இருக்குமிடத்தை அறியாது
பிறவிச்சக்கரத்தில் ஆட்பட்டனர்
ஐயமுற்றோர் அனைத்தையும் மறந்தனர்
கூடல சங்கமதேவனே, உம் அடியாரின்
தொண்டிலே இடுவாய் ஐயனே
Translated by: Smt. Kalyani Venkataraman, Chennai
Marathi Translation
मध्यशरीर शिवाचे स्थान जाणत नाही.
पूर्वशरीर शिवाचे आदि-अंत जाणत नाही.
ज्योतिषी सर्व शिवाचा महिमा जाणत नाही.
हे सगळे कालचक्राच्या आधीन आहेत.
संशय लोकांना विसरुन
आमच्या शरणांची संगात ठेवावे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನೆಲ್ಲಿರುವನು, ಅವನ ಸ್ವರೂಪವೇನು ಎಂಬ ಶಿವಜ್ಞಾನವನ್ನು ಮಧ್ಯಮ(ಸಾಧಾರಣ)ಗಾಮಿಗಳು, ಸನಾತನಿ(ಪೂರ್ವಪಿಂಡ)ಗಳು, ಕಾಲಪ್ರವಾಹದಲ್ಲಿ ಕೊಚ್ಚಿ ಹೋಗುವ ಜೊಳ್ಳು ಪೊಳ್ಳು (ಕಾಲಪಿಂಡ)ಗಳು ತಿಳಿಯಲಾರದೇ ಹೋದರು. ಅವರೆಲ್ಲರೂ ತಂತಮ್ಮ ಪರಿಮಿತಿಗಳಿಂದ ಹೊರಬರಲಾರದೆ ಸಂಶಯದ ಮುದ್ದೆಗಳಾಗಿ ಉರುಳಿ ಹೋದರು. ಅವರಂತೆ ತಟಸ್ಥತೆಯಲ್ಲಿಯೇ ಗೊಡ್ಡುತನದಲ್ಲಿಯೇ ಮತ್ತು ನಿರರ್ಥಕತೆಯಲ್ಲಿಯೇ ಜನ್ಮವನ್ನು ನೀಗಿಕೊಳ್ಳದೆ -ಶಿವನು ತನ್ನ ಹೃದಯದಲ್ಲಿ ಇರುವನೆಂದೂ, ಹಾಗೆಯೇ ಸರ್ವರಲ್ಲಿಯೂ ಇರುವನೆಂದೂ, ಎಲ್ಲರೂ ಸಮಾನ ಮತ್ತು ಸಮಾನವಾಗಿ ಉದ್ಧಾರವಾಗಬಲ್ಲರೆಂದೂ ತಿಳಿದು ಆ ನೇರಕ್ಕೆ ದಾಸೋಹತತ್ಪರವಾಗಿರುವ ಶಿವಶರಣರನ್ನು ಒಲಿಸಿಕೊಳ್ಳಬೇಕೆಂದೂ, ಆ ಶರಣರ ಕನಸು ನನಸಾಗಲು ಬೆಂಬಲಿಸಬೇಕೆಂದೂ ಬಸವಣ್ಣನವರು ಕರೆಯುತ್ತಿರುವರು.
ವಿ : (1) ಪಿಂಡವೆಂದರೆ ಜೀವನೆಂದು ಅರ್ಥೈಸುವುದು ಸರಿಯೇ ಆದರೂ –ಈ ವಚನದಲ್ಲಿರುವ ಮಧ್ಯಪಿಂಡ ಪೂರ್ವಪಿಂಡ ಮುಂತಾದ ಪಿಂಡಪದಗಳನ್ನು ಷಟ್ಸ್ಥಲ ಶಾಸ್ತ್ರದಲ್ಲಿ ಬಳಕೆಯಾಗುವ ಆದಿಪಿಂಡ(ಜೀವಪಿಂಡ) –ಮಧ್ಯಪಿಂಡ(ಸುಜ್ಞಾನಪಿಂಡ) –ಅನಾದಿಪಿಂಡ(ಚಿತ್ಪಿಂಡ) ಎಂಬಂತೆ ಆ ಜೀವರ ತಾರತಮ್ಯಾರ್ಥದಲ್ಲಿ ಅರ್ಥೈಸಲಾಗದು. ಏಕೆಂದರೆ (ಸುಜ್ಞಾನಪಿಂಡದೊಡನೆ ಸಮೀಕೃತವಾಗುವ) ಮಧ್ಯಪಿಂಡವು ಶಿವನಿದ್ದೆಡೆಯನರಿಯದು ಎಂದು ಬಸವಣ್ಣನವರು ಈ ವಚನದಲ್ಲಿ ಅಭಿಪ್ರಾಯಪಟ್ಟಿರುವರೆನ್ನುತ್ತ ಪೂರ್ವ ಪಿಂಡ ಶಬ್ದವನ್ನು ಆದಿಪಿಂಡವೆಂದೂ, ಕಾಲಪಿಂಡ ಶಬ್ದವನ್ನು ಚಿತ್ಪಿಂಡವೆಂದೂ ಸಮೀಕರಿಸಿಕೊಂಡರೆ ಅಬದ್ಧವಾಗುವುದು. ಆದ್ದರಿಂದ ಬಸವಣ್ಣನವರು ಇಲ್ಲಿ ಪಿಂಡಶಬ್ದವನ್ನು ಅಪಾರಿಭಾಷಿಕವಾಗಿ ವ್ಯರ್ಥಜೀವರ ನಾನಾ ಪ್ರಕಾರದೊಡನೆ ಸಮೀಕರಿಸಿ ಹೇಳಿರುವರೆಂದು ನಿರ್ಣಯಿಸಬೇಕಾಗುವುದು. (2) ಮಧ್ಯಪಿಂಡವೆಂದರೆ ವೈಚಾರಿಕಪ್ರವೃತ್ತಿಯಿಲ್ಲದ ಅಲಸಿಗಳೆಂದೂ, ಪೂರ್ವಪಿಂಡವೆಂದರೆ ಸಂಪ್ರದಾಯಗಳಿಗೇ ಅಂಟಿಕೊಂಡಿರುವ ಮೂಢರೆಂದೂ, ಕಾಲಪಿಂಡವೆಂದರೆ ಹೊತ್ತು ಬಂದ ಕಡೆ ಕೊಡೆಹಿಡಿಯುತ್ತ ಹೊರಿಸಿಕೊಂಡು ಹೋದವರೆಂದೂ, ಸಂಶಯಪಿಂಡವೆಂದರೆ ಆಶೆಪ್ರತ್ಯಾಶೆಗಳಿಗೆ ಮಿಸುಕಲೂ ಅಂಜುವ ಸಂಶಯಾತ್ಮರೆಂದೂ ತಿಳಿಯಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು